ಅಪ್ಪು ಇಲ್ಲದೇ ಒಂದು ವರ್ಷ: ಪುನೀತ್ ಅವರಿಂದ ನಾವು ಕಲಿಯಬೇಕಾದ ವಿಷಯಗಳು ಇವು

  ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಪುನೀತ್ ಅಕಾಲಿಕ ಮರಣಕ್ಕೊಳಗಾಗಿ ವರ್ಷ ಕಳೆದಿದ್ದರೂ ಸಹ ಇನ್ನೂ ಅಪ್ಪು ಅವರ ನೆನಪು ಮರೆಯಾಗಿಲ್ಲ. ಒಂದು ವರ್ಷದಲ್ಲಿ ಅವರ ಬಗ್ಗೆ ಚರ್ಚಿಸದ, ಅವರನ್ನು ನೆನೆಯದ, ಅವರ ಫೋಟೊವನ್ನು ಒಮ್ಮೆಯಾದರೂ ನೋಡದ ದಿನವೇ ಇಲ್ಲ ಎನ್ನಬಹುದು. ಎಷ್ಟೇ ದೊಡ್ಡ ಕಲಾವಿದನಾದರೂ ಪುನೀತ್‌ ರಾಜ್‌ಕುಮಾರ್‌ ಸರಳತೆ, ವಿನಯತೆ ಎಲ್ಲರಿಗೂ ಮಾದರಿ. ಅವರು ಸಾರ್ಥಕತೆಯ ಬದುಕನ್ನು ಬದುಕಿ ಹೋಗಿದ್ದಾರೆ. ಪುನೀತ್ ಅವರಿಂದ ನಾವು ಕಲಿಯಬೇಕಾದ ವಿಷಯಗಳು ಇಲ್ಲಿವೆ.
  1. ವಿನಯತೆ

  ಅಪ್ಪು ಅಂದ್ರೆ ವಿನಯತೆ, ಅಪ್ಪು ಅಂದ್ರೆ ಮುಗ್ಧತೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪ್ರತಿಯೊಬ್ಬರಿಗೂ ಗೌರವ ಕೊಡುತ್ತಿದ್ದರು. ಸಿನಿಮಾಗಳಲ್ಲಿ ಆಗಲಿ, ಯಾವುದೇ ವೇದಿಕೆಯಲ್ಲಾಗಲಿ, ಕನ್ನಡದ ಕೋಟ್ಯಧಿಪತಿಯಲ್ಲಿ ನೋಡಿರಬಹುದು ತುಂಬಾ ವಿನಯತೆಯಿಂದ ನಡೆದುಕೊಳ್ಳುತ್ತಿದ್ದರು. ಎಷ್ಟೇ ದೊಡ್ಡ ಕಲಾವಿದನಾದರೂ ಕೂಡ ಎಲ್ಲರ ಜೊತೆ ಬೆರೆಯುತ್ತಿದ್ದರು. ಹೀಗಾಗಿಯೇ ಚಿಕ್ಕಮಕ್ಕಳಿಂದ ವಯಸ್ಸಾದವರ ವರೆಗೆ ಎಲ್ಲರು ಅಪ್ಪುವನ್ನು ಇಷ್ಟಪಡುತ್ತಿದ್ದರು.  

   

  Complete: Biography
  2. ಸಾಮಾಜಿಕ ಕಳಕಳಿ

  ಪುನೀತ್‌ ರಾಜ್‌ಕುಮಾರ್‌ ಅವರು ಎಲೆಮರೆ ಕಾಯಿಯಂತೆ ಅನಾಥಾಶ್ರಮ, ಗೋ ಶಾಲೆ, ಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವು, ವೃದ್ಧಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಚಲನಚಿತ್ರ ನಟರಾಗಿದ್ದರೂ 26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯಾಗಿದ್ದರು. ತಾವು ಹಾಡು ಹೇಳಿದ್ದರಿಂದ ಬಂದ ಹಣವನ್ನು ಕೂಡ ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದರು. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು.  

   

  Complete: Biography
  3. ಸರಳತೆ

  ಪುನೀತ್​ ರಾಜ್​ಕುಮಾರ್​ ತುಂಬಾನೇ ಸರಳ ವ್ಯಕ್ತಿಯಾಗಿದ್ದರು ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಅವರು ನಡೆದುಕೊಳ್ಳುತ್ತಿದ್ದ ರೀತಿ ಇದಕ್ಕೆ ಸಾಕ್ಷಿ ಒದಗಿಸುತ್ತಿತ್ತು. ಪುನೀತ್​ ಯಾವಾಗಲೂ ಸಿಂಪಲ್​ ಆಗಿ ಬಟ್ಟೆ ಹಾಕುತ್ತಿದ್ದರು. ಬಟ್ಟೆ ವಿಚಾರದಲ್ಲಿ ಅವರು ಎಂದಿಗೂ ಆಡಂಬರ ಮಾಡಲಿಲ್ಲ. ಐಷಾರಾಮಿ ಕಾರುಗಳಿದ್ದರೂ ಅವರು ದರ್ಪ ತೋರಲಿಲ್ಲ. ಉಳಿದುಕೊಳ್ಳೋಕೆ ಅದ್ಭುತ ಮನೆ ಇದ್ದರೂ ದಿಕ್ಕು ಇಲ್ಲದವರಿಗೆ ಸೂರು ಕೊಡಿಸುವ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಲಿಲ್ಲ. ಇದರ ಜತೆಗೆ ಪುನೀತ್​ ಸಾಮಾನ್ಯರ ಜೊತೆ ಸಾಕಷ್ಟು ಬೆರೆಯುತ್ತಿದ್ದರು.

   

  Complete: Biography
  4. ಜೀವನ ತತ್ವಗಳು

  ಪುನೀತ್​ ರಾಜ್​ಕುಮಾರ್​ ಅವರು ಶಿಸ್ತಿನ ಜೀವನ ನಡೆಸುತ್ತಿದ್ದರು. ಅವರ ಸಿನಿಮಾಗಳು ಕೂಡ ಹಾಗೆಯೇ ಇರುತ್ತಿದ್ದವು. ಫ್ಯಾಮಿಲಿ ಸಮೇತ ಕುಳಿತು ನೋಡುವಂತಹ ಸಿನಿಮಾಗಳನನ್ನೇ ಮಾಡುತ್ತಿದ್ದರು. ಎಲ್ಲ ಸಿನಿಮಾಗಳಲ್ಲೂ ಸಮಾಜಕ್ಕೆ  ಒಂದು ಮೆಸೇಜ್ ಕೊಡುವಂತಹ ಕೆಲಸ ಮಾಡುತ್ತಿದ್ದರು. ಅದೇ ರೀತಿ ಅಪ್ಪು ಬೇಡದೆ ಇರುವಂತಹ ವಿಚಾರಗಳಿಗೆ ತಲೆ ಹಾಕುತ್ತಿರಲಿಲ್ಲ. ಯಾವುದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಅವರು ಜೀವನದಲ್ಲಿ ಕೆಲವು ತತ್ವಗಳು ಪಾಲಿಸಿಕೊಂಡು ಬದುಕಿದ್ದರು. 

   

  Complete: Biography
  5. ಸಹಾಯ ಮಾಡುವ ಮನೋಭಾವ
  ಬಾಲನಟರಾಗಿದ್ದಾಗಲೇ ರಾಷ್ಟ್ರ ಪ್ರಶಸ್ತಿ ಪಡೆದವರು ಅಪ್ಪು. ಪುನೀತ್ ಸ್ಟಾರ್ ಕುಂಟುಂಬದವರಾದರೂ ಡೌನ್ ಟು ಅರ್ಥ್ ಆಗಿದ್ದರು. ಎಲ್ಲರನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು. ಜೀವನದಲ್ಲಿ ಹಣ ಮುಖ್ಯವಲ್ಲ, ಗುಣ ಮುಖ್ಯ ಎಂದು ತೋರಿಸಿಕೊಟ್ಟವರು ಅಪ್ಪು. ಎಲ್ಲರಿಗೂ ಕೂಡ ತಮಗೆ ಆದಷ್ಟು ಸಹಾಯ ಮಾಡುತ್ತಿದ್ದರು. ಕನ್ನಡದ ಕೋಟ್ಯಧಿಪತಿಗೆ ಬಂದ ಹಲವಾರು ಜನರಿಗೆ ಸಹಾಯ ಮಾಡಿದ್ದರು. ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗದಂತೆ ಇರುತ್ತಿದ್ದರು. ಪರರ ಕಷ್ಟಗಳಿಗೆ ಸದ್ದಿಲ್ಲದೆ ಸ್ಪಂದಿಸುವ ಗುಣವಂತನಾಗಿದ್ದರು. ತನ್ನ ಸಂಪಾದನೆಯ ಹಣವನ್ನೇ ಸಮಾಜ ಸೇವೆಗೆ ಮುಡುಪಾಗಿಡುವ ಸಮಾಜ ಸೇವಕರಾಗಿದ್ದರು.   
  Complete: Biography
  6. ಪ್ರೀತಿ

  ಪುನೀತ್ ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಚಿಕ್ಕಮಕ್ಕಳೆಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಸದಾ ನಗುಮುಖದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದರು. ಸಮಾಜದಲ್ಲಿ ಪ್ರತಿಯಬ್ಬರ ಜೊತೆಗೆ ಬೆರೆಯುವ ಗುಣ ಹೊಂದಿದ್ದರು.  

   

  Complete: Biography
  Related Lists
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X