twitter
    X
    Home ಚಲನಚಿತ್ರಗಳ ಒಳನೋಟ

    ಕುಡಿತ ಮತ್ತು ಕುಡುಕರ ಮೇಲಿರುವ ಕನ್ನಡದ ಜನಪ್ರಿಯ ಗೀತೆಗಳು

    Author Administrator | Updated: Saturday, February 27, 2021, 09:10 AM [IST]

    ಕನ್ನಡದ ಹಳೆಯ ಚಿತ್ರಗಳಲ್ಲಿ ಕುಡಿತವನ್ನು ದುರಭ್ಯಾಸವೆಂದು ತೋರಿಸುತ್ತಿದ್ದ ಚಿತ್ರಗಳು ಮುಂದೆ ಅದನ್ನು ಹಲವು ವಿಧಗಳಲ್ಲಿ ವೈಭವೀಕರಿಸಿದವು. ಮೊದಮೊದಲು ಚಿತ್ರಗಳ ಖಳರ ಕೈಯಲ್ಲಿ ಮಾತ್ರ ಕಾಣಿಸುತ್ತಿದ್ದ ಬಾಟಲ್ ಗಳು ನಂತರ ನಾಯಕ-ನಾಯಕಿರ ಕೈಗೂ ಬಂದವು. ಕನ್ನಡದಲ್ಲಿ ಕುಡಿತದ ಮೇಲಿರುವ ಅತ್ಯುತ್ತಮ ಗೀತೆಗಳನ್ನು ನೀಡಲಾಗಿದೆ.

    cover image

    ಸಾರಾಯಿ ಶೀಷೆಯಲಿ

    ಅಭಿಜಿತ್ ಮತ್ತು ಶೃತಿ ನಟಿಸಿದ್ದ `ಮಾಂಗಲ್ಯ ಸಾಕ್ಷಿ' ಚಿತ್ರದ `ಸಾರಾಯಿ ಶೀಷೆಯಲಿ' ಗೀತೆ ತನ್ನ ಪ್ರೀತಿಯನ್ನು ಕಳೆದುಕೊಂಡ ವ್ಯಥೆಯಿಂದ ಕುಡಿಯುವ ನಾಯಕನ ಸ್ಥಿತಿಯನ್ನು ಹೇಳುತ್ತದೆ. ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಕಂಠದಲ್ಲಿ ಮೂಡಿಬಂದ ಈ ಗೀತೆ ಇಂದಿಗೂ ಸಾಕಷ್ಟು ಜನಪ್ರಿಯತೆ ಪಡೆದಿದೆ.

    ಕುಡಿಯೋದೇ ನನ್ನ ವೀಕ್ನೆಸ್ಸು

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪೂನಂ ಧಿಲ್ಲೋನ್ ನಟಿಸಿದ್ದ ಯುದ್ಧಕಾಂಡ ಚಿತ್ರ 1989 ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಹಂಸಲೇಖ ಸಾಹಿತ್ಯ ಬರೆದು ಸಂಗೀತ ನೀಡಿದ್ದ ಕುಡಿಯೋದೇ ನನ್ನ ವೀಕ್ನೆಸ್ಸು ಗೀತೆ ಗಮನ ಸೆಳೆದಿತ್ತು. ಈ ಗೀತೆಯನ್ನು ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಹಾಡಿದ್ದರು.

    ಒಳಗೆ ಸೇರಿದರೆ ಗುಂಡು

    ರಾಘವೇಂದ್ರ ರಾಜಕುಮಾರ್ ಮತ್ತು ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಂಜುಂಡಿ ಕಲ್ಯಾಣ ಚಿತ್ರ 1989 ರಲ್ಲಿ ತೆರೆಕಂಡಿತ್ತು. ಈ ಚಿತ್ರದ `ಒಳಗೆ ಸೇರಿದರೆ ಗುಂಡು' ಗೀತೆಯಲ್ಲಿ ಮಾಲಾಶ್ರೀ ಕುಡಿದು ತೂರಾಡುವ ಮಹಿಳೆ ಪಾತ್ರದಲ್ಲಿ ನಟಿಸಿದ್ದರು. ಉಪೇಂದ್ರ ಕುಮಾರ್ ಸಂಗೀತದಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ಮಂಜುಳಾ ಗುರುರಾಜ್ ಅದ್ಭುತವಾಗಿ ಹಾಡಿದ್ದರು.

    ಖಾಲಿ ಕ್ವಾಟರ್

    ಶರಣ್ ಮತ್ತು ಅಸ್ಮಿತಾ ಸೂದ್ ನಟಿಸಿದ್ದ ವಿಕ್ಟರಿ ಚಿತ್ರ 2013 ರಲ್ಲಿ ತೆರೆಕಂಡಿತ್ತು. ಅರ್ಜುನ ಜನ್ಯ ಸಂಗೀತ ನೀಡಿರುವ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ ಖಾಲಿ ಕ್ವಾಟರ್ ಗೀತೆ ಕುಡುಕರ ಹಾಟ್ ಫೇವರೇಟ್ ಗೀತೆಯಾಗಿದೆ. ಈ ಗೀತೆ ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು.

    ನಾವ್ ಮನೇಗ್ ಹೋಗೋದಿಲ್ಲ

    ಶರಣ್ ಮತ್ತೆ ದ್ವಿಪಾತ್ರದಲ್ಲಿ ನಟಿಸಿದ್ದ ವಿಕ್ಟರಿ 2 ಚಿತ್ರ 2018 ರಲ್ಲಿ ತೆರೆಕಂಡಿತು. ಈ ಚಿತ್ರಕ್ಕೂ ಯೋಗರಾಜ್ ಭಟ್ `ನಾವ್ ಮನೇಗ್ ಹೋಗೋದಿಲ್ಲ' ಗೀತೆಯನ್ನು ಬರೆದರು. ಅರ್ಜುನ ಜನ್ಯ ಸಂಗೀತದಲ್ಲಿ ಮೂಡಿಬಂದ ಈ ಗೀತೆಯನ್ನು ವಿಜಯ್ ಪ್ರಕಾಶ್ ಹಾಡಿದ್ದರು.

    ಹಾಲು ಕುಡಿದ ಮಕ್ಕಳೆ

    ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ನಟಿಸಿದ್ದ ದನಕಾಯೋನು ಚಿತ್ರ 2016 ರಲ್ಲಿ ತೆರೆ ಕಂಡಿತ್ತು. ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ `ಹಾಲು ಕುಡಿದ ಮಕ್ಕಳೆ' ಗೀತೆಯನ್ನು ಶರಣ್ ಹಾಡಿದ್ದರು. ವಿ ಹರಿಕೃಷ್ಣ ಸಂಗೀತ ನೀಡಿದ್ದರು.

    `ಫೋನು ಇಲ್ಲ, ಮೆಸೇಜ್ ಇಲ್ಲ"

    ನಂದಕಿಶೋರ್ ನಿರ್ದೇಶನದ ಶರಣ್, ಚಿಕ್ಕಣ್ಣ, ರವಿಶಂಕರ್ ಮತ್ತು ಹೀಬಾ ಪಟೇಲ್ ಮುಖ್ಯ ಪಾತ್ರದಲ್ಲಿ ನಟಸಿದ್ದ ಅಧ್ಯಕ್ಷ ಚಿತ್ರ 2014 ರಲ್ಲಿ ಬಿಡುಗಡೆಯಾಯಿತು. ಯೋಗರಾಜ್ ಭಟ್ ಬರೆದಿದ್ದ `ಫೋನು ಇಲ್ಲ, ಮೆಸೇಜ್ ಇಲ್ಲ" ಗೀತೆಯನ್ನು ವಿಜಯ್ ಪ್ರಕಾಶ್ ಹಾಡಿದ್ದರು. ಅರ್ಜುನ ಜನ್ಯ ಸಂಗೀತ ನೀಡಿದ್ದರು.

    ಎಣ್ಣೆ ನಮ್ದು ಎಣ್ಣೆ ನಿಮ್ದು

    ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಕನಕ ಚಿತ್ರದಲ್ಲಿ ದುನಿಯಾ ವಿಜಯ್, ಮಾನ್ವಿತಾ ಮತ್ತು ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ `ಎಣ್ಣೆ ನಮ್ದು ಎಣ್ಣೆ ನಿಮ್ದು' ಗೀತೆಯನ್ನು ನವೀನ ಸಜ್ಜು ಬರೆದು ಸಂಗೀತ ನೀಡಿ ಹಾಡಿದ್ದರು.

    ಸಿಂಗ - 'ಶ್ಯಾನೆ ಟಾಪಗವ್ಳೆ'

    ಚಿರಂಜೀವಿ ಸರ್ಜಾ ಮತ್ತು ಆದಿತಿ ಪ್ರಭುದೇವ ನಟನೆಯ 'ಸಿಂಗ' ಚಿತ್ರದ ಶ್ಯಾನೆ ಟಾಪಗವ್ಳೆ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡು ಯುವಕರ ಫೆವರಿಟ್ ಆಗಿತ್ತು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X