'ಅವರು ಹಾಗೆ ಮಾತಾಡಿದ್ದು, ಅದನ್ನು ವ್ಯಕ್ತಪಡಿಸಿದ್ದು ದೊಡ್ಡ ತಪ್ಪು': ವೆಂಕಟೇಶ್ ಮಹಾ ವಿವಾದಕ್ಕೆ ನಾನಿ ಖಂಡನೆ!
ಇತ್ತೀಚೆಗೆ ಟಾಲಿವುಡ್‌ನಲ್ಲಿ ಐದು ಮಂದಿ ನಿರ್ದೇಶಕರ ರೌಂಡ್ ಟೇಬಲ್ ಚರ್ಚೆ ವಿವಾದಕ್ಕೆ ತಿರುಗಿತ್ತು. ಟಾಲಿವುಡ್ ನಿರ್ದೇಶಕ ವೆಂಕಟೇಶ್ ಮಹಾ ಚರ್ಚೆಯೊಂದರಲ್ಲಿ ರಾಕಿ ಪಾತ್ರವನ್ನು ಟೀಕಿಸಿದ್ದರು. ಅಲ್ಲದೆ ರಾಕಿ ಪಾತ್ರವನ್ನು ಕುತ್ತೇ ಕಮೀನೆ ಅನ್ನೋ ಪದಗಳನ್ನು ಬಳಿಸಿದ್ದರು. ಈ ಟೀಕೆಗಳ ವಿರುದ್ಧ ವೆಂಕಟೇಶ್ ಮಹಾ ಫುಲ್ ಟ್ರೋಲ್ ಆಗಿದ್ದರು.
ವೆಂಕಟೇಶ್ ಮಹಾ ಜೊತೆ ಇನ್ನು ನಾಲ್ವರು ತೆಲುಗು ನಿರ್ದೇಶಕರು ಕೂಡ ಈತನ ಮಾತಿಗೆ ಖುಷಿ ಪಟ್ಟಿದ್ದರು. ಎರಡು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರೋ ವೆಂಕಟೇಶ್ ಮಹಾಗೆ 'ಕೆಜಿಎಫ್' ಸಿನಿಮಾದ ಅಭಿಮಾನಿಗಳು ಕಿಡಿಕಾರಿದ್ದಾರು. ರೌಂಡ್ ಟೇಬಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಐವರು ನಿರ್ದೇಶಕರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ಕೆಜಿಎಫ್ ಫ್ಯಾನ್ಸ್ ಅಷ್ಟೇ ಅಲ್ಲ, ಸೆಲೆಬ್ರೆಟಿಗಳು ಕೂಡ ವೆಂಕಟೇಶ್ ಮಹಾ ಹೇಳಿಕೆಯನ್ನು ಖಂಡಿಸಿದ್ದರು. ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಕೂಡ ಹಲವು ಬಾರಿ ಕಂಡಿಸಿದ್ದು ಇದೆ. ಈಗ ಗುಲ್ಟೇಗೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಕೆಜಿಎಫ್ ಬಗ್ಗೆ ಖಂಡಿಸಲು ಬಳಿಸಿದ ಪದಗಳು ತಪ್ಪು ಎಂದಿದ್ದಾರೆ.
ಕೆಜಿಎಫ್ ವಿವಾದದ ಬಗ್ಗೆ ನಾನಿ ಹೇಳಿದ್ದೇನು?
ಸಂದರ್ಶನದಲ್ಲಿ ಕೆಜಿಎಫ್ ಬಗ್ಗೆ ವೆಂಕಟೇಶ್ ಮಹಾ ಆಡಿದ ಮಾತುಗಳನ್ನು ಮತ್ತೆ ನಾನಿ ಖಂಡಿಸಿದ್ದಾರೆ. " ಅವರು ಹೇಳಿದ್ದು ಹಾಗೂ ಆಡಿದ ಮಾತುಗಳು ತುಂಬಾನೇ ತಪ್ಪು" ಎಂದು ನಾನಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
" ಅವರು ಹೇಳಿದ್ದೇನು ಅನ್ನೋದಕ್ಕೆ ಈಗಾಗಲೇ ವಿವರಣೆ ಕೊಟ್ಟಿದ್ದಾರೆ. ಸ್ನೇಹಿತರು ಸಿನಿಮಾ ನೋಡಿದ ಬಳಿಕ ಹೇಗೆ ಮಾತಾಡಿಕೊಳ್ಳುತ್ತಾರೋ ಹಾಗೆ ಮಾತಾಡಿದ್ದಾರೆ ಅಂತ ಅನಿಸಿತ್ತು. ಆದರೆ, ಇದು ಸಂದರ್ಶನದಲ್ಲಿ ನಡೆದಿದ್ದರಿಂದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರತಿಯೊಬ್ಬರು ಮಾತಾಡುವಾಗ ತುಂಬಾನೇ ಜಾಗರೂಕರಾಗಿ ಇರಬೇಕು." ಎಂದು ನಾನಿ ಅಭಿಪ್ರಾಯ ಪಟ್ಟಿದ್ದಾರೆ.

ಆ ನಿರ್ದೇಶಕರೆಲ್ಲರೂ ಓಳ್ಳೆಯರು
ನಾನಿ ವಿವಾದಾತ್ಮಕ ನಿರ್ದೇಶಕ ವೆಂಕಟೇಶ್ ಮಹಾ ಜೊತೆಗೆ ಉಳಿದ ನಿರ್ದೇಶಕ ಬಗ್ಗೆ ಸಹಾನುಭೂತಿ ತೋರಿಸಿದ್ದಾರೆ. "ವೆಂಕಟೇಶ್ ಮಹಾ ಪಕ್ಕದಲ್ಲಿ ಕೂತಿದ್ದ ವ್ಯಕ್ತಿ ಇದರಲ್ಲಿ ಸಿಕ್ಕಿಕೊಂಡಿದ್ದಕ್ಕೆ ಪಾಪ ಎನಿಸುತ್ತೆ. ಎಲ್ಲಿ ಕೂತಿದ್ದ ನಿರ್ದೇಶಕರೆಲ್ಲರೂ ನನಗೆ ಗೊತ್ತಿದೆ. ಅವರೆಲ್ಲರೂ ಮಾಸ್ ಸಿನಿಮಾ ಪ್ರೇಮಿಗಳು. ನಂದಿನಿ ರೆಡ್ಡಿ ಕೂಡ ಮಾಸ್ ಸಿನಿಮಾ ಸೀಟಿ ಹಾಕಿ ಎಂಜಾಯ್ ಮಾಡುತ್ತಾರೆ. 1000ದಲ್ಲಿ 990 ಮಂದಿ 10 ಸೆಕೆಂಡುಗಳ ಕ್ಲಿಪ್ ನೋಡಿ ಜಡ್ಜ್ ಮಾಡುತ್ತಿದ್ದಾರೆ." ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ವೆಂಕಟೇಶ್ ಮಹಾ ತಮಾಷೆಯಾಗಿ ವಿವರಿಸಿದ ರೀತಿ ಅವರೆಲ್ಲರನ್ನೂ ನಗುವಂತೆ ಮಾಡಿತ್ತು. ಉಳಿದ ನಿರ್ದೇಶಕರೆಲ್ಲರೂ ನನಗೆ ಗೊತ್ತು. ಅವರು ಎಲ್ಲಾ ತರಹದ ಸಿನಿಮಾಗಳನ್ನು ಪ್ರಶಂಸೆ ಮಾಡುತ್ತಾರೆ. ಅವರು RRR ಹಾಗೂ ಕೆಜಿಎಫ್ ಸಿನಿಮಾ ಮೇಕಿಂಗ್ ಟೆಕ್ನಿಕ್ ಹಾಗೂ ಕಟ್‌ಗಳ ಬಗ್ಗೆ ಮಾತಾಡಿದ್ದನ್ನು ನಾನು ನೋಡಿದ್ದೇನೆ. ಅವರೆಲ್ಲರೂ ಸ್ನೇಹಜೀವಿಗಳು ಎಂದೂ ನಾನಿ ಅಭಿಪ್ರಾಯ ಪಟ್ಟಿದ್ದಾರೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಕ್ಷಮೆ ಕೇಳಿದ್ದ ನಿರ್ದೇಶಕ
ನಿರ್ದೇಶಕ ವೆಂಕಟೇಶ್ ಮಹಾ ಕೆಜಿಎಫ್ ಸಿನಿಮಾವನ್ನು ಕಮೆಂಟ್ ಮಾಡಿತ್ತಿದ್ದಂತೆ, ಉಳಿದ ನಾಲ್ವರು ನಿರ್ದೇಶಕರು ಎಂಜಾಯ್ ಮಾಡಿದ್ದರು. ಈ ಕಾರಣಕ್ಕೆ ವೆಂಕಟೇಶ್ ಮಹಾ ಜೊತೆ ನಿರ್ದೇಶಕರಾದ ನಂದಿನಿ ರೆಡ್ಡಿ, ವಿವೇಕ್ ಆತ್ರೇಯ, ಮೋಹನ ಕೃಷ್ಣ ಇಂದ್ರಗಂಟಿ, ಶಿವನಿರ್ವಾಣ ನಡೆಯನ್ನು ಟೀಕಿಸಲಾಗಿತ್ತು.
ವಿವಾದ ದೊಡ್ಡದಾಗುತ್ತಿದ್ದಂತೆ ನಿರ್ದೇಶಕಿ ನಂದಿನಿ ರೆಡ್ಡಿ ತಮ್ಮ ನಡೆಗೆ ಕ್ಷಮೆ ಕೇಳಿದ್ದರು. ಆದರೆ, ವೆಂಕಟೇಶ್ ಮಹಾ ಮಾತ್ರ ಬಳಸಿದ ಪದಗಳ ಬಗ್ಗೆ ಕ್ಷಮೆ ಕೇಳಿ, ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದರು.


Click it and Unblock the Notifications











