ತೆಲುಗಿನಲ್ಲಿ ದಿವಂಗತ ನಟಿ ಸೌಂದರ್ಯಾಗೆ ಡಬ್ ಮಾಡುತ್ತಿದ್ದವರು ಯಾರು ಗೊತ್ತೇ?
ಸೌಂದರ್ಯಾ ಅಗಲಿಕೆ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟ. ಎರಡೂ ಭಾಷೆಯಲ್ಲೂ ಜನಪ್ರಿಯತೆಯನ್ನು ಗಳಿಸಿದ್ದ ನಟಿ. ಕನ್ನಡ ಚಿತ್ರರಂಗದಿಂದ ನಟನಾ ವೃತ್ತಿ ಆರಂಭ ಮಾಡಿದ್ದರೂ, ತೆಲುಗಿನಲ್ಲೂ ಅಷ್ಟೇ ಜನಪ್ರಿಯತೆ ಗಳಿಸಿದ್ದರು. ಎರಡೂ ಭಾಷೆಯ ದಿಗ್ಗಜರ ಸಿನಿಮಾಗಳ ಮೊದಲ ಆಯ್ಕೆ ಸೌಂದರ್ಯಾ ಆಗಿದ್ದರು.
ಸೌಂದರ್ಯಾ ನಟನೆಗೆ ಸರಿಸಾಟಿನೇ ಇಲ್ಲ. ಕನ್ನಡವೇ ಇರಲಿ, ತೆಲುಗು ಸಿನಿಮಾವೇ ಇರಲಿ, ಇವರ ನಟನೆಯನ್ನು ಮರೆಯಲು ಸಾಧ್ಯವೇ ಇಲ್ಲ. ಈ ಎರಡೂ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸೌಂದರ್ಯಾ ನಟನೆ ಜೊತೆ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಿದ್ದು ತೆರೆಮೇಲಿನ ಅವರ ಧ್ವನಿ.

ಸೌಂದರ್ಯಾ ನಟನೆಗೂ ಅವರ ಧ್ವನಿಗೂ ಅಷ್ಟು ಹೊಂದಾಣಿಕೆಯಾಗುತ್ತಿತ್ತು. ಅದರಲ್ಲೂ ತೆಲುಗು ಮಂದಿಯಂತೂ ಸ್ವತ: ಸೌಂದರ್ಯಾ ಅವರೇ ಮಾತಾಡುತ್ತಿದ್ದಾರೆನೋ ಎಂದೇ ಭಾವಿಸಿದ್ದರು. ಆದರೆ, ಅವರ ಸಿನಿಮಾಗಳಿಗೆ ಧ್ವನಿ ನೀಡುತ್ತಿದ್ದವರೇ ಬೇರೆ. ಅವರೇ ತೆಲುಗು ಚಿತ್ರರಂಗದ ಜನಪ್ರಿಯ ಡಬ್ಬಿಂಗ್ ಆರ್ಟಿಸ್ಟ್ ಶಿಲ್ಪ.
ಚಿತ್ರರಂಗಕ್ಕೆ ಬಿಟ್ಟರೆ, ಸಾಮಾನ್ಯ ಪ್ರೇಕ್ಷಕರಿಗೆ ಸೌಂದರ್ಯಾಗೆ ಡಬ್ ಮಾಡುತ್ತಿದ್ದವರು ಯಾರು ಅನ್ನೋದು ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಸೌಂದರ್ಯಾ ನಟಿಸಿದ ಬಹುತೇಕ ತೆಲುಗು ಸಿನಿಮಾಗಳಿಗೆ ಇವರೇ ಧ್ವನಿಯನ್ನು ನೀಡಿದ್ದಾರೆ. ಇತ್ತೀಚೆಗೆ ಶಿಲ್ಪಾ ನೀಡಿದ ಸಂದರ್ಶನದಲ್ಲಿ ಸೌಂದರ್ಯಾಗೆ ಧ್ವನಿ ನೀಡುತ್ತಿದ್ದ ಸಂದರ್ಭವನ್ನು ವಿವರಿಸಿದ್ದಾರೆ.

ದಿವಂಗತ ಸೌಂದರ್ಯಾ ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ತೆಲುಗಿನಲ್ಲಿ ಉತ್ತಮ ಅವಕಾಶಗಳು ಸಿಕ್ಕಿದ್ದವು. 'ಮನವರಲಿ ಪೆಳ್ಳಿ' ಅನ್ನೋ ಸಿನಿಮಾದಿಂದ ತೆಲುಗಿನಲ್ಲಿ ನಟಿಸುವುದಕ್ಕೆ ಆರಂಭಿಸಿದ ಸೌಂದರ್ಯಾಗೆ 'ಅಮ್ಮೋರು', 'ಪವಿತ್ರ ಬಂಧಂ', 'ಅಂತಪುರಂ', 'ರಾಜ' ಅಂತಹ ಸಿನಿಮಾಗಳು ಜನಪ್ರಿಯತೆಯನ್ನು ತಂದು ಕೊಟ್ಟಿವೆ.
ಸೌಂದರ್ಯಾ ತೆಲುಗಿನಲ್ಲೂ ಸಕ್ಸಸ್‌ಪುಲ್ ನಟಿ ಅಂತ ಅನಿಸಿಕೊಂಡಿದ್ದರು. ಅವರ ಮುದ್ದಾದ ಮುಖಕ್ಕೆ ಹಿನ್ನೆಲೆ ಧ್ವನಿ ಅಷ್ಟೇ ಒಪ್ಪಿಕೊಂಡಿತ್ತು. ಸೌಂದರ್ಯ ತೆಲುಗು ಸಿನಿಮಾಗಳಿಗೆ ಸಾಮಾನ್ಯವಾಗಿ ಡಬ್ ಮಾಡುತ್ತಿದ್ದದ್ದು ಶಿಲ್ಪಾ. ಇವರು ಟಾಲಿವುಡ್ ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ, ಸೌಂದರ್ಯಾಗೆ ಇವರ ಧ್ವನಿ ಅದ್ಭುತವಾಗಿ ಮ್ಯಾಚ್ ಆಗುತ್ತಿತ್ತು.
ತೆಲುಗು ಡಬ್ಬಿಂಗ್ ಆರ್ಟಿಸ್ಟ್ ಶಿಲ್ಪಾ ಅನೇಕ ಸಿನಿಮಾಗಳಲ್ಲಿ ಸೌಂದರ್ಯಾಗೆ ಡಬ್ ಮಾಡಿದ್ದರು. ಇವರು ನಟ ಮಹರ್ಷಿ ರಾಘವ ಪತ್ನಿ. ಸೌಂದರ್ಯಾ ಅಷ್ಟೇ ಅಲ್ಲ ಶಿಲ್ಪ ಪರಭಾಷೆಯಿಂದ ತೆಲುಗಿಗೆ ಬಂದ ಹಲವು ನಾಯಕಿಯರಿಗೆ ಡಬ್ಬಿಂಗ್ ಮಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೌಂದರ್ಯಾ ಸಿನಿಮಾಗಳಿಗೆ ಡಬ್ ಮಾಡುತ್ತಿದ್ದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











