ಕರಾಟೆ ಕಿಂಗ್ ಶಂಕರನಾಗ್ ಅವಿಸ್ಮರಣೀಯ ಗೀತೆಗಳು
  Published: Wednesday, November 18, 2020, 11:08 AM [IST]
  ಕರಾಟೆ ಕಿಂಗ್ ಶಂಕರನಾಗ್ ತಮ್ಮ ವಿಭಿನ್ನ ವಿನೂತನ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಗುರುತನ್ನು ಬಿಟ್ಟು ಹೋಗಿದ್ದಾರೆ. ಪೋಲಿಸ್ ಪಾತ್ರಗಳಿಗೆ ಒಂದು ಗತ್ತು ನೀಡಿದವರಲ್ಲಿ ಶಂಕರ ನಾಗ್ ಪ್ರಮುಖರು. ಕೇವಲ ಆ್ಯಕ್ಸನ್ ಪಾತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ, ಕ್ಲಾಸಿಕ್ ಚಿತ್ರಗಳಲ್ಲೂ ನಟಿಸಿದ್ದಾರೆ. ಶಂಕರನಾಗ್ ಚಿತ್ರಗಳಲ್ಲಿನ ಬಹುತೇಕ ಗೀತೆಗಳು ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಯೇಸುದಾಸ್ ಧ್ವನಿಗಳಲ್ಲಿ ಮೂಡಿಬಂದು ಹಿಟ್ ಆಗಿವೆ. ಇಲ್ಲಿ ಶಂಕರನಾಗ್ ಟಾಪ್ 10 ಗೀತೆಗಳನ್ನು ನೀಡಲಾಗಿದೆ.
  1. ಬಂದಳೋ ಬಂದಳೋ ಕಾಂಚನಾ

  ಸಾಂಗ್ಲಿಯಾನ ಚಿತ್ರದ ಈ ಗೀತೆ ಹಂಸಲೇಖ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಮತ್ತು ಮಂಜುಳಾ ಗುರುರಾಜ್ ಕಂಠದಲ್ಲಿ ಮೂಡಿಬಂದಿತ್ತು. ಹಾಡಿನಲ್ಲಿ ಶಂಕರನಾಗ್ ಪ್ರೇಮದಿಂದ ಭವ್ಯಾರಿಗೆ ಕೀಟಲೆ ಮಾಡುವ ದೃಶ್ಯ ಕಾವ್ಯವಿತ್ತು.

  2. ಕೇಳದೇ ನಿಮಗೀಗ

  1981 ರಲ್ಲಿ ತೆರೆಕಂಡಿದ್ದ ಗೀತಾ ಚಿತ್ರದ ಈ ಗೀತೆ ಚಿ.ಉದಯಶಂಕರ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಕಂಠದಲ್ಲಿ ಮೂಡಿಬಂದಿದ್ದ ಈ ಗೀತೆ ಜನಪ್ರಿಯವಾಗಿತ್ತು.

  3. ಗೀತಾಂಜಲಿ

  1989 ರಲ್ಲಿ ತೆರೆಕಂಡಿದ್ದ CBI ಶಂಕರ್ ಚಿತ್ರದ ಈ ಗೀತೆ ಹಂಸಲೇಖ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಕಂಠದಲ್ಲಿ ಮೂಡಿಬಂದಿದ್ದ ಈ ಗೀತೆಯಲ್ಲಿ ಶಂಕರನಾಗ್ ಜೊತೆ ಸುಮನ್ ರಂಗನಾಥನ್ ಕಾಣಿಸಿಕೊಂಡಿದ್ದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X