ಚಲನಚಿತ್ರಗಳ ಒಳನೋಟ
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೋಟ್ಯಂತರ ಜನರ ಆರಾಧ್ಯ ದೈವ. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು ಅಪ್ಪು. ಕನ್ನಡ ಸಿನಿಮಾರಂಗಕ್ಕೂ ಪುಣೀತ್ ಅವರ ಕೊಡುಗೆ ಅಪಾರ. ಆರು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿತೆರೆ ಮೇಲೆ ಮಿಂಚಿದ್ದ ಪುನೀತ್ ಕಂಡರೆ ಚಿಕ್ಕವರಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲರೂ ಅವರನ್ನು ಪ್ರೀತಿಯಿಂದ 'ಅಪ್ಪು' ಅಂತಲೇ ಕರೆಯುತ್ತಿದ್ದರು. ಇಲ್ಲಿ ರಾಷ್ಟ್ರಪ್ರಶಸ್ತಿಯಿಂದ ಹಿಡಿದು ಅಪ್ಪು ಅವರಿಗೆ ಸಂದ ಪ್ರಶಸ್ತಿಗಳು ಯಾವವು? ಎಂಬ ಮಾಹಿತಿಯನ್ನು ನೀಡಲಾಗಿದೆ.