ಕರಣ್ ಬರ್ತ್‌ಡೇ ಪಾರ್ಟಿಗೆ ರಾಜಮೌಳಿ, ಪ್ರಭಾಸ್, ರಾಣಾ, ಯಶ್‌ ಯಾಕೆ ಹೋಗಿಲ್ಲ?

ಬಾಲಿವುಡ್‌ನಲ್ಲಿ ಕರಣ್‌ ಜೋಹರ್ ಬರ್ತ್‌ಡೇ ಪಾರ್ಟಿ ಜೋರಾಗಿ ನಡೆದಿದೆ. ಕರಣ್‌ ಜೋಹರ್ ಬರ್ತ್‌ಡೇ ಪಾರ್ಟಿಗೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದಾರೆ. 50ನೇ ವರ್ಷದ ಹುಟ್ಟುಹಬ್ಬ ಆಗಿದ್ದರಿಂದ ಕರಣ್ ಜೋಹರ್‌ಗೆ ಈಗ ಬರ್ತ್‌ಡೇ ವಿಶೇಷವಾಗಿತ್ತು. ಈ ಪಾರ್ಟಿಗೆ ಬಾಲಿವುಡ್‌ ಸೇರಿದಂತೆ ದಕ್ಷಿಣ ಭಾರತದ ಕೆಲವೇ ಕೆಲವು ಸೆಲೆಬ್ರೆಟಿಗಳೂ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಸೇರಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಗ್ಲಾಮರಸ್ ಡ್ರೆಸ್ ತೊಟ್ಟು ಬರ್ತ್‌ಡೇ ಪಾರ್ಟಿಗೆ ಎಂಟ್ರಿ ಕೊಟ್ಟಿದ್ದರು. ಇತ್ತ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಜೊತೆ ವಿಜಯ್ ದೇವರಕೊಂಡ ಹೋಗಿದ್ದರು. ಹಾಗಂತ ದಕ್ಷಿಣದಲ್ಲಿ ಕರಣ್ ಜೋಹರ್ ಈ ಮೂವರಿಗಷ್ಟೇ ಪರಿಚಯವಲ್ಲ. ರಾಜಮೌಳಿ, ಪ್ರಭಾಸ್, ರಾಣಾ ಸೇರಿದಂತೆ ಇತ್ತೀಚೆಗೆ ಯಶ್ ಕೂಡ ಆತ್ಮೀಯರಾಗಿದ್ದಾರೆ. ಹಾಗಿದ್ದೂ ಇವರೆಲ್ಲ ಯಾಕೆ ಹೋಗಿಲ್ಲ? ಅನ್ನುವ ಪ್ರಶ್ನೆ ಕಾಡುತ್ತಿದೆ.

Recommended Video

ಸೌತ್ ಸ್ಟಾರ್ ನಟರು ಯಾಕೆ ಇರಲಿಲ್ಲಾ ಕರಣ್ ಪಾರ್ಟಿಯಲ್ಲಿ? | #Yash #KaranJohar #Rajamouli
ರಾಜಮೌಳಿ, ಪ್ರಭಾಸ್, ರಾಣಾ ಹೋಗಿಲ್ಲ

ರಾಜಮೌಳಿ, ಪ್ರಭಾಸ್, ರಾಣಾ ಹೋಗಿಲ್ಲ

'ಬಾಹುಬಲಿ' ತಂಡ ಕರಣ್‌ ಜೋಹರ್‌ಗೆ ತುಂಬಾನೇ ಚಿರಪರಿಚಿತ. 'ಬಾಹುಬಲಿ' ಹಿಂದಿ ಅವತರಣಿಕೆ ಬಾಲಿವುಡ್‌ನಲ್ಲಿ ದಾಖಲೆ ಬರೆಯುವುದಕ್ಕೆ ಕಾರಣವೇ ಕರಣ್ ಜೋಹರ್. ಅಲ್ಲಿಂದ ಕರಣ್ ಹಾಗೂ ರಾಜಮೌಳಿಯ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತ್ತು. ಇದೇ ವೇಳೆ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಕೂಡ ಕರಣ್‌ಗೆ ಆತ್ಮೀಯರಾಗಿದ್ದರು. ಹೀಗಿದ್ರೂ, ಈ ಮೂವರು ಯಾಕೆ ಪಾರ್ಟಿಗೆ ಹೋಗಿಲ್ಲ ಅನ್ನುವುದೇ ದೊಡ್ಡ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿದೆ.

ರಾಕಿ ಭಾಯ್‌ಗೆ ಕರೆದಿಲ್ವಾ ಕರಣ್ ಜೋಹರ್?

ರಾಕಿ ಭಾಯ್‌ಗೆ ಕರೆದಿಲ್ವಾ ಕರಣ್ ಜೋಹರ್?

ಕರಣ್ ಜೋಹರ್ ತಮ್ಮ 50ನೇ ವರ್ಷದ ಹುಟ್ಟುಹಬ್ಬಕ್ಕೆ ಬಾಲಿವುಡ್‌ನ ಸಾಕಷ್ಟು ತಾರೆಯರಿಗೆ ಆಹ್ವಾನ ನೀಡಿದ್ದರು. ಅದರಂತೆ, ಬಾಲಿವುಡ್‌ನ ಪ್ರಮುಖ ತಾರೆಯರು ಭಾಗವಹಿಸಿದ್ದರು. ಆದರೆ, ತೆಲುಗಿನಿಂದ ಕೇವಲ ಮೂರು ಮಂದಿ ಹೋಗಿದ್ದರಷ್ಟೇ. ಇತ್ತೀಚೆಗಷ್ಟೇ ಕರಣ್ ಜೋಹರ್ 'ಕೆಜಿಎಫ್ 2' ಟ್ರೈಲರ್ ಲಾಂಚ್ ಮಾಡಿ ಹೋಗಿದ್ದರು. ಹೀಗಿದ್ದರೂ, ರಾಕಿ ಭಾಯ್ ಬಾಲಿವುಡ್‌ನ ಸೆಲೆಬ್ರೆಟಿ ನಿರ್ಮಾಪಕ ಕಮ್ ನಿರ್ದೇಶಕನ ಬರ್ತ್‌ಡೇ ಪಾರ್ಟಿಗೆ ಯಾಕೆ ಹೋಗಿಲ್ಲ ಅನ್ನುವ ಚರ್ಚೆಯಂತೂ ಆಗುತ್ತಿದೆ.

ಕೆಲವರಿಗೆ ಮಾತ್ರ ಆಹ್ವಾನ

ಕೆಲವರಿಗೆ ಮಾತ್ರ ಆಹ್ವಾನ

ಕರಣ್ ಜೋಹರ್ ಕೆಲವರಿಗೆ ಆಹ್ವಾನ ನೀಡಲ್ಲ. ಇದಕ್ಕೆ ಕಾರಣವಿದೆ ಎನ್ನುತ್ತಿದೆ ಬಾಲಿವುಡ್. ಕರಣ್ ತನ್ನೊಂದಿಗೆ ಈಗ ಕೆಲಸ ಮಾಡುತ್ತಿರುವವರಿಗೆ ಆಹ್ವಾನ ನೀಡಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ತನಗೆ ಆಪ್ತರಾಗಿರುವವರಿಗೆ ಮಾತ್ರ ಆಹ್ವಾನ ನೀಡಿದ್ದು, ಉದ್ದೇಶ ಪೂರ್ವಕವಾಗಿಯೇ ರಾಜಮೌಳಿ, ಪ್ರಭಾಸ್, ರಾಣಾ ಹಾಗೂ ಯಶ್‌ಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ.

ಬಾಲಿವುಡ್ ದಿಗ್ಗಜರಿಗೆ ಗ್ರ್ಯಾಂಡ್ ಪಾರ್ಟಿ

ಬಾಲಿವುಡ್ ದಿಗ್ಗಜರಿಗೆ ಗ್ರ್ಯಾಂಡ್ ಪಾರ್ಟಿ

ಕರಣ್ ಪಾರ್ಟಿಗೆ ಸೈಫ್ ಅಲಿಖಾನ್, ಕರೀನಾ ಕಪೂರ್ ಖಾನ್, ಹೃತಿಕ್ ರೋಷನ್, ಆಮಿರ್ ಖಾನ್, ಕಿರಣ್ ರಾವ್, ತಾರಾ ಸುತಾರಿಯಾ, ವಾಣಿ ಕಪೂರ್, ರಣ್‌ಬೀರ್ ಕಪೂರ್, ಅನುಷ್ಕಾ ಶರ್ಮಾ, ರಾಣಿ ಮುಖರ್ಜಿ ಸೇರಿದಂತೆ ಹಲವು ಮಂದಿ ಬಾಲಿವುಡ್ ದಿಗ್ಗಜರು ಈ ಗ್ರ್ಯಾಂಡ್ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ.

More from Filmibeat

English summary
Why Karan Johar Not Invited Rajamouli, Prabhas And Rana Daggubati, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X