ಪ್ರಿ ರಿಲೀಸ್ ಬ್ಯುಸಿನೆಸ್‌ನಲ್ಲೂ ಚಿರಂಜೀವಿ, ಬಾಲಯ್ಯ ಫೈಟ್: ಗೆದ್ದೋರು ಯಾರು?
'ಸಂಕ್ರಾಂತಿ' ಹಬ್ಬಕ್ಕೆ ಟಾಲಿವುಡ್‌ನಲ್ಲಿ ಈ ಮಟ್ಟಿಗೆ ಕಾಂಪಿಟೇಷನ್ ಇರುತ್ತೆ ಅನ್ನೋದು ಯಾರೂ ಊಹಿಸಿರಲಿಕ್ಕೂ ಸಾಧ್ಯವಿಲ್ಲ. ತೆಲುಗಿನ ಮೂರು ಪ್ರಮುಖ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿಯ 'ವಾಲ್ಟೈರ್ ವೀರಯ್ಯ' ಹಾಗೂ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಈ ಎರಡು ಸಿನಿಮಾಗಳು ಪ್ರಮುಖ. ಇಬ್ಬರು ಸಂಪ್ರದಾಯಿಕ ಎದುರಾಳಿಗಳು ಸಂಕ್ರಾಂತಿ ಹಬ್ಬದಂದು ಅಖಾಡಕ್ಕಿಳಿಯುತ್ತಿವೆ. ಥಿಯೇಟರ್‌ನಲ್ಲಿ ನಾನಾ..? ನೀನಾ? ಅಂತ ಸೆಣೆಸಾಡಲಿವೆ. ಆದರೆ ಥಿಯೇಟರ್‌ಗೆ ಬರುವುದಕ್ಕೂ ಮುನ್ನ ಪ್ರಿ ರಿಲೀಸ್ ಬ್ಯುಸಿನೆಸ್‌ನಲ್ಲಿ ಕಾಂಪಿಟೇಷನ್‌ಗೆ ಇಳಿದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸೋಲಿನ ಸಕ್ಸಸ್ ಕಂಡಿದ್ದಾರೆ. ಹೀಗಾಗಿ 'ವಾಲ್ಟೈರ್ ವೀರಯ್ಯ' ಮೇಲೆ ನಿರೀಕ್ಷೆಯಿದೆ. ಇನ್ನೊಂದು ಕಡೆ ಬಾಲಕೃಷ್ಣ 'ಅಖಂಡ' ಸಿನಿಮಾದಿಂದ ಸಖತ್ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ 'ವೀರ ಸಿಂಹ ರೆಡ್ಡಿ' ಮೇಲೂ ವಿತರಕರು ಕಣ್ಣಿಟ್ಟಿದ್ದಾರೆ.
ಚಿರಂಜೀವಿ ಸಿನಿಮಾ ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸೋತಿದ್ದರೂ ಪ್ರಿ ರಿಲೀಸ್ ಬ್ಯುಸಿನೆಸ್ ಅದ್ಭುತವಾಗಿದೆ. ಟಾಲಿವುಡ್ ಮೂಲಗಳ ಪ್ರಕಾರ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸುಮಾರು 72.50 ಕೋಟಿ ರೂಪಾಯಿ ಪ್ರಿ ಬ್ಯುಸಿನೆಸ್ ಮಾಡಿದೆ. ಬೇರೆ ರಾಜ್ಯಗಳಿಂದ ಸುಮಾರು 6.50 ಕೋಟಿ ರೂ. ಹಾಗೇ ಓವರ್‌ಸೀಸ್ ರೈಟ್ಸ್ 9 ಕೋಟಿ ರೂ. ಒಟ್ಟು 88 ಕೋಟಿ ರೂ. ಬ್ಯುಸಿನೆಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಇತ್ತ ಬಾಲಯ್ಯನ ಸಿನಿಮಾ 'ವೀರ ಸಿಂಹ ರೆಡ್ಡಿ' ಕೂಡ ಪ್ರಿ ರಿಲೀಸ್ ಬ್ಯುಸಿನೆಸ್ ಚಿರಂಜಿವಿ ಸಿನಿಮಾಗಿಂತ ಕಮ್ಮಿಯಿದ್ದರೂ, ಲಾಭದಾಯಕ ಎನ್ನಲಾಗಿದೆ. 'ವೀರ ಸಿಂಹ ರೆಡ್ಡಿ' ಸಿನಿಮಾ ಆಂಧ್ರ ಹಾಗೂ ತೆಲಂಗಾಣದಲ್ಲಿ ಸುಮಾರು 61.80 ಕೋಟಿ ರೂ. ಪ್ರಿ ರಿಲೀಸ್ ಬ್ಯುಸಿನೆಸ್ ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ 5 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 6.50 ಕೋಟಿ ರೂ. ವಿಶ್ವದಾದ್ಯಂತ ಸುಮಾರು 73.30 ಕೋಟಿ ರೂ. ಪ್ರಿ ರಿಲೀಸ್ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ.

ಮೆಗಾಸ್ಟಾರ್ ಚಿರಂಜೀವಿ 'ವಾಲ್ಟೈರ್ ವೀರಯ್ಯ' ಬಾಲಕೃಷ್ಣ ಸಿನಿಮಾ 'ವೀರ ಸಿಂಹ ರೆಡ್ಡಿ'ಗಿಂತ ಕೊಂಚ ಕಡಿಮೆ ವ್ಯಾಪಾರ ಮಾಡಿದೆ. ಆದರೂ, ಮೆಗಾಸ್ಟಾರ್ ಸ್ಟಾರ್ ಡಮ್‌ಗೆ ಇದು ಕಮ್ಮಿನೇ ಎಂದು ಅಂದಾಹಿಸಲಾಗಿದೆ. ಅಲ್ಲದೆ ಬಾಲಯ್ಯ ಸಿನಿಮಾಗೆ ಇದು ಬಂಪರ್ ಎಂದು ಟ್ರೇಡ್ ಅನಲಿಸ್ಟ್‌ಗಳು ಹೇಳುತ್ತಿದ್ದಾರೆ.


Click it and Unblock the Notifications










