'ಪುಷ್ಪ 2'ದಲ್ಲಿ ಶ್ರೀವಲ್ಲಿ ಸಾಯೋದು ನಿಜವೇ? ವೈರಲ್ ಫೋಟೊ ಹಿಂದಿನ ಹೊಸ ಲೆಕ್ಕಾಚಾರವೇನು?

ರಶ್ಮಿಕಾ ಮಂದಣ್ಣ ಹೆಸರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತೆ. ಅದು ಪಾಸಿಟಿವ್ ಆಗಿರಲಿ. ಇಲ್ಲವೇ ನೆಗೆಟಿವ್ ಆಗಿರಲಿ. ಅದೂ ಇಲ್ಲ ಅಂತ ಸಿನಿಮಾ ವಿಷಯಕ್ಕಾದರೂ ರಶ್ಮಿಕಾ ಮಂದಣ್ಣ ಚರ್ಚೆಯಲ್ಲಿ ಇದ್ದೇ ಇರುತ್ತಾರೆ.

ಕೆಲವು ದಿನಗಳಿಂದ 'ಪುಷ್ಪ 2' ಸಿನಿಮಾದ ರಶ್ಮಿಕಾ ಮಂದಣ್ಣ ಪಾತ್ರ ಶ್ರೀವಲ್ಲಿ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದ ಕೊಲೆಯಾಗುತ್ತೆ. ಈ ಮೂಲಕ ರಶ್ಮಿಕಾ ಮಂದಣ್ಣ ಪಾತ್ರ ಕೊನೆಯಾಗುತ್ತೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು.

ಈ ವಿಷಯಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಫೋಟೊವೊಂದು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ನಟಿಸಿದ ಶ್ರೀವಲ್ಲಿ ಪಾತ್ರ ಸಾವನ್ನಪ್ಪಿದ ಫೋಟೊ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಚರ್ಚೆ ಶುರುವಾಗಿತ್ತು. ಆದ್ರೀಗ ಟಾಲಿವುಡ್‌ನಲ್ಲಿ ಈ ವೈರಲ್ ಫೋಟೊ ಬಗ್ಗೆ ಹೊಸ ಥಿಯೆರಿಯೊಂದು ಹುಟ್ಟಿಕೊಂಡಿದೆ. ಅದೇನು? ವೈರಲ್ ಆದ ಫೋಟೊ ಅಸಲಿಯೇ? ಅನ್ನೋದನ್ನು ತಿಳಿಯಲು ಮುಂದೆ ಓದಿ.

what is the truth behind Viral Photo Of rashmika mandanna character death in pushpa 2

'ಪುಷ್ಪ 2' ನಲ್ಲಿ ಶ್ರೀವಲ್ಲಿ ಪಾತ್ರ ಸಾಯುತ್ತೆ?

ಸೋಶಿಯಲ್ ಮೀಡಿಯಾದಲ್ಲಿ 'ಪುಷ್ಪ 2' ಸಿನಿಮಾದ್ದು ಎನ್ನಲಾದ ವೈರಲ್ ಫೋಟೊ ಬಗ್ಗೆ ಚರ್ಚೆ ಆರಂಭ ಆಗಿದೆ. ಜನರು ಕೂಡ ಈ ಫೋಟೊ ನೋಡಿ 'ಪುಷ್ಪ 2' ಶ್ರೀವಲ್ಲಿ ಪಾತ್ರ ಕೊನೆಗೊಳ್ಳುತ್ತೆ. ಶ್ರೀವಲ್ಲಿಯನ್ನು ಯಾರೋ ಸಾಯಿಸುತ್ತಾರೆ ಅನ್ನೋದನ್ನೇ ನಂಬಿದ್ದಾರೆ.

ಶ್ರೀವಲ್ಲಿ ಪಾತ್ರ 'ಪುಷ್ಪ 2' ಸಿನಿಮಾದ ಹೈಲೈಟ್. ಪುಷ್ಪರಾಜ್ ಪಾತ್ರದ ಜೊತೆಯಲ್ಲಿ ಸಾಗುವ ಪ್ರಮುಖ ಪಾತ್ರಗಳಲ್ಲಿ ಶ್ರೀವಲ್ಲಿ ಕೂಡ ಇದ್ದಾಳೆ. ಮೊದಲ ಚಾಪರ್‌ನಲ್ಲಿ ಶ್ರೀವಲ್ಲಿ ಹಾಡುಗಳು, ಡ್ಯಾನ್ಸ್ ಮೂವ್ಮೆಂಟ್ ಎಲ್ಲವೂ ವೈರಲ್ ಆಗಿತ್ತು. ಆದ್ರೀಗ ಶ್ರೀವಲ್ಲಿ ಪಾತ್ರ ಸತ್ತಿರೋ ಫೋಟೊ ವೈರಲ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರಗೊಂಡಿದ್ದರು. ಆದ್ರೀಗ ಆ ಪೋಟೊದ ಅಸಲಿ ಕಥೆಯ ಬಗ್ಗೆ ಟಾಲಿವುಡ್‌ನಲ್ಲಿ ವರದಿಯಾಗಿದೆ.

ಈ ಫೋಟೊ ಅಸಲಿಯೋ? ನಕಲಿಯೋ?

ಲೀಕ್ ಆಗಿದೆ ಎನ್ನಲಾದ 'ಪುಷ್ಪ 2' ಸಿನಿಮಾ ವೈರಲ್ ಫೋಟೊದ ಅಸಲಿಯತ್ತೇನು? ನಿಜಕ್ಕೂ 'ಪುಷ್ಪ 2' ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಸಾಯುತ್ತಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ವೈರಲ್ ಆದ ಫೋಟೊದ ಅಸಲಿಯತ್ತನ್ನು ಹುಡುಕೋಕೆ ಟಾಲಿವುಡ್ ಮುಂದಾಗಿದೆ. ಸದ್ಯ ವೈರಲ್ ಆದ ಫೋಟೊ 'ಪುಷ್ಪ 2' ಸಿನಿಮಾದ್ದು ಅಲ್ಲವೇ ಅಲ್ಲ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ.

ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ವೈರಲ್ ಆಗಿರೋ ಶ್ರೀವಲ್ಲಿ ಸಾವಿನ ಪೋಟೊ ಮರಾಠಿ ಸಿನಿಮಾದ್ದು ಎನ್ನಲಾಗಿದೆ. ಆ ಸಿನಿಮಾದಲ್ಲಿ ನಟಿಸಿರೋ ನಟಿ ನೋಡುವುದಕ್ಕೆ ಥೇಟ್ ರಶ್ಮಿಕಾರಂತೆಯೇ ಕಾಣುತ್ತಿದ್ದಾರೆ. ಹೀಗಾಗಿ ಈ ಪೋಟೊ 'ಪುಷ್ಪ 2' ಸಿನಿಮಾದ್ದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂಬುದು ಟಾಲಿವುಡ್ ವಾದ.

what is the truth behind Viral Photo Of rashmika mandanna character death in pushpa 2

'ಪುಷ್ಪ 2' ಟೀಮ್ ಸೈಲೆಂಟ್

ಶ್ರೀವಲ್ಲಿ ಪಾತ್ರ ಸಾವಿನ ಬಗ್ಗೆ ಫೋಟೊ ವೈರಲ್ ಆಗುತ್ತಿದ್ದರೂ, ಚಿತ್ರತಂಡ ಮಾತ್ರ ಸೈಲೆಂಟ್ ಆಗಿದೆ. ಹೀಗಾಗಿ ಅಭಿಮಾನಿಗಳು ಕೊಂಚ ಮಟ್ಟಿಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಫೋಟೊ ನಕಲಿಯಾಗಿದ್ದರೂ, ಕಥೆಯಲ್ಲಿ ನಿಜಕ್ಕೂ ಶ್ರೀವಲ್ಲಿ ಪಾತ್ರ ಸಾಯಬಹುದಾ? ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

'ಪುಷ್ಪ' ಸಿನಿಮಾದಲ್ಲಿ ಫಹಾದ್ ಫಾಸಿಲ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್ ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ 'ಪುಷ್ಪ 2' ಸಿನಿಮಾದಲ್ಲಿ ನಿರ್ದೇಶಕ ಸುಕುಮಾರ್ ಶ್ರೀವಲ್ಲಿ ಪಾತ್ರಕ್ಕೆ ಯಾವ ರೀತಿ ಟ್ವಿಸ್ಟ್ ಕೊಟ್ಟಿದ್ದಾರೋ ಅನ್ನುವ ಬಗ್ಗೆ ಚರ್ಚೆಯಾಗಿದೆ. ಸದ್ಯ ಈ ಗಾಸಿಪ್ ಬಗ್ಗೆ ಚಿತ್ರತಂಡ ಸೈಲೆಂಟ್ ಆಗಿದೆ.

More from Filmibeat

English summary
what is the truth behind Viral Photo Of Rashmika Mandanna character death in pushpa 2, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X