"ನಾಟು ನಾಟು" ಆಸ್ಕರ್ ಗೆದ್ದಾಗ ರಾಜಮೌಳಿಗೆ ವಿಶ್ ಮಾಡಿಲ್ಲ, ಮೆಸೇಜ್ ಹಾಕಿಲ್ಲ": ನಾನಿ ಹೀಗೆ ಮಾಡಿದ್ಯಾಕೆ?
ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ದಸರಾ' ಸಿನಿಮಾ ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಅಂತಾ ಸಾಬೀತಾಗಿದೆ. ಇತ್ತೀಚೆಗೆ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿ ನಾನಿ, ಕೀರ್ತಿ ಸುರೇಶ್ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲಾ ತೇಲಾಡುತ್ತಿದ್ದಾರೆ.
'ದಸರಾ' ಗೆದ್ದ ಖುಷಿಯಲ್ಲಿ ನಾನಿ ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದರು. ಈ ವೇಳೆ ತನ್ನ ಹಾಗೂ ರಾಮಮೌಳಿ ಜೊತೆಗಿನ ಬಾಂಧವ್ಯದ ಹಾಗೂ ಓಡನಾಡದ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ 'RRR' ಸಿನಿಮಾದ "ನಾಟು ನಾಟು.." ಹಾಡಿಗೆ ಆಸ್ಕರ್ ಬಂದಾಗಿ ರಾಜಮೌಳಿಗೆ ವೈಯಕ್ತಿಕವಾಗಿ ಯಾಕೆ ವಿಶ್ ಮಾಡಿಲ್ಲ ಅಂತಾನೂ ರಿವೀಲ್ ಮಾಡಿದ್ದಾರೆ.

ನಾನಿ ಹಾಗೂ ರಾಜಮೌಳಿ ಇಬ್ಬರ ಬಾಂಧವ್ಯ ಇತ್ತೀಚೆಗಿನದ್ದು ಅಲ್ಲ. 2006ರಿಂದ ಇಲ್ಲಿವರೆಗೂ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಿದ್ದರೂ, ನಾನಿ ಯಾಕೆ ವಿಶ್ ಮಾಡಿಲ್ಲ, ಒಂದು ಮೆಸೇಜ್ ಕೂಡ ಕಳಿಸಲಿಲ್ಲ ಅನ್ನೋದೇ ಕುತೂಹಲ.
ರಾಜಮೌಳಿ-ನಾನಿ ಇಬ್ಬರೂ ಆತ್ಮೀಯರು
2012ರಲ್ಲಿ ರಾಜಮೌಳಿ ನಿರ್ದೇಶಿಸಿದ 'ಈಗ' ಸಿನಿಮಾದಲ್ಲಿ ನಾನಿ ನಟಿಸಿದ್ದರು. ಈ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ಈ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. 'ಈಗ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲದೆ. ದೇಶಾದ್ಯಂತ ಸದ್ದು ಮಾಡಿತ್ತು.

ಇಷ್ಟೇ ಅಲ್ಲ 2006ರಲ್ಲಿ ನಾನಿ 'ಮಜ್ನು' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ನಾನಿ ಹೀರೊ ಆಗಿದ್ದರೆ, ರಾಜಮೌಳಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಇವರಿಬ್ಬರ ಆತ್ಮೀಯತೆಗೆ ಹಲವು ವರ್ಷಗಳ ಕಥೆಯಿದೆ. ಹೀಗಿದ್ದೂ ನಾನಿ "ನಾಟು ನಾಟು" ಹಾಡು ಗೆದ್ದಾಗ ಯಾಕೆ ವಿಶ್ ಮಾಡಿಲ್ಲ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ರಾಜಮೌಳಿಗೆ ಯಾಕೆ ವಿಶ್ ಮಾಡಿಲ್ಲ?
"ನಾಟು ನಾಟು" ಆಸ್ಕರ್ ಗೆದ್ದಾಗ ಇಡೀ ವಿಶ್ವವೇ ಶುಭಾಶಯಗಳನ್ನು ತಿಳಿಸಿತ್ತು. ನ್ಯಾಚುರಲ್ ಸ್ಟಾರ್ ನಾನಿ ಮಾತ್ರ ವಿಶ್ ಮಾಡಿಲ್ಲ, ಮೆಸೇಜ್ ಕೂಡ ಕಳಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದ್ರೆ? ಇಡೀ ಪ್ರಪಂಚ ಅವರ ಬಗ್ಗೆ ಮಾತನಾಡುತ್ತದೆ ಎಂದು ನನಗೆ ಮೊದಲೇ ಗೊತ್ತು. ಅದಕ್ಕೆ ಮತ್ತೆ ಅವರಿಗೆ ವಿಶ್ ಮಾಡಲಿಲ್ಲ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ನಾನಿ ತಮ್ಮ ಹಾಗೂ ರಾಜಮೌಳಿ ನಡುವೆ ವೃತ್ತಿಪರವಾದ ಸಂಬಂಧ ಮಾತ್ರ ಅಷ್ಟೇ ಅಲ್ಲ ಎಂದು ಹೇಳಿದ್ದಾರೆ. ರಾಜಮೌಳಿ ಬಗ್ಗೆ ವೈಯಕ್ತಿಕವಾಗಿ ವಿಶೇಷ ಸ್ಥಾನಮಾನವಿದೆ. ಇಬ್ಬರೂ ಒಟ್ಟಿಗೆ ಸೇರುತ್ತೇವೆ. 'ಈಗ' ಸಿನಿಮಾದಿಂದ ಇಬ್ಬರ ಸಂಬಂಧ ಗಾಢವಾಗಿದ್ದು, ಹಲವು ಸಂದರ್ಭಗಳಲ್ಲಿ ಸಂಭ್ರಮಾಚರಣೆ ಮಾಡಿದ್ದೇವೆ ಎಂದಿದ್ದಾರೆ.
ರಾಜಮೌಳಿ ಜೊತೆ ಮತ್ತೆ ಸಿನಿಮಾ?
ಟಾಲಿವುಡ್‌ನಲ್ಲಿ ನಾನಿ ಮತ್ತೆ ರಾಜಮೌಳಿ ಸಿನಿಮಾ ನಟಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾದಲ್ಲಿ ನಾನಿ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಮಾತಿದೆ.
ಇಷ್ಟೇ ಅಲ್ಲ, ರಾಜಮೌಳಿ ಹಾಗೂ ನಾನಿ ನಡುವೆ 'ಈಗ' ಸೀಕ್ವೆಲ್ ಬಗ್ಗೆನೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಇಬ್ಬರ ಕಾಂಬಿನೇಷನ್‌ಲ್ಲಿ 'ಈಗ 2' ಆರಂಭ ಆದರೆ, ಮತ್ತೆ ಟಾಲಿವುಡ್‌ನಲ್ಲಿ ನಾನಿಯ ಹೊಸ ಅಧ್ಯಾಯ ಆರಂಭ ಆಗುತ್ತೆ.


Click it and Unblock the Notifications










