24 ಗಂಟೆಯಲ್ಲಿ 'ಪುಷ್ಪ 2' ಟೀಸರ್‌ಗೆಷ್ಟು ವೀವ್ಸ್? 'ಸಲಾರ್' ಟೀಸರ್ ಅರ್ಧದಷ್ಟೂ ವೀಕ್ಷಿಸಿಲ್ಲ ಯಾಕೆ?

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಪುಷ್ಪ 2' ಮುಂಚೂಣಿಯಲ್ಲಿದೆ. ಅಲ್ಲು ಅರ್ಜುನ್ ನಟಿಸುತ್ತಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆಗಳು ಹೆಚ್ಚಿವೆ. 'ಪುಷ್ಪ 2' ಬಿಡುಗಡೆಗೂ ಮುನ್ನವೇ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. 1000 ಕೋಟಿ ರೂಪಾಯಿ ಬಾಕ್ಸಾಫೀಸ್ ಲೂಟಿ ಮಾಡುತ್ತೆ ಅಂತ ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ.

'ಪುಷ್ಪ 2' ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಪುಷ್ಪ 2' ಟೀಸರ್ ರಿಲೀಸ್ ಮಾಡಲಾಗಿತ್ತು. ಆ ಟೀಸರ್‌ಗೆ 24 ಗಂಟೆಗಳಲ್ಲಿ ಸುಮಾರು 39 ಮಿಲಿಯನ್ ವೀವ್ಸ್ ಅನ್ನು ದಾಖಲು ಮಾಡಿದೆ. ಆದರೆ, ಟೀಸರ್‌ಗೆ ಸಿಕ್ಕಿರೋ ವೀವ್ಸ್ ಬಳಿಕ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ.

Why couldn t Pushpa 2 teaser cross Salaar teaser view count

ತೆಲುಗಿನ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ 'ಪುಷ್ಪ 2' ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 'ಪುಷ್ಪ' ಪಾರ್ಟ್ 1 ಸಿಕ್ಕಿದ ಪ್ರತಿಕ್ರಿಯೆ ಬಳಿಕ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆಯಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಕೆಲವರಿಗೆ 'ಪುಷ್ಪ 2' ಟೀಸರ್‌ಗೆ 24 ಗಂಟೆಗಳಲ್ಲಿ ಸಿಕ್ಕಿರೋ ಟೀಸರ್ ತೃಪ್ತಿ ಕೊಟ್ಟಿಲ್ಲ. ಯಾಕಂದ್ರೆ, 'ಸಲಾರ್' ಟೀಸರ್‌ ಜೊತೆ ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

'ಪುಷ್ಪ 2'ಗೆ ಇಲ್ಲಿವರೆಗೂ ಇದ್ದ ಕ್ರೇಜ್‌ಗೆ ಟೀಸರ್‌ ಯೂಟ್ಯೂಬ್‌ನಲ್ಲಿ ದಾಖಲೆ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಟಾಲಿವುಡ್‌ನಲ್ಲಿ ಇದರೂವರೆಗೂ ಇದ್ದ ಎಲ್ಲಾ ದಾಖಲೆಗಳನ್ನು ಊಡೀಸ್ ಮಾಡಬಹುದು ಗೆಸ್ ಮಾಡಲಾಗಿತ್ತು. ಆದರೆ, 'ಸಲಾರ್' ಟೀಸರ್ 24 ಗಂಟೆಗಳಲ್ಲಿ ಪಡೆದುಕೊಂಡ ವೀವ್ಸ್‌ಗೆ ಅರ್ಧದಷ್ಟೂ ಬಂದಿಲ್ಲ. ಹೀಗಾಗಿ ಟ್ರೇಡ್‌ ಎಕ್ಸ್‌ಪರ್ಟ್‌ಗಳೇ ಗೊಂದಲಕ್ಕೆ ಬಿದ್ದಿದ್ದಾರೆ.

Why couldn t Pushpa 2 teaser cross Salaar teaser view count

ಪ್ರಶಾಂತ್ ನೀಲ್, ಪ್ರಭಾಸ್ ಕಾಂಬಿನೇಷನ್ ಸಿನಿಮಾ 'ಸಲಾರ್' ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 83 ಮಿಲಿಯನ್ ವೀವ್ಸ್ ಅನ್ನು ಗಿಟ್ಟಿಸಿಕೊಂಡಿತ್ತು. ಇತ್ತೀಚೆಗೆ ರಿಲೀಸ್ ಆದ ಪ್ಯಾನ್ ಇಂಡಿಯಾ ಸಿನಿಮಾಗಳ ಟೀಸರ್‌ಗಳಲ್ಲಿ 'ಸಲಾರ್' 24 ಗಂಟೆಗಳಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀವ್ಸ್ ಗಿಟ್ಟಿಸಿಕೊಂಡ ಭಾರತೀಯ ಸಿನಿಮಾದ ಟೀಸರ್ ಎನಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಟೀಸರ್ ಸಿಕ್ಕಾಪಟ್ಟೆ ಹೈಪ್ ಇದ್ದರೂ, ಮೊದಲ ಟೀಸರ್ ಯಾಕೆ ಸದ್ದು ಮಾಡಲಿಲ್ಲ. 'ಸಲಾರ್' ಟೀಸರ್‌ಗೆ ಸಿಕ್ಕಿದ ವೀವ್ಸ್ ಸಮೀಪಕ್ಕೂ ಬಂದಿಲ್ಲ ಯಾಕೆ? ಅನ್ನುವ ಗೊಂದಲಕ್ಕೆ ಬಿದ್ದಿದ್ದಾರೆ ಸಿನಿಮಾ ಮಂದಿ. ಇನ್ನೊಂದು ಕಡೆ ಪ್ರಶಾಂತ್ ನೀಲ್ ಹಾಗೂ ಸುಕುಮಾರ್ ಬಗ್ಗೆ ಹೋಲಿಕೆಗಳನ್ನು ಮಾಡುವುದಕ್ಕೂ ಶುರು ಮಾಡಿದ್ದಾರೆ.

ಪ್ರಶಾಂತ್ ನೀಲ್‌ಗೆ 'ಕೆಜಿಎಫ್' ಸೀರಿಸ್‌ನಿಂದ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅದೇ 'ಪುಷ್ಪ'ದಿಂದ ಸುಕುಮಾರ್‌ಗೆ ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿಲ್ಲ. ದಕ್ಷಿಣ ಭಾರತಕ್ಕೆ ಸೀಮಿತವಾಗಿಬಿಟ್ಟಿರು. ಹೀಗಾಗಿ 'ಪುಷ್ಪ 2' ಕೇವಲ ಅಲ್ಲು ಅರ್ಜುನ್ ಹೆಸರಿನ ಮೇಲೆ ಉತ್ತರ ಭಾರತದಲ್ಲಿ ಪ್ರಚಾರ ಮಾಡಬೇಕಾಗಿ ಬರಬಹುದು ಎಂಬುವುದು ಕೆಲವು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ. ಒಟ್ನಲ್ಲಿ ಸೀರೆಯುಟ್ಟು ಮಾಸ್ ಲುಕ್‌ನಲ್ಲಿ 'ಪುಷ್ಪ' ಎಂಟ್ರಿ ಕೊಟ್ಟಿದ್ದರೂ, ವೀವ್ಸ್ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ.

More from Filmibeat

English summary
Allu Arjun Pushpa 2 teaser got 39 million views in 24 hours can't beat Salaar teaser:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X