X
ಹೋಮ್ ಚಲನಚಿತ್ರಗಳ ಒಳನೋಟ

ಜೈಲರ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Author Sowmya Bairappa | Published: Wednesday, August 16, 2023, 01:24 PM [IST]

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಬಾಕ್ಸಾಪೀಸ್‌ನಲ್ಲಿ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಯೂನಿಕ್ ಸ್ಟೈಲ್‌, ಮ್ಯಾನರಿಸಂನಿಂದ ಧೂಳೆಬ್ಬೆಸಿದ್ದಾರೆ. ಈ ಮೂಲಕ ವಯಸ್ಸು ೭೦ ದಾಟ್ರಿದ್ರೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದಾರೆ. ಇನ್ನು ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್, ಮೋಹನ್‌ ಲಾಲ್‌, ವಿನಾಯಕ್, ಜಾಕಿ ಶ್ರಾಫ್ ಸೇರಿದಂತೆ ಸ್ಟಾರ್ ನಟರ ದಂಡೇ ಚಿತ್ರದಲ್ಲಿದ್ದು, ಇದೊಂದು ಬಿಗ್ ಬಜೆಟ್ ಸಿನಿಮಾ. ಹಾಗಾದರೆ, ಈ ನಟರು ಜೈಲರ್ ಸಿನಿಮಾದಲ್ಲಿ ನಟಿಸಲು ತೆಗೆದುಕೊಂಡು ಸಂಭಾವನೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.


cover image
ರಜನಿಕಾಂತ್

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜೈಲರ್ ಸಿನಿಮಾವನ್ನು 224ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.  ಈ ಸಿನಿಮಾದಲ್ಲಿ ವೃತ್ತ ಜೈಲರ್ ಮುತ್ತುವೇಲ್ ಪಾಂಡಿಯಲ್ ಆಗಿ ಆರ್ಭಟಿಸಿರುವ ಸೂಪರ್ ರಜನಿಕಾಂತ್ ಬರೋಬ್ಬರಿ 110 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರಂತೆ. ಚಿತ್ರದ ಒಟ್ಟು ಬಜೆಟ್‌ನ 48%ರಷ್ಟು ಬಜೆಟ್‌ ಅನ್ನು ರಜನಿಕಾಂತ್ ಸಂಭಾವನೆ ಪಡೆದಿದ್ದಾರೆ. 

ಶಿವರಾಜ್‌ಕುಮಾರ್

ಜೈಲರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಂಡ್ಯದ ಮಾಫಿಯಾ ಡಾನ್ ನರಸಿಂಹ ಆಗಿ ದರ್ಶನ ಕೊಟ್ಟಿದ್ದರು. ಕೇವಲ ಎಂಟರಿಂದ ಹತ್ತು ನಿಮಿಷ ಬಂದು ಹೋಗುವ ಸೆಂಚುರಿ ಸ್ಟಾರ್ ತಮಿಳು ಪ್ರೇಕ್ಷಕರ ಮನಗೆದ್ದಿದ್ದರು. ಸದ್ಯ ಎಲ್ಲಿ ನೋಡಿದರೂ ಶಿವಣ್ಣನ ಲುಕ್, ಮ್ಯಾನರಿಸಂ ಬಗ್ಗೆಯೇ ಟಾಕ್ ಶುರುವಾಗಿದೆ. ಶಿವಣ್ಣ ಈ ಸಿನಿಮಾದಲ್ಲಿ ನಟಿಸಲು 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 

ಮೋಹನ್ ಲಾಲ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೈಲರ್ ಸಿನಿಮಾದಲ್ಲಿ ಮ್ಯಾಥ್ಯೂ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಕೇವಲ ಐದು ನಿಮಿಷ ಕಾಣಿಸಿಕೊಳ್ಳುವ ಮೋಹನ್ ಲಾಲ್, ಪರಿಣಾಮಕಾರಿ ವಿಶೇಷ ಪಾತ್ರದ ಮೂಲಕ ಹೆಚ್ಚು ಪ್ರಭಾವ ಬೀರಿದ್ದಾರೆ. ಮೋಹನ್‌ ಲಾಲ್ ಈ ಪಾತ್ರದಲ್ಲಿ ನಟಿಸಲು 8 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರಂತೆ. 

ಜಾಕಿ ಶ್ರಾಫ್ ಮತ್ತು ತಮನ್ನಾ

ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್ ಜೊತೆಗೆ ಜೈಲರ್ ಸಿನಿಮಾದಲ್ಲೂ ಬಾಲಿವುಡ್ ನಟ ಜಾಕಿ ಶ್ರಾಫ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದ ನಟನೆಗಾಗಿ ಅವರಿಗೆ 4 ಕೋಟಿ ರೂ. ನೀಡಲಾಗಿದೆಯಂತೆ. ಇದು ಜೊತೆಗೆ ಒಂದು ಹಾಡು ಮತ್ತು ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ ತಮನ್ನಾಗೆ 3 ಕೋಟಿ ರೂ ಸಂಭಾವನೆ ಪಡೆದಿದ್ದಾರೆ. 

ರಮ್ಯಾ ಕೃಷ್ಣನ್ & ಯೋಗಿ ಬಾಬು

ಜೈಲರ್ ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣನ್ ಮುತ್ತುವೇಲ್ ಮಡದಿಯಾಗಿ ಕಾಣಿಸಿಕೊಂಡಿದ್ದರು. ಪಡೆಯಪ್ಪ ಬಳಿಕ ರಜನಿಕಾಂತ್ ಮತ್ತು ರಮ್ಯಾ ಕೃಷ್ಣನ್  ಈ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಜೈಲರ್‌ನಲ್ಲಿ ರಜನಿ ಪತ್ನಿ ಪಾತ್ರದಲ್ಲಿ ನಟಿಸಲು ರಮ್ಯಾ ಕೃಷ್ಣನ್  80 ಲಕ್ಷ ಸಂಭಾವನೆ ಪಡೆದಿದ್ದಾರಂತೆ. ಜೊತೆಗೆ ನಟ ಯೋಗಿ ಬಾಬು ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ.  

ವಿನಾಯಕನ್ ಮತ್ತು ಸುನೀಲ್

ಜೈಲರ್ ಸಿನಿಮಾದ ಮತ್ತೊಂದು ಹೈಲೈಟ್ ಡೆಡ್ಲಿ ವಿಲನ್ ಆಗಿ ಅಬ್ಬರಿಸಿರುವ ಮಲಯಾಳಂ ನಟ ವಿನಾಯಕನ್. ಚಿತ್ರದಲ್ಲಿ ರಜನಿ ಎದುರು ಅಬ್ಬರಿಸಿರುವ ವಿನಾಯಕನ್, 35 ಲಕ್ಷ ಸಂಭಾವನೆ ಪಡೆದಿದ್ದಾರೆ. ತಮಿಳು ನಟ ಸುನೀಲ್ ತಮ್ಮ ಪಾತ್ರಕ್ಕಾಗಿ 60 ಲಕ್ಷ ರೂ. ಸಂಭಾವನೆ ಪಡೆದಿದ್ದಾರಂತೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+