ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಟಿಆರ್‌ಪಿ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈ ಸೀರಿಯಲ್‌ನಲ್ಲಿ ಸದ್ಯ ಪುಟ್ಟಕ್ಕನ ಮಗಳು ಸಹನಾ ದಾಂಪತ್ಯ ಕಲಹ ಪ್ರಸಾರ ಆಗುತ್ತಿದೆ. ಸಹನಾ ಹಾಗೂ ಮುರಳಿ ನಡುವಿನ ವೈವಾಹಿಕ ಸಮಸ್ಯೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ, ಟಿಆರ್‌ಪಿನಲ್ಲೂ ಏರಿಕೆಯಾಗಿದ್ದು, ಈ ವಾರ 7.6 ಅಂಕಗಳು ಬಂದಿವೆ. ಇಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮುರಳಿ ಹಾಗೂ ಸಹನಾ ಪಾತ್ರಧಾರಿಗಳ ಕುರಿತ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.