X
ಹೋಮ್ ಚಲನಚಿತ್ರಗಳ ಒಳನೋಟ

ಹ್ಯಾಪಿ ಬರ್ತಡೇ: ಕನಸಿನ ರಾಣಿ ಮಾಲಾಶ್ರೀ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳಿವು!

Author Sowmya Bairappa | Updated: Saturday, August 10, 2024, 10:21 AM [IST]

ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿ ಅಂತಲೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ, ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಮಾಲಾಶ್ರೀ ಅಂದಾಕ್ಷಣ ಅವರ ಹತ್ತಾರು ವಿಭಿನ್ನ ಗಂಭೀರ ಪಾಥ್ರಗಳು ಕಣ್ಮುಂದೆ ಬರುತ್ತವೆ. ಯಾಕಂದ್ರೆ, ಅಂತಹ ಗಟ್ಟಿ ಪಾತ್ರಗಳ ಮೂಲಕವೇ ಅವರು ಗುರುತಿಸಿಕೊಂಡಿದ್ದಾರೆ. ಇವರ ಚಿತ್ರಗಳಲ್ಲಿ ನಾಯಕನ ಪಾತ್ರದ ಜೊತೆಗೆ ನಾಯಕಿಯ ಪಾತ್ರಕ್ಕೂ ಅಷ್ಟೇ ಮಹತ್ವ ಕೊಡಲಾಗುತ್ತಿತ್ತು. ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ಮಾಲಾಶ್ರೀ ಬಗ್ಗೆ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ...


cover image
ಮೊದಲ ಹೆಸರು

ನಟಿ ಮಾಲಾಶ್ರೀ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಹೀಗಾಗಿ, ಅವರ ಸಿನಿಜರ್ನಿ ಬಹಳ ದೊಡ್ಡದು. ಮಾಲಾಶ್ರೀ ಹುಟ್ಟಿದ ಹೆಸರು 'ಶ್ರೀದುರ್ಗಾ'.  ನಂತರದ ದಿನಗಳಲ್ಲಿ ತಮ್ಮ ಹೆಸರನ್ನು ಮಾಲಾಶ್ರೀಯಾಗಿ ಬದಲಿಸಿಕೊಂಡರು. ಇವರು ಬಾಲನಟಿಯಾಗಿ ತಮಿಳು, ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದು, ಸುಮಾರು 35 ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರಂತೆ. ಅದರಲ್ಲಿ ಹುಡುಗನ ಪಾತ್ರಗಳಲ್ಲೇ ಹೆಚ್ಚಾಗಿ ಅಭಿನಯಿಸಿದ್ದಾರೆ.

ಪಾರ್ವತಮ್ಮನ ಗರಡಿಯಲ್ಲಿ

ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಶ್ರೀ ದುರ್ಗಾ, 1989ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಮಾಲಾಶ್ರೀಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು. ರಾಘವೇಂದ್ರ ರಾಜ್‌ಕುಮಾರ್ ಚೊಚ್ಚಲ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿರುವಾಗ, ಜನಪ್ರಿಯ ಗೀತಾ ರಚನೆಕಾರ ಚಿ.ಉದಯ್ ಶಂಕರ್ ಮಾಲಾಶ್ರೀ ಅವರನ್ನು ರಾಜ್‌ ಕುಟುಂಬಕ್ಕೆ ಪರಿಚಯಿಸಿದರು. ಬಳಿಕ ಪಾರ್ವತಮ್ಮ 'ನಂಜುಡಿ ಕಲ್ಯಾಣ' ಸಿನಿಮಾಗೆ ಮಾಲಾಶ್ರೀಯರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಈ ಚಿತ್ರ ಅವರಿಗೆ ಅಪಾರ ಮನ್ನಣೆ ತಂದುಕೊಟ್ಟಿತು.

ಹಿಟ್ ಸಿನಿಮಾಗಳು

ನಂಜುಂಡಿ ಕಲ್ಯಾಣ ಸಿನಿಮಾ ನಂತರ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಾಲಾಶ್ರೀ ಎರಡನೇ ಬಾರಿಗೆ ಜೊತೆಯಾಗಿ ಗಜಪತಿ ಗರ್ವಭಂಗ ಸಿನಿಮಾದಲ್ಲಿ  ನಟಿಸಿದರು. ಈ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್‌ ಆದವು.  ಬಳಿಕ ಮಾಲಾಶ್ರೀಗೆ ಬೇಡಿಕೆ ಹೆಚ್ಚಾಯಿತು. ಬಳಿಕ ಅವರು ಸ್ಯಾಂಡಲ್‌ವುಡ್‌ನ  ಕನಸಿನ ರಾಣಿಯಾದರು. ಪ್ರತಾಪ್, ಕಿತ್ತೂರಿನ ಹುಲಿ, ತವರುಮನೆ, ಚಾಮುಂಡಿ, ರಾಮಾಚಾರಿ, ರಾಣಿ ಮಹಾರಾಣ, ಬೆಳ್ಳಿ ಕಾಲುಂಗುರ, ಹೃದಯ ಹಾಡಿದು, ಬೆಳ್ಳಿ ಮೋಡಗಳು, ಗೃಹಪ್ರವೇಶ, ಮಾಲಾಶ್ರೀ ಮಾಮಾಶ್ರೀ, ಶಕ್ತಿ, ಕಿರಣ್ ಬೇಡಿ, ವೀರ ಸೇರಿದಂತೆ ಅನೇಕ ಹಿಟ್ ಸಿನಿಮಾಗಳ್ಲಿ ಮಾಲಾಶ್ರೀ ಬಣ್ಣ ಹಚ್ಚಿದ್ದಾರೆ. 

ಕೋಟಿ ರಾಮು ಕೈಹಿಡಿದ ಕನಸಿನ ರಾಣಿ

ಒಂದೇ ರೀತಿಯ ಪಾತ್ರಗಳಿಗೆ ಜೋತು ಬೀಳದ ಮಾಲಾಶ್ರೀ, ಹಲವು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾ ಮಾಡಿ ಗೆದ್ದ ಕೀರ್ತಿ ಕನಸಿನ ರಾಣಿಗೆ ಸಲ್ಲುತ್ತದೆ. ನಟಿಯರು ಮಹಿಳಾ ಪ್ರಧಾನ ಚಲನಚಿತ್ರಗಳಲ್ಲಿ ನಟಿಸಿ ಗೆಲ್ಲುವುದು ಸುಲಭದ ಕೆಲಸವಲ್ಲ. ಆದರೆ, ಮಾಲಾಶ್ರೀ ಅಭಿನಯಿಸಿದ ಬಹುತೇಕ ಮಹಿಳಾ ಪ್ರಧಾನ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಮಾಲಾಶ್ರೀ ನಿರ್ಮಾಪಕ ಕೋಟಿ ರಾಮು ಕೈ ಹಿಡಿದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ದುರಾದೃಷ್ಟವಶಾತ್ ರಾಮು ಅವ್ರು ಕಳೆದ ವರ್ಷ ಕೊರೊನಾದಿಂದ ನಿಧನರಾಗಿದ್ದಾರೆ. 

ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಾಲಾಶ್ರೀ ಮಗಳು

ಮಾಲಾಶ್ರೀ ಅವರ ಲೆಗೆಸಿಯನ್ನು ಅವರ ಮಗಳು ಉಳಿಸಿ, ಬೆಳೆಸಲು ಮುಂದಾಗಿದ್ದಾರೆ. ಮಾಲಾಶ್ರೀ, ರಾಮು ಪುತ್ರಿ ರಾಧನಾ ರಾಮ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ರಾಧನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಚೊಚ್ಚಲ ಸಿನಿಮಾದಲ್ಲೇ ಭರ್ಜರಿಯಾಗಿ ಎಂಟ್ರಿ ಕೊಡಲು ರೆಡಿಯಾಗಿದ್ದು, ದಸರಾ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+