ಹಿಟ್ ಪೇರ್ ಆಗಿದ್ರೂ ಬಾಲಕೃಷ್ಣ, ಚಿರಂಜೀವಿ ಜೊತೆ ಯಾಕೆ ನಟಿಸಲಿಲ್ಲ? ವಿಜಯಶಾಂತಿ ಹೇಳಿದ್ದೇನು?
ವಿಜಯ್ ಶಾಂತಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ಆಗಿ ಮೆರೆದವರು. ಚಿರಂಜೀವಿ, ಬಾಲಕೃಷ್ಣ ಅಂತ ದಿಗ್ಗಜರೊಂದಿಗೆ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟು ಗೆದ್ದವರು. ಈಕೆಯ ಸಿನಿಮಾಗಳಿಗೆ ಸಿನಿಪ್ರಿಯರು ಕಾದು ಕೂರುತ್ತಿದ್ದ ಕಾಲವನ್ನು ಮರೆಯುವಂತಿಲ್ಲ.
ಕೇವಲ ಹೀರೊಗಳಿಗಷ್ಟೇ ಕಾಲ ಅನ್ನುವಂತಹ ಸಮಯದಲ್ಲಿ ವಿಜಯಶಾಂತಿ ಅವರಷ್ಟೇ ಪವರ್‌ಫುಲ್ ಆಗಿ ಹೊರಹೊಮ್ಮಿದ್ದರು. ಸೂಪರ್‌ಸ್ಟಾರ್ ಅಷ್ಟೇ ಬೇಡಿಕೆಗಳನ್ನು ಸೃಷ್ಟಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕೆಲವೇ ಕೆಲವು ಮಹಿಳೆಯರಲ್ಲಿ ವಿಜಯಶಾಂತಿ ಕೂಡ ಒಬ್ಬರಾಗಿದ್ದರು.

ವಿಜಯಶಾಂತಿ ಆರಂಭದ ದಿನಗಳಲ್ಲಿ ಇಂದಿನ ಸೂಪರ್‌ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಅವರೊಂದಿಗೆ ನಟಿಸುತ್ತಲೇ ತನ್ನದೇ ಆದ ಫ್ಯಾನ್ ಬೇಸ್ ಅನ್ನು ಸೃಷ್ಟಿಸಿಕೊಂಡಿದ್ದರು. ವಿಜಯಶಾಂತಿಯನ್ನು ಸಿನಿಮಾಗಳಲ್ಲಿ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಷ್ಟು ಬೇಡಿಕೆ ಸೃಷ್ಟಿಸಿಕೊಂಡರು. ಮೆಗಾಸ್ಟಾರ್ ಚಿರಂಜೀವಿ ಹಾಗೂ ಲೆಜೆಂಡ್ ಬಾಲಕೃಷ್ಣ ಜೊತೆ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಆದರೆ, ಇದ್ದಕ್ಕಿದ್ದ ಹಾಗೇ ಇವರಿಬ್ಬರೊಂದಿಗೆ ನಟಿಸುವುದನ್ನೇ ನಿಲ್ಲಿಸಿದ್ದರು. ಅದ್ಯಾಕೆ ಅನ್ನೋದನ್ನು ಈಗ ರಿವೀಲ್ ಮಾಡಿದ್ದಾರೆ.
ವಿಜಯಶಾಂತಿ ಅವರ ಸಿನಿಮಾಗಳಿಗೆ ಇಂದಿಗೂ ಫ್ಯಾನ್ ಇದ್ದಾರೆ. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ, ಅಭಿಮಾನಿಗಳು ಅವರಿಗೆ ಕೊಟ್ಟ ಬಿರುದು ಒಂದೆರಡಲ್ಲ. ಭಾರತೀಯ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್, ಲೇಡಿ ಅಮಿತಾಭ್, ಆಕ್ಷನ್ ಕ್ವೀನ್ ಅಂತೆಲ್ಲ ಕರೆದಿದ್ದಾರೆ. ಈ ನಟಿಯ ಸಿನಿಮಾಗಳು ಒಂದು ಕಾಲದಲ್ಲಿ ಸ್ಟಾರ್ ಹೀರೊಗಳ ಚಿತ್ರಗಳನ್ನೇ ಮೀರಿಸುತ್ತಿದ್ದವು. ಈ ನಟಿ ಸಿನಿಮಾಗಳು ಆ ಮಟ್ಟಿಗೆ ಪ್ರಭಾವ ಬೀರಿದ್ದವು.

'ಕರ್ತವ್ಯಂ' ಅನ್ನುವ ಸಿನಿಮಾ ಅದ್ಯಾವ ಮಟ್ಟಿಗೆ ಮೋಡಿ ಮಾಡಿತ್ತು ಅಂದರೆ, ಇದನ್ನು ನೋಡಿ ಅದೆಷ್ಟೋ ಹುಡುಗಿಯರು ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದರು. ಅಂದಿನ ಟಾಪ್ ಹೀರೋಗಳಿಗೆ ಪಡೆಯುತ್ತಿದ್ದಷ್ಟೇ ಸಂಭಾವನೆ ಕೇಳುತ್ತಿದ್ದ ಏಕೈಕ ಹೀರೋಯಿನ್ ಆಗಿ ಸುದ್ದಿಯಾಗಿದ್ದರು. ಇಷ್ಟೊಂದು ಬೇಡಿಕೆಯಿದ್ದ ನಟಿ ಚಿರಂಜೀವಿ ಹಾಗೂ ಬಾಲಯ್ಯ ಜೊತೆ ನಟಿಸುವುದನ್ನೇ ನಿಲ್ಲಿಸಿದ್ದರು. ಇಬ್ಬರು ನಟರೊಂದಿಗಿನ ಭಿನ್ನಾಭಿಪ್ರಾಯದಿಂದಲೇ ನಟಿಸಲಿಲ್ಲ ಅನ್ನೋ ಮಾತುಗಳು ಕೇಳಿದ ಬಂದಿದ್ದವು. ಅದಕ್ಕೀಗ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.
ವಿಜಯಶಾಂತಿ ಮೆಗಾಸ್ಟಾರ್ ಚಿರಂಜೀವಿ ಜೊತೆ 19 ಚಿತ್ರಗಳಲ್ಲಿ ನಟಿಸಿದ್ದರು. ಇವುಗಳಲ್ಲಿ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಚಿರಂಜೀವಿಯಂತೆ ವಿಜಯಶಾಂತಿ ಕೂಡ ಬ್ರೇಕ್ ಡ್ಯಾನ್ಸ್ ಮಾಡಿ ಸಿನಿಪ್ರಿಯರ ನಿದ್ದೆ ಕೆಡಿಸಿದ್ದರು. ಹಾಗೇ ಬಾಲಯ್ಯ ಜೊತೆ 17 ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಿನಿಮಾಗಳೂ ಗೆದ್ದಿವೆ. ಇಷ್ಟು ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇದ್ದರೂ, ಯಾಕೆ ನಟಿಸಿಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಚಿರಂಜೀವಿ ಹಾಗೂ ಬಾಲಯ್ಯ ಜೊತೆ ಸಿನಿಮಾಗಳನ್ನು ಮಾಡದೇ ಇರುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲ. ಡೇಟ್ಸ್ ಮ್ಯಾಚ್ ಆಗದ ಕಾರಣ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಹಾಗೇ ತನ್ನ ಇಮೇಜ್ ಸ್ಟಾರ್ ಲೆವೆಲ್‌ಗೆ ಏರುತ್ತಿದ್ದಂತೆ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಬೇಕಾಯಿತು. ಅಲ್ಲದೇ ಸಂಭಾವನೆ ಕೂಡ ಹೆಚ್ಚಾಯ್ತು. ಒಬ್ಬರು ಹೀರೋ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಪಡೆಯುತ್ತಿದ್ದೆ. ಈ ವೇಳೆ ಸ್ಟಾರ್ ಹೀರೋ ಪಕ್ಕದಲ್ಲಿ ನಟಿಸಿದರೆ ನಿರ್ಮಾಪಕರಿಗೆ ದುಡ್ಡು ಜಾಸ್ತಿ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











