"ಪವನ್ ಕಲ್ಯಾಣ್ ಜೊತೆ ಡೇಟಿಂಗ್, ಪ್ರಭಾಸ್ ಜೊತೆ ಮದುವೆ ಆಗ್ತೀನಿ" ಎಂದ ತೆಲುಗಿನ ಈ ಯುವ ನಟಿ ಯಾರು?
ತೆಲುಗಿನಲ್ಲಿ 'ಜಾತಿರತ್ನಲು' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಯುವ ನಟಿ ಫರಿಯಾ ಅಬ್ದುಲ್ಲಾ. ಅಪ್ಪಟ ಹೈದರಾಬಾದ್ ಮೂಲದ ಈ ನಟಿ ಬಹುಮುಖ ಪ್ರತಿಭೆ. ಕೇವಲ ನಟನೆಯಷ್ಟೇ ಅಲ್ಲ. ಹಾಡುವುದರಲ್ಲೂ ಫೇಮಸ್. ಅದರಲ್ಲೂ ರ್‍ಯಾಪ್ ಸಾಂಗ್‌ಗಳನ್ನು ಹಾಡುವುದರಲ್ಲಿ ಫರಿಯಾ ಫೇಮಸ್. ಈಕೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿಯರ ಪ್ರಶ್ನೆಗೆ ಕೊಟ್ಟ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಫರಿಯಾ ಅಬ್ದುಲ್ಲಾಗೆ ಟಾಲಿವುಡ್‌ನಲ್ಲಿ ಉತ್ತಮ ಓಪನಿಂಗ್ ಸಿಕ್ಕಿತ್ತು. ಸಿನಿಮಾಗಳು ಗೆಲ್ಲುವುದಕ್ಕೆ ಶುರುವಾಗಿತ್ತು. ಕೆಲವು ಹೀರೋಯಿನ್‌ಗಳು ತನ್ನ ಸೌಂದರ್ಯ ಹಾಗೂ ನಟನೆ ಎರಡರಿಂದಲೂ ಮನಸ್ಸನ್ನು ಗೆದ್ದು ಬಿಡುತ್ತಾರೆ. ಇನ್ನು ಇವರು ಸ್ಟಾರ್ ನಟಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವಾಗಲೇ ಅವರ ವೃತ್ತಿ ಬದುಕಿ ಇಳಿಮುಖವಾಗುತ್ತಾ ಹೋಗುತ್ತೆ. ಇಂತಹ ನಟಿಯರಲ್ಲಿ ಫರಿಯಾ ಅಬ್ದುಲ್ಲಾರನ್ನು ಸೇರಿಸಬಹುದು.

ಫರಿಯಾ ತನಗೆ ಸಿಕ್ಕಿದ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಆಗಲಿಲ್ಲ. ಸಿನಿಮಾರಂಗದಲ್ಲಿ ಯಶಸ್ಸು ಕಂಡ ಈ ನಟಿ ಅಷ್ಟೇ ಬೇಗ ಸೋಲನ್ನೂ ನೋಡಬೇಕಾಯ್ತು. ಹೀಗಾಗಿ ಸ್ಟಾರ್ ನಟಿಯಾಗಬಹುದೆಂದು ನಿರೀಕ್ಷೆ ಮಾಡಿದ್ದ ಸಿನಿಮಾ ಮಂದಿಯ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿ ಹೋಯ್ತು. ಸದ್ಯಕ್ಕೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮಧ್ಯೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಪವನ್ ಕಲ್ಯಾಣ್ ಜೊತೆ ಡೇಟಿಂಗ್ ಪ್ರಭಾಸ್ ಜೊತೆ ಮದುವೆ ಆಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
'ಜಾತಿರತ್ನಲು' ತೆಲುಗು ಸಿನಿಮಾ ಮೂಲಕ ಫರಿಯಾ ಅಬ್ದುಲ್ಲಾ ಅವರ ಅಭಿಮಾನಿಗಳಿಗೆ ಚಿಟ್ಟಿ ಎಂದೇ ಫೇಮಸ್ ಆಗಿದ್ದಾರೆ. ಇವರ ನಗು, ನಟನೆಯನ್ನು ಇಷ್ಟಪಟ್ಟ ಅಭಿಮಾನಿಗಳು ತೆಲುಗಿನಲ್ಲಿ ಸ್ಟಾರ್ ನಟಿಯಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ಅಭಿಮಾನಿ ನಿರೀಕ್ಷೆ ಸುಳ್ಳಾಯ್ತು. ತೆಲುಗಿನ ಸೂಪರ್‌ಸ್ಟಾರ್‌ಗಳ ಜೊತೆ ನಟಿಸುವುದಕ್ಕೆ ಅವಕಾಶವೇ ಸಿಗಲಿಲ್ಲ. ಸಿಕ್ಕರೂ ಅತಿಥಿ ಪಾತ್ರಗಳಿಗೆ ಮೀಸಲಾಗಿಬಿಟ್ಟಿತು. ಇದೇ ನಟಿಯ ಸಂದರ್ಶನವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತೆಲುಗು ನಟಿ ಫರಿಯಾ ಅಬ್ದುಲ್ಲಾ ಇತ್ತೀಚೆಗೆ ತೆಲುಗಿನ ಸ್ಟಾರ್ ನಿರೂಪಕಿ ಸುಮಾ ಅವರ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಹೋಗಿದ್ದರು. ಈ ವೇಳೆ ತೆಲುಗು ಮೂವರು ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತಾಡಿದ್ದಾರೆ. ಪವನ್ ಕಲ್ಯಾಣ್, ನಾಗಾರ್ಜುನ ಹಾಗೂ ಪ್ರಭಾಸ್ ಅಂದರೆ ಇಷ್ಟ. ಅವರೊಂದಿಗೆ ಯಾವಾಗಲೂ ನಟಿಸುವುದಕ್ಕೆ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ನಿರೂಪಕಿ ಸುಮಾ ಕೇಳಿದ ಪ್ರಶ್ನೆಗಳಿಗೆ ಫರಿಯಾ ನೇರವಾಗಿ ಉತ್ತರ ಕೊಟ್ಟಿದ್ದು, ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.
ಅಂದ್ಹಾಗೆ ನಿರೂಪಕಿ ಸುಮಾ ತಮ್ಮ ಪಾಡ್‌ಕಾಸ್ಟ್‌ನಲ್ಲಿ ತೆಲುಗಿನ ಇದೇ ಮೂವರು ಸೂಪರ್‌ಸ್ಟಾರ್‌ಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ನಾಗಾರ್ಜುನ, ಪವನ್ ಕಲ್ಯಾಣ್ ಹಾಗೂ ಪ್ರಭಾಸ್ ಈ ಮೂವರಲ್ಲಿ ಯಾರೊಂದಿಗೆ ಡೇಟಿಂಗ್ ಮಾಡುತ್ತೀರ, ಪ್ರೀತಿ ಮಾಡುತ್ತೀರ ಹಾಗೂ ಯಾರೊಂದಿಗೆ ಮದುವೆ ಆಗುತ್ತೀರ ಎಂದು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಫರಿಯಾ ಅಬ್ದುಲ್ಲಾ ಕೊಟ್ಟ ಉತ್ತರ ಹೀಗಿತ್ತು. ಪವನ್ ಕಲ್ಯಾಣ್ ಜೊತೆ ಡೇಟಿಂಗ್ ಮಾಡುತ್ತೇನೆ. ನಾಗಾರ್ಜುನ ಅವರನ್ನು ಪ್ರೀತಿ ಮಾಡುತ್ತೇನೆ ಹಾಗೂ ಪ್ರಭಾಸ್ ಜೊತೆ ಮದುವೆ ಆಗುತ್ತೇನೆ ಎಂದು ಗೊಂದಲಕ್ಕೆ ಒಳಗಾಗದೇ ಹೇಳಿಕೊಂಡಿದ್ದಾರೆ. ಈ ಪಾಡ್‌ಕಾಸ್ಟ್‌ನ ವಿಡಿಯೋವನ್ನು ನಿರೂಪಕಿ ಸುಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫರಿಯಾಗೆ ತೆಲುಗಿನಲ್ಲಿ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ಅತಿಥಿಯಾಗಿ, 'ಬಂಗಾರ್‌ರಾಜು' ಚಿತ್ರದಲ್ಲಿ ಐಟಂ ಸಾಂಗ್, ಪ್ರಭಾಸ್ ನಟಿಸಿದ 'ಕಲ್ಕಿ 2898 AD' ಸಿನಿಮಾದಲ್ಲೂ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಾಯಕಿಯಾಗಿ ನಟಿಸಿದ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ತಮಿಳು ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆ. ದಳಪತಿ ವಿಜಯ್ ಪುತ್ರ ಜಸನ್ ವಿಜಯ್ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾಗೆ ಇವರೇ ನಾಯಕಿ ಎಂಬ ಸುದ್ದಿ ಕೂಡ ಓಡಾಡುತ್ತಿದೆ. ಸದ್ಯ ಈ ಬಗ್ಗೆ ಇನ್ನೂ ಅಧಿಕೃತ ಸುದ್ದಿ ಹೊರಬಿದ್ದಿಲ್ಲ.


Click it and Unblock the Notifications











