"ಹೀರೊ ಸೀರೆಗೆ ಬೆಂಕಿ ಹಚ್ಚಿ ಅದ್ರಿಂದ ಸಿಗರೇಟ್ ಸೇದುತ್ತಾನೆ": ಪ್ರಶಾಂತ್ ನೀಲ್ 'ಓಂ' ವಿಷಯ ಎತ್ತಿದ್ದೇಕೆ?

'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ ಅಷ್ಟೇ. ನಿರ್ದೇಶಕ ಪ್ರಶಾಂತ್ ನೀಲ್ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. 'ಸಲಾರ್' ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

'ಕೆಜಿಎಫ್' ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ಮೇಲೆ ಎಲ್ಲರ ಕಣ್ಣು ಇದೆ. ಪ್ರಶಾಂತ್ ನೀಲ್‌ಗೆ ಅಷ್ಟೇ ಅಲ್ಲ. ಪ್ರಭಾಸ್‌ಗೂ ಈ ಸಿನಿಮಾ ಗೆಲ್ಲಲೇ ಬೇಕಿದೆ. ಈಗಾಗಲೇ ಪ್ರಶಾಂತ್ ನೀಲ್ 'ಕೆಜಿಎಫ್'ಗಿಂತ 'ಸಲಾರ್' ದೊಡ್ಡ ಸಿನಿಮಾ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

Prashanth Neel Salaar Upendra OM Movie

ಇತ್ತೀಚೆಗೆ ಪ್ರಶಾಂತ್ ನೀಲ್ ಗಲಾಟ್ಟಾ ಪ್ಲಸ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಉಪೇಂದ್ರ ನಿರ್ದೇಶಿಸಿದ 'ಓಂ' ಸಿನಿಮಾದ ಮೊದಲ ಸೀನ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಪ್ರಶಾಂತ್‌ ನೀಲ್ ನಿರ್ದೇಶಿಸಿದ 'ಸಲಾರ್'ಗೂ, ಉಪ್ಪಿಯ 'ಓಂ' ಸಿನಿಮಾಗೂ ಏನು ಸಂಬಂಧ? ತಿಳಿಯುವುದಕ್ಕೆ ಮುಂದೆ ಓದಿ.

ಇತ್ತೀಚೆಗೆ ಹೀರೊಗಳು ನೆಗೆಟಿವ್ ಶೇಡ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕೆಜಿಎಫ್' ಸಿನಿಮಾ ಬಳಿಕ ಈ ಟ್ರೆಂಡ್ ಹೆಚ್ಚಾಗಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದರು. "ಹೀರೊ ತೆರೆಮೇಲೆ ಏನು ಮಾಡಬಾರದು ಅಂತಿದ್ದರೋ ಅದನ್ನೆಲ್ಲವನ್ನೂ ಮಾಡುವುದೇ ಈಗ ಫ್ಯಾಷನ್ ಆಗಿಬಿಟ್ಟಿದೆ. ಹೀಗೆ ಪ್ರಯತ್ನ ಮಾಡುವುದು ಕೂಲ್ ಆಗಿರುತ್ತೆ. ಆದರೆ, ಪ್ರಯೋಗ ಮಾಡುವುದಕ್ಕೆ ಹಿಂದೆ ಬಿದ್ದಿದ್ದರು ಅಂತ ಅನಿಸುತ್ತಿದೆ." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಹೀರೊಗಳು ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಈ ಹಿಂದೆ ಉಪ್ಪಿ ನಿರ್ದೇಶಿಸಿದ 'ಓಂ' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನೆಗೆಟಿವ್ ಶೇಡ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅದೇ ವಿಷಯವನ್ನು ಪ್ರಶಾಂತ್ ನೀಲ್ ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.

Prashanth Neel Salaar Upendra OM Movie

"90ರ ದಶಕದಲ್ಲಿ ಬಂದ ಕನ್ನಡ ಸಿನಿಮಾವೊಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕನ್ನಡ ಚಿತ್ರರಂಗದ ದೊಡ್ಡ ಸಿನಿಮಾ 'ಓಂ'. ಈ ಸಿನಿಮಾದ ಮೊದಲ ಸೀನ್‌ನಲ್ಲಿ ಹೀರೊ ಸೀರೆಗೆ ಬೆಂಕಿ ಹಚ್ಚಿ, ಅದರಿಂದ ಸಿಗರೇಟು ಹಚ್ಚಿಕೊಳ್ಳುತ್ತಾರೆ. ಇದರಲ್ಲಿ ನಾನು ಕೆಟ್ಟದ್ದನ್ನು ಹುಡುಕುವುದಕ್ಕೆ ಸಾಧ್ಯವಿಲ್ಲ. ನಾವು ಸಿನಿಮಾವನ್ನು ತುಂಬಾನೇ ಇಷ್ಟ ಪಟ್ಟೆವು. ನೀವು ಹೀರೊ ಕೆಟ್ಟವನು ಅಂದಾಗ, ಅದಕ್ಕೆ ಸಿಗುವ ಕಾರಣ ಸರಿಯಾಗಿರುತ್ತೆ." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಹೀರೊಗಳಿಗೆ ಬ್ಯಾಡ್ ಬಾಯ್ ಇಮೇಜ್ ಕೊಟ್ಟು ಪ್ರಶಾಂತ್ ನೀಲ್ ಯಾಕೆ ಸಿನಿಮಾ ಮಾಡುತ್ತಾರೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನನಗೆ ಬ್ಯಾಡ್ ಬಾಯ್ ಅಂತಹ ಸಿನಿಮಾ ಇಷ್ಟ ಆಗುತ್ತೆ. ಎಲ್ಲರಿಗೂ ಇಂತಹ ಪಾತ್ರದಲ್ಲಿ ನಟಿಸಬೇಕು ಅನ್ನೋ ಆಸೆಯಿತ್ತು. ಹೀರೊಗೂ ಅಂತಹ ಪಾತ್ರ ಮಾಡುವ ಆಸೆಯಿದೆ. ನಿರ್ದೇಶಕರಿಗೂ ಅಂತಹ ಪಾತ್ರ ಮಾಡುವ ಆಸೆಯಿದೆ. ಅವರೆಲ್ಲರೂ ಸರಿಯಾದ ಕಾರಣವನ್ನು ಎದುರು ನೋಡುತ್ತಿದ್ದಾರೆ." ಎಂದು ಪ್ರಶಾಂತ್ ನೀಲ್ ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
Why Prashanth Neel took Upendra Shivarajkumar movie Om in an Interview
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X