Updated: Saturday, January 25, 2020, 03:53 PM [IST]
ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದ ಖ್ಯಾತಿ ಯೋಗರಾಜ್ ಭಟ್ಟರದು. ಸಿದ್ಧ ಸೂತ್ರಗಳಿಂದ ಹೊರಬಂದು ಗಟ್ಟಿಯಾದ ನಿರೂಪಣೆ. ಸಂಭಾಷಣೆ ಮತ್ತು ಮೇಕಿಂಗ್ ನಿಂದ, ಸಿಂಪಲ್ ಕಥೆಯುಳ್ಳ ಸಿನಿಮಾ ಕೂಡ ಯಶಸ್ಸು ಪಡೆಬಹುದು ಎಂದು ರೂಪಿಸಿದರು. ಗಿರೀಶ್ ಕಾಸರವಳ್ಳಿ, ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಭಟ್ಟರು ಕಿರುತೆರೆಯಲ್ಲಿ ಚಕ್ರ ಎಂಬ ಸೀರಿಯಲ್ ಕೂಡ ನಿರ್ದೇಶನ ಮಾಡಿದ್ದಾರೆ. 2003 ರಲ್ಲಿ ತೆರಕಂಡ ಮಣಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕಿಳಿದರು..ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ..ಇಲ್ಲಿ ಯೋಗರಾಜ್ ಭಟ್ಟರ ನೋಡಲೇ ಬೇಕಾದ ಚಿತ್ರಗಳಿವೆ.
ಸುದೀಪ್ ಮತ್ತು ರಮ್ಯಾ ಜೋಡಿಯ ಮೊದಲ ಚಿತ್ರ..ರೌಡಿಸಂ ಕಥೆಯ ಜೊತೆ ರೋಮಾನ್ಸ್ ಹೊಂದಿದ್ದ ಈ ಚಿತ್ರ ಗಮನ ಸೆಳೆಯಿತು.
Must Watch And Super-Hit Movies Of Yogaraj Bhat-Ranga (S.S.L.C)/top-listing/must-watch-and-super-hit-movies-of-yogaraj-bhat-ranga-s-s-l-c-3-4394-388.html
ಪರಭಾಷೆ ಚಿತ್ರರಂಗ ಕನ್ನಡ ಕಡೆ ತಿರುಗುವ ಹಾಗೇ ಮಾಡಿದ ಚಿತ್ರ ಮುಂಗಾರು ಮಳೆ..ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಅರಳಿದ ಹಾಡುಗಳಿಗೆ ಮನೋಮೂರ್ತಿ ನೀಡಿದ ಅದ್ಭುತ ಸಂಗೀತ ಸಾಕಷ್ಟು ಗಮನ ಸೆಳೆಯಿತು..ಗಣೇಶ್ ಸಿನಿ ಜರ್ನಿಗೆ ಭದ್ರವಾದ ಅಡಿಪಾಯ ಹಾಕಿತು..
Must Watch And Super-Hit Movies Of Yogaraj Bhat-Mungaru Male/top-listing/must-watch-and-super-hit-movies-of-yogaraj-bhat-mungaru-male-3-4396-388.html