ಬಿಗ್ ಬಾಸ್ ಕನ್ನಡದ ಪ್ರತಿ ಸೀಸನ್‌ನಲ್ಲೂ ಒಂದು ಅಥವಾ ಎರಡು ಲವ್ ಸ್ಟೋರಿಗಳನ್ನು ಕಾಣಬಹುದು. ಈ ಸೀಸನ್‌ನಲ್ಲಿ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ನಡುವೆ ಏನೋ ನಡೀತಿದೆ ಅಂತ ಸ್ಪರ್ಧಿಗಳು ರೇಗಿಸುತ್ತಿದ್ದರು. ನರಕದಲ್ಲಿದ್ದ ರಂಜಿತ್ ಈಗ ಸ್ವರ್ಗಕ್ಕೆ ಹೋಗಿದ್ದಾರೆ. ಹೀಗಾಗಿ ನರಕದಲ್ಲಿರುವ ಅನುಷಾ ಅವರು ರಂಜಿತ್ ಹಾಗೂ ಧರ್ಮ ಜೊತೆ ಮಾತನಾಡಿದ್ರೆ, ಐಶ್ವರ್ಯ ಅವರಿಗೆ ಹೊಟ್ಟೆಕಿಚ್ಚು ಆಗುತ್ತಂತೆ. ಈ ವಿಷಯವನ್ನು ಸ್ವತಃ ಅನುಷಾ ಅವರೇ, ಚೈತ್ರಾ ಅವರ ಬಳಿ ಹೇಳಿಕೊಂಡಿದ್ದಾರೆ.
ಮೊದಲು ಚೈತ್ರಾ ಕುಂದಾಪುರ ಅವರು ಎಲ್ಲಿ, ಏನು ವರ್ಕೌಟ್ ಆಗುತ್ತೆ ಅಂತಾನೇ ಗೊತ್ತಾಗುತ್ತಿಲ್ಲ ಅಂದರು. ಆಗ ಅನುಷಾ ಸ್ನೇಹ ವರ್ಕೌಟ್ ಆಗಬಹುದು ಎಂದರು.
ಚೈತ್ರಾ: ಎಲ್ಲ ಕಡೆ ಆಗೋದಿಲ್ಲ. ಭವ್ಯಾ ಮತ್ತು ಐಶ್ವರ್ಯ ತುಂಬಾ ಕ್ಲೋಸ್ ಆಗಿದ್ದರು ಈಗ.
ಅನುಷಾ: ನಾನು ಧರ್ಮ ಜೊತೆ ಮಾತ್ರವಲ್ಲದೇ, ರಂಜಿತ್ ಜೊತೆ ಮಾತನಾಡಿದರೂ ಐಶ್ವರ್ಯಾ ಹೊಟ್ಟೆ ಉರಿದುಕೊಳ್ಳುತ್ತಾಳೆ.
ಚೈತ್ರಾ: ಮುಂದಿನ ದಿನಗಳಲ್ಲಿ ಕ್ಲಾರಿಟಿ ಸಿಗಬಹುದು.
ಅನುಷಾ: ಧರ್ಮನೇ ...ಅವನ ಹಿಂದೆ ಮುಂದೆ ಓಡಾಡುತ್ತಿರುತ್ತಾಳೆ. ಗೊತ್ತಿಲ್ಲದೇ ಮಾತನಾಡಬಾರದು. ಆದರೆ, ಕಣ್ಣಿಗೆ ಅದೇ ಕಾಣಿಸುತ್ತಿದೆ. ಅವರ ಬಾಯಲ್ಲಿ ಬಂದಿದ್ದಕ್ಕೆ ಅನ್ನಿಸಿತು. ನಾನೇ ಯೋಚನೆ ಮಾಡಲಿಲ್ಲ. ಒಟ್ಟಿಗೆ ಅಡುಗೆ ಮಾಡೋದು. ಅವನು ಹೋದಲ್ಲಿ, ಬಂದಲ್ಲಿ ಓಡಾಡುವುದು.
ಚೈತ್ರಾ: ಹಾರ್ಟ್ ಶೇಪ್‌ನಲ್ಲಿ ಚಪಾತಿ ಮಾಡಿದ್ರು.
ಅನುಷಾ: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ? ನನಗೆ ಹೊರಗಡೆ ಬಾಯ್‌ಫ್ರೆಂಡ್ ಇಲ್ಲ, ನಾನು ಸಿಂಗಲ್. ಎಂಗೇಜ್‌ಮೆಂಟ್ ಆಗಿಲ್ಲ. ಯಾರಾದ್ರೂ ಪ್ರೀತಿ ಕೊಡ್ತಾರೆ ಅನಿಸಿದರೆ ನೋಡೋಣ. ನನಗೆ ಈ ಮನೆಯಲ್ಲಿ ಹುಡುಗನೇ ಕೇಳಿದರೆ 'ಯೆಸ್' ಅಂತೀನಿ ಎಂದರು.
ಚೈತ್ರಾ: ಹೌದು ಡೆಸ್ಟಿನಿ ಅಂದುಕೊಳ್ಳಬಹುದು.
ನಾನು ಸಿಂಗಲ್, ಇಲ್ಲಿ ಯಾರಾದ್ರೂ ಪ್ರೀತಿ ಕೊಡ್ತಾರೆ ಅಂತ ಅನಿಸಿದ್ರೆ ನೋಡೋಣ: ಅನುಷಾ ರೈ -ಅನುಷಾ-ಚೈತ್ರಾ ಮಾತು /top-listing/bigg-boss-kannada-11-aishwarya-sindhogi-possessive-about-ranjith-and-dharma-keerthiraj-3-4863.html#ಅನುಷಾ-ಚೈತ್ರಾ-ಮಾತು-
ಬಿಗ್ ಬಾಸ್ ಎರಡನೇ ವಾರದ ಮೂರನೇ ದಿನ ಒಟ್ಟು ಮೂರು ಟಾಸ್ಕ್ ನೀಡಲಾಯಿತು. ಮೊದಲು ನ್ವೇಡ್ ಅಳಿವು-ಉಳಿವು ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದರು. ಈ ಟಾಸ್ಕ್‌ನಲ್ಲಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರದ ತುಂಡುಗಳನ್ನು ಮೀಸಲಿಟ್ಟ ವೇದಿಕೆಯಲ್ಲಿ ಇಡಬೇಕಿತ್ತು. ಇದರಲ್ಲಿ ಮೂರು ಸುತ್ತುಗಳನ್ನು ಗೆದ್ದು ನರಕವಾಸಿಗಳು ಜಯಶಾಲಿಗಳಾದಾರು. ಈ ಸಂದರ್ಭ ನರ್ಕವಾಸಿ ತಂಡದ ನಾಯಕ ಶಿಶಿರ್ ಅವರಿಗೆ ವಿಶೇಷ ಅಧಿಕಾರ ಸಿಕ್ಕಿತು. ಇದರ ಪ್ರಕಾರ ತಮ್ಮ ತಂಡದ ಓರ್ವ ಸದಸ್ಯನನ್ನು ನಾಮಿನೇಷನ್ ಇಂದ ಸೇವ್ ಮಾಡಬಹುದಿತ್ತು. ಆಗ ಶಿಶಿರ್ ಮೋಕ್ಷಿತಾ ಅವರನ್ನು ಪಾರು ಮಾಡಿದರು. ಈ ಕಾರಣಕ್ಕೆ ಚೈತ್ರ ಬೇಸರಗೊಂಡರು.
ನಾನು ಸಿಂಗಲ್, ಇಲ್ಲಿ ಯಾರಾದ್ರೂ ಪ್ರೀತಿ ಕೊಡ್ತಾರೆ ಅಂತ ಅನಿಸಿದ್ರೆ ನೋಡೋಣ: ಅನುಷಾ ರೈ -ಅಳಿವು-ಉಳಿವು ಟಾಸ್ಕ್ /top-listing/bigg-boss-kannada-11-aishwarya-sindhogi-possessive-about-ranjith-and-dharma-keerthiraj-3-4863.html#ಅಳಿವು-ಉಳಿವು-ಟಾಸ್ಕ್-
ಇನ್ನು ಎರಡನೇ ಟಾಸ್ಕ್ ಗೊಬ್ಬರದ ಅಬ್ಬರ. ಇದರ ಪ್ರಕಾರ, ಪ್ರತಿ ತಂಡದ ಇಬ್ಬರು ಸದಸ್ಯರು ತಮ್ಮ ಕೈ-ಕಾಲುಗಳನ್ನು ಕಟ್ಟಿಸಿಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಆರಂಭಿಕ ಸ್ಥಾನದಿಂದ ತೆವಳಿಕೊಂಡು ಹೋಗಬೇಕು. ಬಳಿಕ ಚೆಂಡನ್ನು ದೂಡಿಕೊಂಡು ತಂದು ತಮಗೆ ಮೀಸಲಿರುವ ಸ್ಟ್ಯಾಂಡ್‌ನಲ್ಲಿ ಇಡಬೇಕು. ಬೇಗ ಇಡುವ ತಂಡ ಗೆದ್ದಂತೆ. ಈ ಆಟದಲ್ಲಿ ಸ್ವರ್ಗವಾಸಿಗಳು ಗೆಲುವು ಸಾಧಿಸಿದರು. ಈ ವೇಳೆ ಎರಡು ತಂಡಗಳ ನಡುವೆ ವಾದ-ವಿವಾದಗಳು ನಡೆದವು.
ನಾನು ಸಿಂಗಲ್, ಇಲ್ಲಿ ಯಾರಾದ್ರೂ ಪ್ರೀತಿ ಕೊಡ್ತಾರೆ ಅಂತ ಅನಿಸಿದ್ರೆ ನೋಡೋಣ: ಅನುಷಾ ರೈ -ಗೊಬ್ಬರದ ಅಬ್ಬರ /top-listing/bigg-boss-kannada-11-aishwarya-sindhogi-possessive-about-ranjith-and-dharma-keerthiraj-3-4863.html#ಗೊಬ್ಬರದ-ಅಬ್ಬರ-
ಟಾಸ್ಕ್ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿಲ್ಲ ಅಂತ ಎರಡು ತಂಡದ ಸದಸ್ಯರು ಕ್ಯಾಪ್ಟನ್ ಹಂಸ ಮೇಲೆ ಕೂಗಾಡಿದರು. ಅದಕ್ಕೆ ಹಂಸ ಅವರ ಪರ ತೀರ್ಮಾನ ಕೊಟ್ಟರೆ ಫೇರ್. ಇಲ್ಲಾಂದ್ರೆ ಇಲ್ಲ. ಎಷ್ಟು ಅವಮಾನ ಮಾಡ್ತಾರೆ. ನಾನು ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ ಅಂತ ಕಣ್ಣೀರು ಹಾಕಿದರು.
ನಾನು ಸಿಂಗಲ್, ಇಲ್ಲಿ ಯಾರಾದ್ರೂ ಪ್ರೀತಿ ಕೊಡ್ತಾರೆ ಅಂತ ಅನಿಸಿದ್ರೆ ನೋಡೋಣ: ಅನುಷಾ ರೈ -ಹಂಸ ಕಣ್ಣೀರು /top-listing/bigg-boss-kannada-11-aishwarya-sindhogi-possessive-about-ranjith-and-dharma-keerthiraj-3-4863.html#ಹಂಸ-ಕಣ್ಣೀರು-