ಹೈದರಾಬಾದ್‌ನಲ್ಲಿ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ; ಥಿಯೇಟರ್‌ನಲ್ಲಿ ನಡೆದಿದ್ದೇನು?

ತೆಲುಗಿನಲ್ಲಿ 'ಲವ್ ರೆಡ್ಡಿ' ಅನ್ನೋ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಹೀಗಾಗಿ ಚಿತ್ರತಂಡ ಹೈದರಾಬಾದ್‌ನ ಥಿಯೇಟರ್‌ವೊಂದಕ್ಕೆ ಭೇಟಿ ನೀಡಿತ್ತು. ಇವರೊಂದಿಗೆ ಕನ್ನಡದ ನಟ ಕೂಡ ಚಿತ್ರಮಂದಿರಕ್ಕೆ ಹೋಗಿದ್ದರು. ಈ ವೇಳೆ ಏಕಾಏಕಿ ಮಹಿಳೆಯೊಬ್ಬರು ಬಂದು ಥಳಿಸಿ, ಕಪಾಳಮೋಕ್ಷ ಮಾಡಿದ್ದಾರೆ.

'ಲವ್ ರೆಡ್ಡಿ' ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿತ್ತು. ಯುವ ಪ್ರತಿಭೆಗಳ ಈ ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇದೊಂದು ಲವ್ ಕಮ್ ಎಮೋಷನಲ್ ಸ್ಟೋರಿ ಆಗಿರುವುದಿಂದ ತೆಲುಗು ಪ್ರೇಕ್ಷಕರು ಕೂಡ ಇಷ್ಟ ಪಟ್ಟಿದ್ದಾರೆ. ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಥಿಯೇಟರ್‌ಗೆ ಹೋಗಿ ಪ್ರೇಕ್ಷಕರೊಂದಿಗೆ ಸಂಭ್ರಮಿಸುವುದು ಚಿತ್ರತಂಡದ ಆಲೋಚನೆಯಾಗಿತ್ತು. ಆದರೆ, ಮಹಿಳೆಯಿಂದ ಎಲ್ಲಾ ತಲೆ ಕೆಳಗಾಗಿದೆ.

Women slapped Kannada actor NT Ramaswamy while promoting Love Reddy movie in Nizampet Hyderabad

ಕನ್ನಡದ ನಟ ಎನ್‌ಟಿ ರಾಮಸ್ವಾಮಿ 'ಲವ್ ರೆಡ್ಡಿ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರಕ್ಕೂ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗೆ ಅಲ್ಲಿನ ವಿಮರ್ಶಕರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಹೈದರಾಬಾದ್‌ನಲ್ಲಿರುವ ನಿಜಾಂಪೇಟ್‌ನ ಜಿಪಿಆರ್ ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಎನ್‌ಟಿ ರಾಮಸ್ವಾಮಿಗೆ ಮಹಿಳೆ ಏಕಾಏಕಿ ಥಳಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಏನಿದು ಘಟನೆ? ಯಾಕೆ ಹೀಗಾಯ್ತು? ತಿಳಿಯಲು ಮುಂದೆ ಓದಿ.

ಕೆಲವು ಸಿನಿಮಾಗಳು, ಕೆಲವು ಪಾತ್ರಗಳು ಪ್ರೇಕ್ಷಕರ ಮೇಲೆ ಇನ್ನಿಲ್ಲದ ಪ್ರಭಾವ ಬೀರುತ್ತವೆ. ಪ್ರೇಕ್ಷಕರು ಆ ಸಿನಿಮಾದೊಳಗೆ ಮುಳುಗಿ ಹೋಗಿರುತ್ತಾರೆ. ಅದರಲ್ಲೂ ಸಿನಿಮಾದ ಪಾತ್ರಗಳು ಪ್ರೇಕ್ಷಕರ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರುತ್ತವೆ. ಇಂತಹ ಸಂದರ್ಭದಲ್ಲಿ ತಮ್ಮ ನೆಚ್ಚಿನ ಪಾತ್ರಗಳಿಗೆ ಏನಾದರೂ ತೊಂದರೆಯಾದರೆ, ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದು ಬಿಡುತ್ತೆ. ಕನ್ನಡದ ನಟ ಎನ್‌ ಟಿ ರಾಮಸ್ವಾಮಿ ಮೇಲೆ ಮಹಿಳೆ ಹಲ್ಲೆ ಮಾಡುವುದಕ್ಕೂ ಇದೇ ಕಾರಣ.

ಸ್ಮರಣ್ ರೆಡ್ಡಿ ಎಂಬುವವರ ನಿರ್ದೇಶಿಸಿದ 'ಲವ್ ರೆಡ್ಡಿ' ಸಿನಿಮಾದಲ್ಲಿ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾ ಟೈಟಲ್‌ನಿಂದಲೇ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟ ಎನ್‌ ಟಿ ರಾಮಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರವೇ ಹೈದರಾಬಾದ್‌ನ ಮಹಿಳೆಗೆ ಕೋಪ ತರಿಸಿತ್ತು. ಹಾಗಾಗಿ ಏಕಾಏಕಿ ಬಂದು ನಟನನ್ನು ಥಳಿಸುವುದಕ್ಕೆ ಶುರು ಮಾಡಿದ್ದಾರೆ.

'ಲವ್ ರೆಡ್ಡಿ'ಯೊಂದು ನೈಜ ಘಟನೆಯನ್ನು ಆಧರಿಸಿದ ಪ್ರೇಮಕಥೆ. ಈ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಎನ್‌ಟಿ ರಾಮಸ್ವಾಮಿ ಪಾತ್ರ ಕೂಡ ಅಷ್ಟೇ ಹೈಲೈಟ್ ಆಗಿದೆ. ನಾಯಕಿಯ ತಂದೆಯ ಪಾತ್ರದಲ್ಲಿ ಎನ್‌ ಟಿ ರಾಮಸ್ವಾಮಿ ನಟಿಸಿದ್ದಾರೆ. ಇನ್ನೇನು ಸಿನಿಮಾದ ಕ್ಲೈಮ್ಯಾಕ್ಸ್‌ ಮುಗಿತ್ತು. ಸಿನಿಮಾ ತಂಡ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಕ್ಲೈಮ್ಯಾಕ್ಸ್ ಸೀನ್ ನೋಡಿ ಮಹಿಳೆ ಭಾವುಕರಾಗಿದ್ದಾರೆ.

'ಲವ್ ರೆಡ್ಡಿ' ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಕನ್ನಡದ ನಟ ಎನ್ ಟಿ ರಾಮಸ್ವಾಮಿ ನಟಿಸಿದ್ದರು. ಅವರ ಪಾತ್ರದ ಮೇಲೆ ಕೋಪಗೊಂಡು ಥಳಿಸುವುದಕ್ಕೆ ಮಾಡಿದ್ದಾರೆ. "ಈ ಪ್ರೇಮಿಗಳನ್ನು ಬೇರೆ ಮಾಡುವುದಕ್ಕೆ ಹೊರಟಿದ್ದೀಯಾ?" ಎಂದು ನಟ ರಾಮಸ್ವಾಮಿಯ ಕೊರಳಪಟ್ಟಿ ಹಿಡಿದು ಶಾಪ ಹಾಕಿದ್ದಾಳೆ. ಏಕಾಏಕಿ ನಟಿ ಹಲ್ಲೆಗೆ ಮುಂದಾಗಿದ್ದರಿಂದ 'ಲವ್ ರೆಡ್ಡಿ' ತಂಡ ಬೆಚ್ಚಿಬಿದ್ದಿತ್ತು. ಅಸಲಿಗೆ ಈ ಘಟನೆ ನಿಜವೇ? ಸಿನಿಮಾ ಪ್ರಚಾರಕ್ಕೆ ಹೀಗೆ ಮಾಡಿದರೇ? ಒಂದು ವೇಳೆ ಪ್ರಚಾರದ ಗಿಮಿಕ್ ಆಗಿದ್ದರೆ, ಕನ್ನಡದ ನಟನನ್ನು ಬಲಿಪಶು ಮಾಡಿದ್ದಾರೆಯೇ? ಅನ್ನೋ ಪ್ರಶ್ನೆಯಂತೂ ಎದ್ದಿದೆ.

More from Filmibeat

English summary
Women slapped Kannada actor NT Ramaswamy while promoting Love Reddy movie in Nizampet Hyderabad;
Read more about: tollywood women filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X