twitter
    X
    Home ಚಲನಚಿತ್ರಗಳ ಒಳನೋಟ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು

    Author Sowmya Bairappa | Published: Friday, January 27, 2023, 02:09 PM [IST]

    ವಿ.ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್ ಟೈನರ್ ಸಿನಿಮಾ ಕ್ರಾಂತಿ ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ದಂಪತಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಕ್ರಾಂತಿ ಸಿನಿಮಾ ಆಕ್ಷನ್, ಡೈಲಾಗ್ಸ್, ಡ್ಯಾನ್ಸ್ ಜೊತೆ ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದೆ. ಬಹುತಾರಾಗಣವಿರುವ ಈ ಸಿನಿಮಾ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು.

    cover image
    ಯಜಮಾನ ಕಾಂಬಿನೇಷನ್

    ಯಜಮಾನ ಕಾಂಬಿನೇಷನ್

    1

    2019ರಲ್ಲಿ ಬಿಡುಗಡೆಯಾಗಿದ್ದ ನಟ ದರ್ಶನ್ ಅಭಿನಯದ  'ಯಜಮಾನ' ಸಿನಿಮಾ ಸಖತ್ ಸದ್ದು ಮಾಡಿತ್ತು. ಜೊತೆ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಆ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡವೇ ಕ್ರಾಂತಿ ಸಿನಿಮಾದಲ್ಲೂ ಕೆಲಸ ಮಾಡಿದೆ. ಅದೇ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಈ ಸಿನಿಮಾ ಕೂಡ ನಿರ್ಮಾಣವಾಗಿದೆ. ಪಿ.ಕುಮಾರ್ ಆರಂಭಿಸಿದ್ದ 'ಯಜಮಾನ' ಸಿನಿಮಾವನ್ನು ಹರಿಕೃಷ್ಣ ಕಂಪ್ಲೀಟ್ ಮಾಡಿದ್ದರು. ಇದೀಗ ಕ್ರಾಂತಿ ಸಿನಿಮಾಗೆ ವಿ ಹರಿಕೃಷ್ಣ  ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ -ಹರಿಕೃಷ್ಣ ಕಾಂಬಿನೇಷನ್ ನ ಹಾಡುಗಳು ಹಿಟ್ ಆಗಿವೆ. 

    ದರ್ಶನ್-ರಚಿತಾ ಜೋಡಿ

    ದರ್ಶನ್-ರಚಿತಾ ಜೋಡಿ

    2

    ಬುಲ್ ಬುಲ್ ಹಾಗೂ ಅಂಬರೀಶ ಸಿನಿಮಾಗಳ ನಂತರ ರಚಿತಾ ರಾಮ್ ಹಾಗೂ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇದು ಇವರಿಬ್ಬರ ಹ್ಯಾಟ್ರಿಕ್ ಸಿನಿಮಾ. ಅಭಿಮಾನಿಗಳ ಫೆವರಿಟ್ ಆಗಿದ್ದ ಈ ಜೋಡಿ ಮತ್ತೊಮ್ಮೆ ಕ್ರಾಂತಿ ಸಿನಿಮಾದ ಮೂಲಕ ಮೋಡಿ ಮಾಡಿದೆ. ಇವರಿಬ್ಬರ ಕಾಂಬಿನೇಷನ್ ನ 'ಗೊಂಬೆ ಗೊಂಬೆ' ಹಾಡು ಈಗಾಗಾಲೇ ಸೂಪರ್ ಹಿಟ್ ಆಗಿದೆ.  ಜೊತೆಗೆ ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಆರ್ಮುಗಂ ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರೇ ಸಿನಿಮಾದಲ್ಲಿದ್ದಾರೆ. 

    ವರ್ಷದ ಮೊದಲ ದೊಡ್ಡ ಸಿನಿಮಾ

    ವರ್ಷದ ಮೊದಲ ದೊಡ್ಡ ಸಿನಿಮಾ

    3

    2022ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ಸಿನಿಮಾಗಳು ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತದಲ್ಲೇ ದೊಡ್ಡ ಸದ್ದು ಮಾಡಿದ್ದವು. ಆದರೆ, ನಟ ದರ್ಶನ್ ಅಭಿನಯದ ಯಾವ ಸಿನಿಮಾಗಳೂ ಬಿಡುಗಡೆಯಾಗಿರಲಿಲ್ಲ. ಇದೀಗ ರಾಬರ್ಟ್ ಸಿನಿಮಾ ಬಿಡುಗಡೆಯಾದ 21 ತಿಂಗಳ ಬಳಿಕ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿದೆ.  ಕ್ರಾಂತಿ ಸಿನಿಮಾದ ಮೊದಲ ದಿನಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಅದ್ಭುತವಾಗಿತ್ತು. ಮೊದಲ ದಿನ 600ಕ್ಕೂ ಹೆಚ್ಚು ಶೋಗಳು ಭರ್ತಿಯಾಗಿದ್ದವು. 

     

    ಅಕ್ಷರ ಕ್ರಾಂತಿಯ ಕಥೆ

    ಅಕ್ಷರ ಕ್ರಾಂತಿಯ ಕಥೆ

    4

    'ಯಜಮಾನ' ಸಿನಿಮಾದಲ್ಲಿ ಎಣ್ಣೆ ಗಾಣದ ಕಥೆಯನ್ನು ಹೇಳಲಾಗಿತ್ತು. ಆದರೆ, ಕ್ರಾಂತಿ ಚಿತ್ರದಲ್ಲಿ ಅಕ್ಷರ ಕ್ರಾಂತಿ ನಡೆಯುತ್ತಿದೆ. ಅಂದರೆ ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಸಂದೇಶವನ್ನು ಹೊತ್ತು ಬಂದಿದೆ. ಅದನ್ನು ಹೇಗೆ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ತಿಳಿಯಬಹುದು.  

    ಪೈಸಾ ವಸೂಲ್ ಸಿನಿಮಾ

    ಪೈಸಾ ವಸೂಲ್ ಸಿನಿಮಾ

    5

    ದರ್ಶನ್ ಸಿನಿಮಾಗಳು ಅಂದರೆ ಪೈಸಾ ವಸೂಲ್ ಗ್ಯಾರಂಟಿ ಎನ್ನುವ ಮಾತಿದೆ.  ಅಭಿಮಾನಿಗಳು ಕೇಳುವ ಆಕ್ಷನ್, ಡ್ಯಾನ್ಸ್, ಡೈಲಾಗ್ಸ್ ಅವರ ಸಿನಿಮಾದಲ್ಲಿ ಹೇರಳವಾಗಿ ಇರುತ್ತದೆ. ಬರೀ ದರ್ಶನ್ ಅವರಿಗಾಗಿ ಸಿನಿಮಾ ನೋಡುವ ಅಭಿಮಾನಿಗಳು ಇದ್ದಾರೆ. ಹಾಗಾಗಿ ಕ್ರಾಂತಿ ಸಿನಿಮಾ ಅಭಿಮಾನಿಗಳನ್ನು ರಂಜಿಸಿ, ಪೈಸಾ ವಸೂಲ್ ಮಾಡಲಿದ್ಯಾ ಎಂಬುದನ್ನು ಕಾದುನೋಡಬೇಕಿದೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X