ಬಾಹುಬಲಿ ರಿಯೂನಿಯರ್ ಪಾರ್ಟಿಯಿಂದ ಅನುಷ್ಕಾ ಶೆಟ್ಟಿ-ತಮನ್ನಾ ಹೊರಗುಳಿದಿದ್ದೇಕೆ? ಕಾರಣ ಏನು?
ದಕ್ಷಿಣ ಭಾರತದ ದಿಕ್ಕನ್ನೇ ಬದಲಿಸಿದ ಸಿನಿಮಾ 'ಬಾಹುಬಲಿ'. ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಸಿನಿಮಾದ ಭಾಗವಾಗಿದ್ದರು. ಅಸಲಿಗೆ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಟ್ಯಾಗ್ ಲೈನ್ ಹುಟ್ಟಿಕೊಂಡಿದ್ದೇ ಇಲ್ಲಿಂದ. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿಯ ಕಲ್ಪನೆಯ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.
'ಬಾಹುಬಲಿ' ದಕ್ಷಿಣ ಭಾರತದಲ್ಲಿ ನಿರ್ಮಾಣಗೊಂಡ ಬಿಗ್ ಬಜೆಟ್ ಸಿನಿಮಾ. ಇಷ್ಟು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು ತೀರ ವಿರಳ. ಅಂತಹದ್ರಲ್ಲಿ ಅದೇ ಮೊದಲ ಬಾರಿಗೆ ರಾಜಮೌಳಿ ಹಾಗೂ ನಿರ್ಮಾಪಕ ಶೋಭು ಯರಲಗಡ್ಡ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ರಾಜಮೌಳಿಯನ್ನು ನಂಬಿ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದರು. ನಿರೀಕ್ಷೆ ಮಾಡಿದಂತೆ ಭಾರತ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದು ಬಿಡ್ತು. ಆ ದಾಖಲೆ ಮುರಿಯುವುದಕ್ಕೆ ಇಂದಿಗೂ ಸೂಪರ್‌ಸ್ಟಾರ್‌ಗಳು ತಿಣುಕಾಡುತ್ತಿದ್ದಾರೆ.

ಇಂತಹ ಹಲವು ದಾಖಲೆಗಳನ್ನು ಬರೆದು ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ನಾಂದಿ ಹಾಡಿದ 'ಬಾಹುಬಲಿ'ಗೆ 10 ವರ್ಷಗಳ ಸಂಭ್ರಮ. ತೆಲುಗು ಚಿತ್ರರಂಗದ ಬಿಗ್ ಸ್ಟಾರ್‌ಗಳು ಇಟ್ಟುಕೊಂಡು ನಿರ್ಮಿಸಿದ ಸಿನಿಮಾ 'ಬಾಹುಬಲಿ: ದಿ ಬಿಗಿನಿಂಗ್' ಜುಲೈ 10, 2015 ರಂದು ರಿಲೀಸ್ ಆಗಿತ್ತು. ಸಿನಿಪ್ರಿಯರಿಗೆ ತೆರೆಮೇಲೆ ದೃಶ್ಯ ವೈಭವ ತೋರಿಸಿದ್ದ ರಾಜಮೌಳಿ ಹಾಗೂ ತಂಡ 10 ಸಂಭ್ರಮಾಚರಣೆಯನ್ನು ಮಾಡಿದೆ. ಮತ್ತೆ ರಿಯೂನಿಯನ್ ಆಗಿದೆ. ಈ ಪಾರ್ಟಿಯಲ್ಲಿ ಎಲ್ಲರೂ ಕಾಣಿಸಿಕೊಂಡಿದ್ದಾರೆ. ಆದರೆ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಮಾತ್ರ ಹೊರಗುಳಿದಿದ್ದರು. ಪ್ರಭಾಸ್, ರಾಣಾರಿಂದ ಹಿಡಿದು ಎಲ್ಲರೂ ಇದ್ದ ಪಾರ್ಟಿಗೆ ಇವರಿಬ್ಬರು ಗೈರಾಗಿದ್ದು ಯಾಕೆ? ತಿಳಿಯುವುದಕ್ಕೆ?
ಮುಂದೆ ಓದಿ
'ಬಾಹುಬಲಿ' ತೆರೆಕಂಡು 10 ವರ್ಷಗಳ ಸಂಭ್ರಮದಲ್ಲಿ ರಿಯೂನಿಯನ್ ಪಾರ್ಟಿ
ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣ ಸತ್ಯರಾಜ್ ಭಾಗಿ
ರಿಯೂನಿಯನ್ ಪಾರ್ಟಿಗೆ ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಗೈರು
ಇಬ್ಬರು ನಾಯಕಿಯರ ಗೈರಾಗಿದ್ದಕ್ಕೆ ಕಾರಣವೇನು?
'ಬಾಹುಬಲಿ' ತೆಲುಗು ಚಿತ್ರರಂಗಕ್ಕೆ ಪ್ಯಾನ್ ಇಂಡಿಯಾ ಇಮೇಜ್ ಕೊಟ್ಟಿದೆ. ಇದೇ ಸಿನಿಮಾವನ್ನು ಫಾಲೋ ಮಾಡಿದ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿವೆ. ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದ 'ಬಾಹುಬಲಿ' ಬಗ್ಗೆ ಇನ್ನೂ ಚರ್ಚೆಗಳು ಆಗುತ್ತಲೇ ಇರುತ್ತವೆ. ಇದೇ ಖುಷಿಯಲ್ಲಿ ರಾಜಮೌಳಿ ಮತ್ತು ಅವರ ತಂಡ 10 ವರ್ಷದ ಸಂಭ್ರಮವನ್ನು ಆಚರಿಸುವುದಕ್ಕೆ ರಿಯೂನಿಯನ್ ಪಾರ್ಟಿ ಹಮ್ಮಿಕೊಂಡಿದ್ದರು. ಆ ಪಾರ್ಟಿಗೆ ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಗೈರು ಹಾಜರಾಗಿದ್ದರು. ಅದ್ಯಾಕೆ ಅಂತ ಅಭಿಮಾನಿಗಳು ತಲೆಗೆ ಹುಳ ಬಿಟ್ಟಿಕೊಂಡಿದ್ದರು.
'ಬಾಹುಬಲಿ' ರಿಯೂನಿಯನ್ ಪಾರ್ಟಿಯಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ ಭಾಗವಹಿಸಿದ್ದರು. ಹೀಗಾಗಿ ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಕೂಡ ಭಾಗವಹಿಸುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ಅವರಿಬ್ಬರೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಏನಾದರೂ ಸಮಸ್ಯೆ ಆಗಿದೆಯಾ? ನಾಯಕಿಯರು ಇಬ್ಬರೂ ಗೈರಾಗಿದ್ದೇಕೆ? ಇಂತಹ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಅದಕ್ಕೀಗ ಟಾಲಿವುಡ್ ಮಂದಿ ಕೆಲವು ಕಾರಣಗಳನ್ನು ನೀಡುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾಗೂ 'ಬಾಹುಬಲಿ' ರಿಯೂನಿಯನ್ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಇಬ್ಬರು ನಾಯಕಿ ನಟಿಯರು ಕೂಡ ಹಾಜರಾಗಲಿಲ್ಲ. ಬಾಹುಬಲಿ ನಿರ್ದೇಶಕ ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣ, ಸತ್ಯರಾಜ್, ನಾಸರ್ ಭಾಗವಹಿಸಿದ್ದರು. ಇವರೊಂದಿಗೆ ನಿರ್ಮಾಪಕ ಶೋಭು ಯರಲಗಡ್ಡ, ಛಾಯಾಗ್ರಾಹಕ ಸೆಂಥಿಲ್, ನಿರ್ಮಾಣ ವಿನ್ಯಾಸಕರಾದ ಸಾಬು ಸಿರಿಲ್, ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಲೈನ್ ನಿರ್ಮಾಪಕ ಶ್ರೀವಲ್ಲಿ, ವಸ್ತ್ರ ವಿನ್ಯಾಸಕ ರಮಾ ರಾಜಮೌಳಿ, ಕಾರ್ತಿಕೇಯ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಹಾಗೂ ತಮನ್ನಾ ಗೈರಾಗಿದ್ದಕ್ಕೆ ಸಿಂಪಲ್ ಆಗಿರುವ ಕಾರಣಗಳನ್ನು ಟಾಲಿವುಡ್ ಮಂದಿ ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ 'ಘಾಟಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಲುಕ್ ಅನ್ನು ಅವರು ರಿವೀಲ್ ಮಾಡುವಂತಿರಲಿಲ್ಲ. ಅಲ್ಲದೆ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಯಾವುದೇ ಸಮಾರಂಭ, ಪಾರ್ಟಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಈ ಪಾರ್ಟಿಯಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಇನ್ನೊಂದು ವರ್ಗ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದೆ. ಅತ್ತ ತಮನ್ನಾ ಭಾಟಿಯಾ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ರಿಯೂನಿಯನ್ ಪಾರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.


Click it and Unblock the Notifications











