X
ಹೋಮ್ ಚಲನಚಿತ್ರಗಳ ಒಳನೋಟ

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕೀತಿ ಪಾತ್ರಧಾರಿಯ ಸಾಧನೆಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ ಲಿಸ್ಟ್

Author Sowmya Bairappa | Published: Wednesday, February 14, 2024, 11:51 AM [IST]

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಟಿಆರ್‌ಪಿ ರೇಟಿಂಗ್‌ನಲ್ಲೂ ಮುಂದಿದೆ. ಈ ಧಾರಾವಾಹಿಯಲ್ಲಿ ಪ್ರತಿಯೊಬ್ಬ ಕಲಾವಿದರೂ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಈ ಪೈಕಿ ಕೀರ್ತಿ ಪಾತ್ರದ ಮೂಲಕ ಜನಮನಗೆದ್ದಿರುವ ತನ್ವಿ ರಾವ್ ಅವರ ಸಾಧನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.


cover image
ಭರತನಾಟ್ಯ

ತನ್ವಿ ರಾವ್ ತಮ್ಮ 4ನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಯಲು ಆರಂಭಿಸಿದ್ದರು. ದೆಹಲಿ ದೂರದರ್ಶನದ 'ಧಿನಕ್ ಧಿನ್ ಧಾ' ಹಾಗೂ ಮುಂಬೈ ದೂರದರ್ಶನದ 'ಧಮ್ ಧಮಾ ಧಮ್' ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ದರು. ಇವರು ಕಥಕ್ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.  

ಪ್ರಶಸ್ತಿ

ತಮ್ಮ 9ನೇ ವಯಸ್ಸಿನಲ್ಲೇ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರಿಂದ 'ಅಪೂರ್ವ ಬಾಲ ಪ್ರತಿಭೆ' ಪ್ರಶಸ್ತಿ ಪಡೆದಿದ್ದರು. ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ೧೦ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯಪಾಲರಿಂದ 'ಕರ್ನಾಟಕ ರಾಜ್ಯ' ಪ್ರಶಸ್ತಿ ಪಡೆದಿದ್ದರು. 

 

ರಂಗಪ್ರವೇಶ

ತಮ್ಮ 10ನೇ ವಯಸ್ಸಿನಲ್ಲಿ ಮಂಗಳೂರಿನ ಟೌನ್ ಹಾಲ್‌ನಲ್ಲಿ ತನ್ವಿ ರಾವ್ ರಂಗಪ್ರವೇಶ ಮಾಡಿದರು. 17ನೇ ವಯಸ್ಸಿಗೆ ಡಿಸ್ಟಿಂಕ್ಷನ್‌ನಲ್ಲಿ ವಿದ್ವತ್ ಪರೀಕ್ಷೆ ಪಾಸ್ ಮಾಡಿದ್ದರು. ತನ್ವಿ ರಾವ್ ಭಾರತದಲ್ಲಿ ಮಾತ್ರವಲ್ಲದೇ ಮಲೇಷ್ಯಾ, ಸಿಂಗಾಪುರ್, ಸ್ಕಾಟ್‌ಲ್ಯಾಂಡ್‌, ಯುಎಸ್‌ಎನಲ್ಲಿ ನೃತ್ಯ ಹಾಗೂ ಥಿಯೇಟ್ರಿಕಲ್ ಪರ್ಫಾಮೆನ್ಸ್ ನೀಡಿದ್ದಾರೆ.

ಕಲಾಂ ಅವರಿಂದ ಪತ್ರ

ಡಾ. ಎಪಿಜೆ ಅಬ್ದುಲ್ ಕಲಾಂ, ಉದಿತ್ ನಾರಾಯಣ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಕದ್ರಿ ಗೋಪಾಲನಾಥ್, ಅಂಜಲಿ ತೆಂಡೂಲ್ಕರ್ ಅವರುಗಳಿಂದ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ. ಇವರಿಗೆ ಆರು ವರ್ಷವಿದ್ದಾಗ ರಾಜ್ಯೋತ್ಸವದ ಸಂದರ್ಭದಲ್ಲಿ ತನ್ವಿ ನೃತ್ಯ ಸಂಯೋಜನೆ ಮಾಡಿದ್ದರು. ಈ ವಿಸಿಡಿಯನ್ನು ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಕಳುಹಿಸಿದ್ದರು. ತನ್ವಿ ನೃತ್ಯ ಪ್ರದರ್ಶನ್ ಕಂಡು, ಮೆಚ್ಚುಗೆ ಸೂಚಿಸಿ ಕಲಾಂ ಪತ್ರ ಬರೆದಿದ್ದರು. ನಂತರ ಮಂಗಳೂರಿನಲ್ಲಿ ಅವರನ್ನು ಮೀಟ್ ಮಾಡಿದ್ದರು.

 

'ಗುಲಾಬಿ ಗ್ಯಾಂಗ್' ಸಿನಿಮಾದಲ್ಲಿ ನಟನೆ

ಕಿರುತೆರೆಗೆ ಬರುವ ಮುನ್ನ ತನ್ವಿ ರಾವ್ ಹಿಂದಿ ಸಿನಿರಂಗದ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ 'ಗುಲಾಬಿ ಗ್ಯಾಂಗ್'ನಲ್ಲಿ ನಟಿಸಿರುವ ತನ್ವಿ, ಮುಂದೆ 'ಗನ್ಸ್ ಆಫ್ ಬನಾರಸ್' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕನ್ನಡದ 'ರಂಗ್ ಬಿರಂಗಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ‌.

ಕನ್ನಡ ಕಿರುತೆರೆ

ತನ್ವಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ನಟಿಸಿ ವೀಕ್ಷಕರ ಮನ ಸೆಳೆದರು. ಮುಂದೆ ತಮಿಳಿನ 'ಜಮೀಲಾ' ಧಾರಾವಾಹಿಯಲ್ಲಿ ನಟಿಸಿದರು. ಸದ್ಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+