twitter
    X
    Home ಚಲನಚಿತ್ರಗಳ ಒಳನೋಟ

    ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಮೊದಲ ದಿನದ ಕಲೆಕ್ಷನ್, ರೇಟಿಂಗ್ ರಿಪೋರ್ಟ್ ಇಲ್ಲಿದೆ.

    Author Sowmya Bairappa | Published: Friday, January 27, 2023, 12:12 PM [IST]

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿ ಯಶವಿ ಪ್ರದರ್ಶನ ಕಾಣುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ಅಕ್ಷರ ಕ್ರಾಂತಿಯ ಬಗ್ಗೆ ತೋರಿಸಲಾಗಿದೆ. ಈ ಸಿನಿಮಾದಲ್ಲಿ ದರ್ಶನ್ ಖಾಸಗಿ ಶಾಲೆಗಳ ಮಾಫಿಯಾ ವಿರುದ್ಧ ಹೋರಾಡುವ ನಾಯಕನಾಗಿ ಅಬ್ಬರಿಸಿದ್ದಾರೆ. ಜನವರಿ 26ರಂದು ಬೆಳಿಗ್ಗೆ ಆರು ಗಂಟೆಯಿಂದಲೇ ಶೋ ಆರಂಭವಾಗಿದ್ದು, ಅಭಿಮಾನಿಗಳು ದೊಡ್ಡ ಸಂಭ್ರಮಾಚರಣೆ ಮಾಡಿ ಸಿನಿಮಾವನ್ನು ಸ್ವಾಗತಿಸಿದ್ದರು. ಹೀಗಾಗಿ ಕ್ರಾಂತಿ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಎಂಬುದರ ಕುರಿತು ಎಲ್ಲಾರಲ್ಲೂ ಕುತೂಹಲವಿದೆ. ಕ್ರಾಂತಿ ಸಿನಿಮಾದ ಮೊದಲ ದಿನದ ಗಳಿಕೆ, ರೇಟಿಂಗ್, 2ನೇ ದಿನದ ಬುಕ್ಕಿಂಗ್ ಸೇರಿದಂತೆ ಹಲವು ಮಾಹಿತಿ ಇಲ್ಲಿದೆ.

    cover image
    ಮೊದಲ ದಿನದ ಕಲೆಕ್ಷನ್

    ಮೊದಲ ದಿನದ ಕಲೆಕ್ಷನ್

    1

    ಕ್ರಾಂತಿ ಸಿನಿಮಾದ ಮೊದಲ ದಿನಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಅದ್ಭುತವಾಗಿತ್ತು. ಮೊದಲ ದಿನ 600ಕ್ಕೂ ಹೆಚ್ಚು ಶೋಗಳು ಭರ್ತಿಯಾಗಿದ್ದವು. ಹಾಗಾಗಿ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಮೊದಲ ದಿನ ಅಂದಾಜು 11 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬುದು ಬಾಕ್ಸಾಫೀಸ್ ಸಿನಿಮಾ ಪಂಡಿತರ ಲೆಕ್ಕಾಚಾರ. 

    ಮೈಸೂರಿನಲ್ಲಿ ಒಳ್ಳೆಯ ಕಲೆಕ್ಷನ್

    ಮೈಸೂರಿನಲ್ಲಿ ಒಳ್ಳೆಯ ಕಲೆಕ್ಷನ್

    2

    ಬೆಂಗಳೂರಿನಲ್ಲಿ ಬಿಟ್ಟರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ಕ್ರಾಂತಿ' ಸಿನಿಮಾ ಫೀವರ್ ಜಾಸ್ತಿಯಿತ್ತು. ಅದಕ್ಕೆ ತಕ್ಕ ಹಾಗೆ ಶೋಗಳು, ಬುಕ್ಕಿಂಗ್ ಕೂಡ ಆಗಿತ್ತು. ಮೈಸೂರಿನಲ್ಲಿ ಮೊದಲ ದಿನ ಕ್ರಾಂತಿ ಸಿನಿಮಾ ಅಂದಾಜು 83 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿದೆ. ಈ ಹಿಂದೆ ಕೆಜಿಎಫ್ 2, ಜೇಮ್ಸ್ ಸಿನಿಮಾಗಳು ಮಾತ್ರ ಮೈಸೂರಿನಲ್ಲಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದವು. ಇದೀಗ ಮೂರನೇ ಸ್ಥಾನದಲ್ಲಿ ಕ್ರಾಂತಿ ಸಿನಿಮಾವಿದೆ.  

    ಗೂಗಲ್, ಬುಕ್ ಮೈ ಶೋ, ಐಎಂಡಿಬಿ ರೇಟಿಂಗ್

    ಗೂಗಲ್, ಬುಕ್ ಮೈ ಶೋ, ಐಎಂಡಿಬಿ ರೇಟಿಂಗ್

    3

    ಕ್ರಾಂತಿ ಸಿನಿಮಾ ಮೊದಲ ದಿನ ಎಲ್ಲೆಡೆ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ. ಗೂಗಲ್ ನಲ್ಲಿ ಕ್ರಾಂತಿ ಸಿನಿಮಾಗೆ ಮೊದಲ ದಿನ 2,500 ಬಳಕೆದಾರರು ವೋಟ್ ಮಾಡಿದ್ದು, 5ಕ್ಕೆ 4.5 ಸ್ಟಾರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜನಪ್ರಿಯ ಬುಕಿಂಗ್ ಅಪ್ಲಿಕೇಶನ್ ಬುಕ್ ಮೈ ಶೋನಲ್ಲಿ ಕ್ರಾಂತಿ ಸಿನಿಮಾ 10ಕ್ಕೆ 6100 ಮತಗಳೊಂದಿಗೆ 9.5 ಸ್ಟಾರ್ ಪಡೆದುಕೊಂಡಿದೆ. ಐಎಂಡಿಬಿಯಲ್ಲಿ ಮೊದಲ ದಿನ 1,500 ಮತಗಳನ್ನು ಪಡೆದುಕೊಂಡಿರುವ ಕ್ರಾಂತಿ, 10ಕ್ಕೆ 8.3 ಸ್ಟಾರ್ ಪಡೆದುಕೊಂಡಿದೆ. 

    ಸಿನಿಮಾ ಕಥೆ

    ಸಿನಿಮಾ ಕಥೆ

    4

    ಹಣಬಲ, ಬಾಹುಬಲವುಳ್ಳ ಎನ್‌ಆರ್‌ಐ ವ್ಯಕ್ತಿಯೊಬ್ಬ ಖಾಸಗಿ ಶಾಲೆಗಳ ಮೇಲೆ ಸಮರ ಸಾರುವ ಹಾಗೂ ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗುವಂತೆ ಮಾಡುವ ಕಥೆಯನ್ನು ಕ್ರಾಂತಿ ಸಿನಿಮಾ ಹೊಂದಿದೆ.  

     

    2ನೇ ದಿನದ ಬುಕ್ಕಿಂಗ್ ಹೇಗಿದೆ?

    2ನೇ ದಿನದ ಬುಕ್ಕಿಂಗ್ ಹೇಗಿದೆ?

    5

    ಜನವರಿ 26ರಂದು ಗಣರಾಜ್ಯೋತ್ಸವ ರಜೆ ಹಿನ್ನೆಲೆಯಲ್ಲಿ 'ಕ್ರಾಂತಿ' ಸಿನಿಮಾ ನೋಡಲು ದೊಡ್ಡ ಸಂಖ್ಯೆಯಲ್ಲಿ ಸಿನಿರಸಿಕರು ಮುಗಿಬಿದ್ದಿದ್ದರು. ಬುಕ್ಕಿಂಗ್ ಜೊತೆಗೆ ಕಲೆಕ್ಷನ್ ಕೂಡ ಜೋರಾಗಿತ್ತು.  ಆದರೆ, 2ನೇ ದಿನ ಕೆಲಸದ ದಿನವಾಗಿದ್ದರಿಂದ ಬುಕ್ಕಿಂಗ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿಲ್ಲ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X