Breaking:ರಾಜಮೌಳಿ ವಿರುದ್ಧ ಯಮದೊಂಗ ನಿರ್ಮಾಪಕನಿಂದಲೇ ಗಂಭೀರ ಆರೋಪ: ಪೊಲೀಸರಿಗೆ ಬರೆದ ಪತ್ರದಲ್ಲೇನಿದೆ?
ಗ್ಲೋಬಲ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು 29ನೇ ಸಿನಿಮಾವನ್ನು ನಿರ್ದೇಶನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ರಾಜಮೌಳಿ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದೆ. ಉಪ್ಪಾಳಪಟ್ಟಿ ಶ್ರೀನಿವಾಸ ರಾವ್ ಎನ್ನುವ ವ್ಯಕ್ತಿ ರಾಜಮೌಳಿ ವಿರುದ್ಧ ವಿರುದ್ಧ ತಿರುಗಿಬಿದ್ದಿದ್ದಾರೆ.
ರಾಜಮೌಳಿ ತನಗೆ ಸಿಕ್ಕಾಪಟ್ಟೆ ಚಿತ್ರ ಹಿಂಸೆಯನ್ನು ನೀಡಿದ್ದು, ಬದುಕನ್ನೇ ಕೊನೆಗೊಳಿಸಿಕೊಳ್ಳುವಂತೆ ಪ್ರಚೋದನೆ ನೀಡಿದ್ದರು ಎಂದು ಆರೋಪ ಮಾಡಿದ್ದಾರೆ. ಇಷ್ಟೆಲ್ಲ ಆರೋಪ ಮಾಡಿರುವ ಉಪ್ಪಾಳಪಟ್ಟಿ ಶ್ರೀನಿವಾಸ ರಾವ್ ನಿರ್ದೇಶಕ ರಾಜಮೌಳಿ ತನ್ನ ಅತ್ಯುತ್ತಮ ಗೆಳೆಯ ಎಂದು ಹೇಳಿಕೊಂಡಿದ್ದಾರೆ. ಹಾಗೇ ಜೂ.ಎನ್‌ಟಿಆರ್ ನಟಿಸಿದ 'ಯಮದೊಂಗ' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಎಂದೂ ಹೇಳಿಕೊಂಡಿದ್ದಾನೆ.

ಉಪ್ಪಾಳಪಟ್ಟಿ ಶ್ರೀನಿವಾಸ ರಾವ್ ಈ ಬಗ್ಗೆ ಒಂದು ಬಹಿರಂಗ ಪತ್ರ ಬರೆದಿದ್ದು, ಇದರಲ್ಲಿ 'ಬಾಹುಬಲಿ' ನಿರ್ದೇಶಕ ಎಸ್ ಎಸ್ ರಾಜಮೌಳಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಗಿ ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಈ ಪತ್ರವನ್ನು ಮೆಟ್ಟುಗುಡ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿ ಕೊಟ್ಟಿದ್ದಾನೆ. ಹಾಗಿದ್ದರೆ ಈ ಪತ್ರದಲ್ಲಿ ಶ್ರೀನಿವಾಸ ರಾವ್ ಮಾಡಿರುವ ಆರೋಪಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ತಾನು ಹಾಗೂ ಬಾಹುಬಲಿ ನಿರ್ದೇಶಕ ರಾಜಮೌಳಿ ಇಬ್ಬರೂ 1990ರಿಂದ ಸ್ನೇಹಿತರಾಗಿದ್ದೇವೆ. ರಾಜಮೌಳಿ ತನ್ನ ಬದುಕನ್ನೇ ನಾಶ ಮಾಡಿದ್ದಾನೆ. ತನಗೆ ಸಿಕ್ಕಾಪಟ್ಟೆ ಚಿತ್ರಹಿಂಸೆಯನ್ನು ನೀಡಿದ್ದಾನೆ. ಹಾಗೇ ತ್ರಿಕೋನ ಪ್ರೇಮಕಥೆ ತಮ್ಮಿಬ್ಬರ ನಡುವಿನ ದ್ವೇಷಕ್ಕೆ ಕಾರಣವಾಗಿತ್ತು ಎಂದು ರಾಜಮೌಳಿ ವಿರುದ್ಧ ಪೊಲೀಸರಿಗೆ ಬರೆದ ಪತ್ರದಲ್ಲಿ ಉಪ್ಪಾಳಪಟ್ಟಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ. ಈ ಪತ್ರ ಈಗ ಹಲವು ಅನುಮಾನಗಳನ್ನು ಹುಟ್ಟಾಕಿದೆ.
ಶ್ರೀನಿವಾಸ ರಾವ್ ಆರೋಪಗಳು ಇಲ್ಲಿಗೆ ಮುಗಿದಿಲ್ಲ. ರಾಜಮೌಳಿ ವಿರುದ್ಧ ಇನ್ನೂ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ. ತನ್ನ 55ನೇ ವರ್ಷದಲ್ಲಿ ಇನ್ನೂ ಕುವರನಾಗಿ ಇರುವುದಕ್ಕೆ ರಾಜಮೌಳಿಯೇ ಕಾರಣ. ಮಹಿಳೆಯ ಕಾರಣಕ್ಕೆ ತನಗೆ ರಾಜಮೌಳಿ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದರು ಎಂದು ಬರೆದಿದ್ದಾನೆ. ಹಾಗೇ ಮೂರು ಮಧ್ಯೆ ನಡೆದ ಈ ಘಟನೆಯನ್ನು ಸಾಬೀತು ಮಾಡುವುದಕ್ಕೆ ತನ್ನ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಕಾರಣಕ್ಕೆ ಹೀಗಾಗಿ ಬದುಕನ್ನು ಎಂಡ್ ಮಾಡುವುದು ಬಿಟ್ಟರೆ ತನ್ನ ಬಳಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ ಎಂದು ರಾಜಮೌಳಿಯನ್ನು ಈ ಪತ್ರದಲ್ಲಿ ದೂರಲಾಗಿದೆ. ಈ ಪತ್ರ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ಬಗ್ಗೆ ಗ್ಲೋಬಲ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ನಿಜಕ್ಕೂ ಇವರಿಬ್ಬರು ಸ್ಬೇಹಿತರೇ? ಯಮದೊಂಗ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದರೇ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಂತೂ ಹುಟ್ಟುಕೊಂಡಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಬೇಕಿದೆ.
ಸದ್ಯ ರಾಜಮೌಳಿ ಟಾಲಿವುಡ್‌ನ ಬಹುಬೇಡಿಕೆಯ ನಿರ್ದೇಶಕ. ತೆಲುಗು ಚಿತ್ರರಂಗವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗ ನಿರ್ದೇಶಕ. ಇಲ್ಲಿವರೆಗೂ ನಿರ್ದೇಶಿಸಿದ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸೋತಿಲ್ಲ. ಹೀಗಿದ್ದರೂ, ಸದಾ ವಿವಾದಗಳಿಂದ ದೂರವೇ ಉಳಿದಿದ್ದಾರೆ. ಹಾಗೇ ಯಾರನ್ನೂ ನೋಯಿಸುವುದಕ್ಕೂ ಹೋಗಿಲ್ಲ. ಸದ್ಯ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಇನ್ನೂ ಟೇಕಾಫ್ ಆಗಬೇಕಿದೆ.


Click it and Unblock the Notifications











