ಚಲನಚಿತ್ರಗಳ ಒಳನೋಟ
ಬಿಗ್ ಬಾಸ್ ಕಾರ್ಯಕ್ರಮ ಗಮನಿಸಿದರೆ ಪ್ರತಿ ಸೀಸನ್ನಲ್ಲೂ ಒಂದೊಂದು ಪ್ರೇಮ ಪ್ರಸಂಗಗಳು ಇದ್ದೆ ಇರುತ್ತವೆ. ಪ್ರತಿ ಸೀಸನ್ನಲ್ಲೂ ಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ. ಸ್ಪರ್ಧಿಗಳ ನಡುವೆ ಆಕರ್ಷಣೆಯೋ, ಪ್ರೀತಿಯೋ ಗೊತ್ತಿಲ್ಲ. ಆದರೆ, ಏನೇ ಆಗಿದ್ದರೂ ಇಬ್ಬರು ಅಥವಾ ಮೂವರು ಜೋಡಿಗಳು ಮಾತ್ರ ಸುದ್ದಿ ಮಾಡುತ್ತಾರೆ. ಕೆಲವರು ಸೇಫ್ ಆಗಲು ಈ ತಂತ್ರವನ್ನು ಬಳಸುತ್ತಾರೆ ಎಂಬ ಗುಮಾನಿಯೂ ಇದೆ. ದೊಡ್ಮನೆಯಲ್ಲಿ ಕೆಲ ಜೋಡಿಗಳ ವರ್ತನೆ ಅತಿರೇಕಕ್ಕೆ ಹೋಗಿದ್ದು ಇದೆ. ಅಕ್ಟೋಬರ್ ೮ರಿಂದ ಸೀಸನ್ ೧೦ ಆರಂಭವಾಗಿತ್ತಿದ್ದು, ಈ ಬಾರಿ ಯಾವಾ ಜೋಡಿ ಸದ್ದು ಮಾಡಲಿದೆ ಎಂಬ ಕುತೂಹಲ ಹಲವರಲ್ಲಿದೆ. ಇಲ್ಲಿ ಬಿಗ್ ಬಾಸ್ ಕನ್ನಡದ ಪಾಪ್ಯುಲರ್ ಜೋಡಿಗಳ ವಿವರ ಇಲ್ಲಿದೆ.