ಚಲನಚಿತ್ರಗಳ ಒಳನೋಟ
ನಟಿ ಅಮೃತಾ ಅಯ್ಯಂಗಾರ್ 2017ರಲ್ಲಿ ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. 1996 ಜುಲೈ 26ರಂದು ಮೈಸೂರಿನಲ್ಲಿ ಜನಿಸಿದ ಇವರು, ಮೈಸೂರಿನ ಮಹಾಜನ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಇವರಿಗೆ ಒಳ್ಳೆಯ ಹೆಸರು ತಂದು ಕೊಟ್ಟ ಸಿನಿಮಾ ಲವ್ ಮಾಕ್ಟೇಲ್. ಇದಾದ ಬಳಿಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ಅಮೃತಾ ಅವರಿಗೆ ಹಲವು ಅವಕಾಶಗಳು ಅರಸಿ ಬಂದವು. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಲ್ಲಿ ಅವರ ನಟನೆಯ ಟಾಪ್ 5 ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.