ಚಲನಚಿತ್ರಗಳ ಒಳನೋಟ
ಡಾಲಿ ಧನಂಜಯ್ ಅಭಿನಯದ 'ಗುರುದೇವ್ ಹೊಯ್ಸಳ' ಸಿನಿಮಾ ಮಾರ್ಚ್ ೩೦ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಳೆದ ವರ್ಷ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಡಾಲಿಗೆ ನಿರೀಕ್ಷಿಸಿದ್ದಷ್ಟು ಯಶಸ್ಸು ಸಿಕ್ಕಿರಲಿಲ್ಲ. 'ಗುರುದೇವ್ ಹೊಯ್ಸಳ' ಧನಂಜಯ್ ಅವರ ಈ ವರ್ಷದ ಮೊದಲ ಚಿತ್ರ. ಈ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಡಾಲಿ ಪೊಲೀಸ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. 'ಗುರುದೇವ್ ಹೊಯ್ಸಳ' ವಿದೇಶದಾಲ್ಲೂ ರಿಲೀಸ್ ಆಗಲಿದ್ದು, ಎಲ್ಲಾ ಕಡೆ ಕನ್ನಡದಲ್ಲೇ ಬಿಡುಗಾಡೆಯಾಗುತ್ತಿರುವುದು ವಿಶೇಷ.