ಅಕ್ಕಿನೇನಿ ಕುಟುಂಬದ ಬಳಿ ಇರುವ ಒಟ್ಟು ಆಸ್ತಿ ₹3654 ಕೋಟಿ; ನಾಗಾರ್ಜುನ, ನಾಗಚೈತನ್ಯ ಪಾಲು ಎಷ್ಟು?

ಟಾಲಿವುಡ್‌ನ ದಿಗ್ಗಜರ ಮನೆತನದಲ್ಲಿ ಅಕ್ಕಿನೇನಿ ಕುಟುಂಬ ಕೂಡ ಒಂದು. ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ತೆಲುಗು ಚಿತ್ರರಂಗದಲ್ಲಿ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಹೋಗಿದ್ದಾರೆ. ಅದನ್ನೀಗ ನಾಗಾರ್ಜುನ ರಕ್ಷಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಎರಡನೇ ಬಾರಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಇವರ ಆಸ್ತಿಯ ಮೇಲೆ ಮತ್ತೆ ಚರ್ಚೆ ಶುರುವಾಗಿದೆ.

ನಾಗಚೈತನ್ಯ ಮೊದಲನೇ ಪತ್ನಿಯ ಪುತ್ರಿ ನಾಗ ಚೈತನ್ಯ ನಟಿ ಸಮಂತಾಗೆ ವಿಚ್ಛೇದನ ನೀಡಿದ ದಿನದಿಂದ ಸುದ್ದಿಯಲ್ಲಿದ್ದಾರೆ. ಈಗ ತೆಲುಗು ಮೂಲದ ನಟಿ ಶೋಭಿತಾ ಧುಲಿಪಾಲಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿದ್ದಂತೆ ಅಕ್ಕಿನೇನಿ ಕುಟುಂಬ ಆಸ್ತಿ ಎಷ್ಟು? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

What is the share of Naga Chaitanya in the property worth 3654 crore rupees with Nagarjuna

ಅಕ್ಕಿನೇನಿ ಕುಟುಂಬದ ಹೀರೋಗಳು ಸೇರಿಕೊಂಡು ಆಸ್ತಿಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿದ್ದಾರೆ. ಆದರೆ, ಸಮಂತಾ ಈ ಕುಟುಂಬದಿಂದ ಹೊರ ಹೋದಾಗ ಇವರ ಒಟ್ಟಿ ಆಸ್ತಿಯ ಮೌಲ್ಯದಲ್ಲಿ ಇಳಿಕೆ ಕಂಡಿದೆ ಎನ್ನಲಾಗಿದೆ. ಹಾಗಂತ ಸಮಂತಾ ಈ ಕುಟುಂಬದಲ್ಲಿ ಒಂದು ರೂಪಾಯಿ ಜೀವನಾಂಶವನ್ನೂ ಪಡೆದಿಲ್ಲ. ತಾನು ಸಂಪಾದಿಸಿದ ಹಣ ಆಕೆಯೊಂದಿಗೆ ವಾಪಾಸ್ ಹೋಗಿದೆಯಷ್ಟೆ.

ಸಮಂತಾ ಬಳಿಕ ಸುಮಾರು 100 ಕೋಟಿ ರೂಪಾಯಿ ಇದ್ದು, ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬದ ಒಟ್ಟು ಆಸ್ತಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಕಮ್ಮಿಯಾಗಿದೆ. ಸದ್ಯ ಅಕ್ಕಿನೇನಿ ಕುಟುಂಬದ ಒಟ್ಟು ಆಸ್ತಿ ಸುಮಾರು 3654 ಕೋಟಿ ರೂಪಾಯಿ ಎಂದು ಕೋಯ್‌ಮೋಯ್ ವರದಿ ಮಾಡಿದೆ. ಇದರಲ್ಲಿ ಅಕ್ಕಿನೇನಿ ನಾಗಾರ್ಜುನ ಪಾಲು ಬಹಳಷ್ಟು ದೊಡ್ಡದಿದೆ.

What is the share of Naga Chaitanya in the property worth 3654 crore rupees with Nagarjuna

ನಾಗಾರ್ಜುನ, ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಈ ಮೂವರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆ ಬೇರೆ ಕಡೆಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ಅಕ್ಕಿನೇನಿ ಕುಟುಂಬದ ಈ ಮೂವರು ಹೀರೋಗಳು ಒಟ್ಟು ಆಸ್ತಿಯೀಗ ಸದ್ಯಕ್ಕೆ 3654 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಹಾಗಿದ್ದರೆ, ಇದರಲ್ಲಿ ನಾಗಾರ್ಜುನಾ, ನಾಗಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಪಾಲು ಎಷ್ಟು ಅನ್ನೋದನ್ನು ತಿಳಿಯೋಣ.

ಆಸ್ತಿಯ ಲೆಕ್ಕಾಚಾರದಲ್ಲಿ ಸಮಂತಾ ಮುಂದೆ ಶೋಭಿತಾ ಧುಲಿಪಾಲಾ ಏನೂ ಇಲ್ಲ. ಶೋಭಿತಾ ಬಳಿಕ 7 ರಿಂದ 10 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಕೂಡ ಟಾಲಿವುಡ್‌ನಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈತನ್ನ ಒಟ್ಟು ಆಸ್ತಿ 59 ಕೋಟಿ ರೂಪಾಯಿ ಎನ್ನಲಾಗಿದೆ.

ನಾಗ ಚೈತನ್ಯ ಬಳಿ ದೊಡ್ಡ ಮೊತ್ತದ ಆಸ್ತಿಯೇ ಇದೆ. ಹೇಳಿಕೊಳ್ಳುವಂತಹ ಮೆಗಾ ಸಿನಿಮಾಗಳಲ್ಲಿ ನಟಿಸದೇ ಹೋದರೂ, ನಾಗಚೈತನ್ಯಗೆ ಅವಕಾಶವೇನು ಕಮ್ಮಿಯಿಲ್ಲ. ಒಂದು ಸಿನಿಮಾ ಸುಮಾರು 8 ರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸದ್ಯ ನಾಗ ಚೈತನ್ನು ಬಳಿ ಸುಮಾರು 154 ಕೋಟಿ ರೂಪಾಯಿ ಆಸ್ತಿಯಿದೆ ಎನ್ನಲಾಗಿದೆ.

ಇನ್ನು ಅಕ್ಕಿನೇನಿ ಕುಟುಂಬದಲ್ಲಿ ಅತಿ ಹೆಚ್ಚು ಆಸ್ತಿಯನನ್ನು ಹೊಂದಿರುವುದು ನಾಗಾರ್ಜುನ. ಅಕ್ಕಿನೇನಿ ನಾಗೇಶ್ವರ್ ರಾವ್ ಪುತ್ರ ನಾಗಾರ್ಜುನ ಬಳಿ ಸುಮಾರು 3441 ಕೋಟಿ ರೂಪಾಯಿ ಆಸ್ತಿಯಿದೆ. ಕುಟುಂಬ ಹೆಚ್ಚು ಆದಾಯ ಅವರ ಅನ್ನಪೂರ್ಣ ಸ್ಟುಡಿಯೋದಿಂದ ಹೆಚ್ಚಾಗಿ ಬರುತ್ತಿದೆ. ಸುಮರು 22 ಎಕರೆ ವಿಸ್ತೀರ್ಣದಲ್ಲಿ ಅನ್ನ ಪೂರ್ಣ ಸ್ಟುಡಿಯೋ ಎದ್ದು ನಿಂತಿದೆ. ಇದರಲ್ಲಿ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳ ಶೂಟಿಂಗ್ ನಡೆಯುತ್ತವೆ. ಇಷ್ಟೇ ಅಲ್ಲದೆ ಜ್ಯುಬಿಲಿ ಹಿಲ್ಸ್‌ನಲ್ಲಿ ಇವರದ್ದು ಒಂದು ಭವ್ಯ ಗಂಬಲೆಯಿದೆ. ಇದರ ಬೆಲೆ ಸುಮಾರು 43 ರಿಂದ 45 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

More from Filmibeat

English summary
Akkineni family property net worth and Naga Chaitanya share.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X