Rashmika-Vijay Wedding: ಸೊಸೆಗೆ ಷರತ್ತು ಹಾಕಿದ್ದ ವಿಜಯ್ ಪೋಷಕರು; ಹಳೆ ವಿಡಿಯೋದಲ್ಲಿ ಏನಿತ್ತು?

ದಕ್ಷಿಣ ಭಾರತದ ಲವ್ ಬರ್ಡ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟಾಲಿವುಡ್‌ನಲ್ಲಂತೂ ಈ ಜೋಡಿ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಕೇವಲ ದಕ್ಷಿಣ ಭಾರತ ಅಷ್ಟೇ ಅಲ್ಲದೆ, ಬಾಲಿವುಡ್‌ನಲ್ಲಿಯೂ ಯಶಸ್ಸು ಕಂಡ ನಟಿ. ಇತ್ತ ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇವರಿಬ್ಬರ ಮದುವೆಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ಇಬ್ಬರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಫೆಬ್ರವರಿ 26 ರಂದು ಅವರಿಬ್ಬರ ವಿವಾಹ ಸಮಾರಂಭ ನಡೆಯಲಿದೆ. ಈಗಾಗಲೇ ಸ್ಟಾರ್ ಜೋಡಿಯ ವಿವಾಹವನ್ನು ಕಣ್ತುಂಬಿಕೊಳ್ಳುವುದಕ್ಕೆ ಬೇರೆ ಚಿತ್ರರಂಗದ ತಾರೆಯರು ರಾಜಸ್ಥಾನದ ಉದಯಪುರಕ್ಕೆ ಆಗಮಿಸುತ್ತಿದ್ದಾರೆ.

While Geetha Govindam Success Vijay Deverakonda parents to revealed conditions to marry him

ಒಂದ್ಕಡೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಈಗಾಗಲೇ ರಾಜಸ್ಥಾನ ತಲುಪಿದ್ದಾಗಿದೆ. ಒಂದ್ಕಡೆ ಮದುವೆ ಸಮಾರಂಭಗಳು ನಡೆಯುತ್ತಿರುವಾಗಲೇ ಇನ್ನೊಂದು ಕಡೆ ವಿಜಯ್ ಪೋಷಕರು ತಮ್ಮ ಭಾವಿ ಸೊಸೆಯ ಬಗ್ಗೆ ಷರತ್ತುಗಳನ್ನು ಹಾಕಿದ್ದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ವಿಜಯ್ ಪೋಷಕರ ಪ್ರಕಾರ, ಸೊಸೆ ಹೇಗಿರಬೇಕು? ವಿಜಯ್ ದೇವರಕೊಂಡ ಏನಂದಿದ್ರು? ಇಲ್ಲಿದೆ ಡಿಟೈಲ್ಸ್.

2018ರಲ್ಲಿ ತೆರೆಕಂಡಿದ್ದ 'ಗೀತಾ ಗೋವಿಂದಂ' ಸಿನಿಮಾ ವಿಜಯ್ ಹಾಗೂ ರಶ್ಮಿಕಾ ಇಬ್ಬರ ಬದುಕಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ. ಒಂದ್ಕಡೆ ವೃತ್ತಿ ಬದುಕು ಯಶಸ್ಸು ಕಂಡರೆ, ಇನ್ನೊಂದು ಕಡೆ ಲವ್ ಲೈಫ್‌ ಕೂಡ ಟ್ರ್ಯಾಕ್‌ಗೆ ಬಂದಿತ್ತು. ಈ ಕಾರಣಕ್ಕೆ ಇಬ್ಬರಿಗೂ ಈ ಸಿನಿಮಾ ತುಂಬಾನೇ ಸ್ಪೆಷಲ್. ಇದೇ ಸಿನಿಮಾ ಸಕ್ಸಸ್ ಕಂಡ ವೇಳೆ ವಿಜಯ್ ದೇವರಕೊಂಡ ಪೋಷಕರು ತಮ್ಮ ಭಾವಿ ಸೊಸೆಗೆ ಕೆಲವು ಷರತ್ತುಗಳನ್ನು ಹಾಕಿದ್ದರು. ಅದೇ ವಿಡಿಯೋ ಈಗ ಸದ್ದು ಮಾಡುತ್ತಿದೆ.

ವೈರಲ್ ಆಗುತ್ತಿರುವ ಹಳೇ ವಿಡಿಯೋದಲ್ಲಿ ವಿಜಯ್ ತಾಯಿ ಮಾಧವಿ ತಮ್ಮ ಭಾವಿ ಸೊಸೆ ಬಗ್ಗೆ ಹೀಗಂದಿದ್ದರು. "ನನಗೆ ಒಂದೇ ಒಂದು ಆಸೆ. ನನ್ನ ಮಗನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುವ ಹುಡುಗಿ ಸೊಸೆಯಾಗಿ ಬರಬೇಕು. ನನ್ನ ಮಗ ಸಿನಿಮಾ ಫೀಲ್ಡ್‌ನಲ್ಲಿ ಇರೋದ್ರಿಂದ ಅವನ ವೃತ್ತಿಯನ್ನು ಅರ್ಥಮಾಡಿಕೊಳ್ಳುವ ಮನಸ್ಸು ಬೇಕು. ಅವರಿಬ್ಬರೂ ಯಾವಾಗಲೂ ಸಂತೋಷದಿಂದ ಇರಬೇಕು" ಎಂದಿದ್ದರು.

ಇದೇ ಸಂದರ್ಭದಲ್ಲಿ ವಿಜಯ್ ದೇವರಕೊಂಡ ತಂದೆ ಗೋವರ್ಧನ್ ರಾವ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದರು. "ನನಗೆ ಇಂತಹದ್ದೇ ಜಾತಿ, ಧರ್ಮದವರಾಗಿರಬೇಕು ಎಂಬ ಯಾವುದೇ ನಿರೀಕ್ಷೆಗಳಿಲ್ಲ. ನನ್ನ ಮಗ ಯಾರನ್ನು ಪ್ರೀತಿಸುತ್ತಾರೋ ಅವರನ್ನೇ ಮದುವೆಯಾಗಬೇಕು. ಆದರೆ, ಭಾರತೀಯ ಹುಡುಗಿಯಾಗಿದ್ದರೆ ಉತ್ತಮ, ಅದರಲ್ಲೂ ದಕ್ಷಿಣ ಭಾರತದವರಾಗಿದ್ದರೆ ಇನ್ನೂ ಸಂತೋಷ" ಎಂದಿದ್ದರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಪರ್ಫೆಕ್ಟ್ ಜೋಡಿ. ಅವರ ಪೋಷಕರಿಗೂ ತಕ್ಕ ಸೊಸೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ಕೂಡ ಆಗಲೇ "ನನಗೆ ಅರೇಂಜ್ಡ್‌ ಮ್ಯಾರೇಜ್ ಇಷ್ಟವಿಲ್ಲ.. ಲವ್ ಮ್ಯಾರೇಜ್ ಆಗಬೇಕು. ಆದರೆ, ನಾನು ಪ್ರೀತಿಸುವ ಹುಡುಗಿಯನ್ನು ನನ್ನ ಪೋಷಕರೂ ಇಷ್ಟಪಡಬೇಕು" ಎಂದಿದ್ದರು. ಈಗ ಎಲ್ಲವೂ ಒಟ್ಟಿಗೆ ಕೂಡಿ ಬಂದಂತೆ ಆಗಿದೆ.

More from Filmibeat

English summary
While Geetha Govindam Success Vijay Deverakonda parents to revealed conditions to marry him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X