twitter
    X
    Home ಚಲನಚಿತ್ರಗಳ ಒಳನೋಟ

    ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ ರಾಜ್ಯೋತ್ಸವ ಗೀತೆಗಳು

    Author Administrator | Updated: Sunday, June 5, 2022, 08:20 AM [IST]

    ಕನ್ನಡಿಗರ ಅಸ್ಮಿತೆಯ ಪ್ರತೀಕ ಕನ್ನಡ ರಾಜ್ಯೋತ್ಸವ. ದಶಕಗಳ ಕಾಲ ಕನ್ನಡಿಗರ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಕಲೆಗಳ ಮೂಲಕ ರಂಗಭೂಮಿ ಮತ್ತು ಸಿನಿಮಾ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿವೆ. ಎಸ್.ಪಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಚಿನ ಕಂಠದಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇಲ್ಲಿ ಎಸ್.ಪಿ.ಬಿ ಹಾಡಿರುವ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ನೀಡಲಾಗಿದೆ.

    cover image

    ಕನ್ನಡ ನಾಡಿನ ಜೀವನದಿ - ಜೀವನದಿ

    ಜೀವನದಿ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಖುಷ್ಬೂ ನಟಸಿದ್ದರು. ಈ ಚಿತ್ರದಲ್ಲಿನ `ಕನ್ನಡ ನಾಡಿನ ಜೀವನದಿ' ಗೀತೆಯನ್ನು ಆರ್.ಎನ್.ಜಯಗೋಪಾಲ್ ಬರೆದಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅದ್ಭುತವಾಗಿ ಹಾಡಿದ್ದ ಈ ಗೀತೆಗೆ ಕೋಟಿ ಸಂಗೀತ ನೀಡಿದ್ದರು.

    ಹೇ ರುಕ್ಕಮ್ಮ - ಸಿಪಾಯಿ

    ವಿ ರವಿಚಂದ್ರನ್ ಮತ್ತು ಸೌಂದರ್ಯ ನಟಿಸಿದ್ದ `ಸಿಪಾಯಿ' ಚಿತ್ರದ `ಹೇ ರುಕ್ಕಮ್ಮ' ಗೀತೆಯನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದರು.

    ಕಲ್ಲಾದರೆ ನಾನು - ಸಿಂಹಾದ್ರಿಯ ಸಿಂಹ

    ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ತ್ರಿಪಾತ್ರದಲ್ಲಿ ನಟಿಸಿದ್ದರು. ಎಸ್ ನಾರಾಯಣ್ ಬರೆದಿದ್ದ` ಕಲ್ಲಾದರೆ ನಾನು' ಗೀತೆಗೆ ದೇವ ಸಂಗೀತ ನೀಡಿದ್ದರು.

    ಏನೇ ಕನ್ನಡತಿ - ಅಪ್ಪಾಜಿ

    ಡಿ ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಪ್ಪಾಜಿ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಆಮಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆರ್.ಎನ್.ಜಯಗೋಪಾಲ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಎಂ.ಎಂ.ಕೀರವಾಣಿ ಸಂಗೀತ ನೀಡಿದ್ದರು.

    ಇದೇ ನಾಡು ಇದೇ ಭಾಷೆ - ತಿರುಗು ಬಾಣ

    ಕೆ.ಎಸ.ಆರ್ ದಾಸ್ ನಿರ್ದೇಶನದಲ್ಲಿ ಮೂಡಿಬಂದಿದದ್ದ ತಿರುಗುಬಾಣ ಚಿತ್ರದಲ್ಲಿ ಅಂಬರೀಶ್ ಮತ್ತು ಆರತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ರವರ ಸಾಹಿತ್ಯದಲ್ಲಿ ಮೂಡಿಬಂದಿದ್ದ `ಇದೇ ನಾಡು ಇದೇ ಭಾಷೆ' ಗೀತೆಗೆ ಸತ್ಯಂ ಸಂಗೀತ ನೀಡಿದ್ದರು.

    ಕನ್ನಡದ ಹೊನ್ನುಡಿ - ಒಂದು ಸಿನಿಮಾ ಕಥೆ

    ಅನಂತನಾಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಒಂದು ಸಿನಿಮಾ ಕಥೆ ಚಿತ್ರದಲ್ಲಿನ `ಕನ್ನಡ ಹೊನ್ನುಡಿ ದೇವಿಯನು' ಗೀತೆಯನ್ನು ಚಿ ಉದಯಶಂಕರ್ ಅದ್ಭುತವಾಗಿ ಬರೆದಿದ್ದರು. ಕನ್ನಡ ಸಾಹಿತ್ಯ ಮತ್ತು ಕಲೆಯ ವೈಭವವನ್ನು ಹೇಳುವ ಗೀತೆಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು.

    ಕರುನಾಡ ತಾಯಿ ಸದಾ ಚಿನ್ಮಯಿ - ನಾನು ನನ್ನ ಹೆಂಡ್ತಿ

    1985 ರಲ್ಲಿ ತೆರೆಕಂಡಿದ್ದ `ನಾನು ನನ್ನ ಹೆಂಡ್ತಿ' ಚಿತ್ರದಲ್ಲಿ ರವಿಚಂದ್ರನ್ ಜೊತೆ ಊರ್ವಶಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಹಂಸಲೇಖ ಸಾಹಿತ್ಯದಲ್ಲಿ ಮೂಡಿಬಂದಿದ್ದ `ಕರುನಾಡ ತಾಯಿ ಸದಾ ಚಿನ್ಮಯಿ' ಗೀತೆಗೆ ಶಂಕರ್ ಗಣೇಶ್ ಸಂಗೀತ ನೀಡಿದ್ದರು.

    ಕರ್ನಾಟಕದ ಇತಿಹಾಸದಲಿ - ಕೃಷ್ಣ ರುಕ್ಮಿಣಿ

    1988 ರಲ್ಲಿ ಭಾರ್ಗವ ನಿರ್ದೇಶನದಲ್ಲಿ ಮೂಡಿ ಬಂದಿದ್ದ `ಕೃಷ್ಣ ರುಕ್ಮಿಣಿ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ರಮ್ಯಕೃಷ್ಣ ನಾಯಕಿಯಾಗಿ ನಟಿಸಿದ್ದರು. ಆರ್.ಎನ್.ಜಯಗೋಪಾಲ್ ಸಾಹಿತ್ಯದಲ್ಲಿ ಮೂಡಿಬಂದಿದ್ದ `ಕರ್ನಾಟಕದ ಇತಿಹಾಸದಲ್ಲಿ' ಗೀತೆಗೆ ಕೆ.ವಿ.ಮಹದೇವನ್ ಸಂಗೀತ ನೀಡಿದ್ದರು.

    ಕನ್ನಡ ನಾಡಿನ - ಶರವೇಗದ ಸರದಾರ

    ಕುಮಾರ್ ಬಂಗಾರೆಪ್ಪ ಮತ್ತು ಆಶ್ವಿನ್ ಭಾವೆ ನಟಿಸಿದ್ದ ಶರವೇಗದ ಸರದಾರ ಚಿತ್ರ 1989 ರಲ್ಲಿ ತೆರೆಕಂಡಿತ್ತು. ದೊಡ್ಡ ರಂಗೇಗೌಡರ ಸಾಹಿತ್ಯದಲ್ಲಿ ಮೂಡಿಬಂದಿದ್ದ `ಕನ್ನಡ ನಾಡಿನ ರನ್ನದ' ಗೀತೆಗೆ `ಸಂಗೀತ ರಾಜಾ'ರವರು ಸಂಗೀತ ನೀಡಿದ್ದರು.

    ಈ ಕನ್ನಡ ಮಣ್ಣನು ಮರಿಬೇಡ - ಸೋಲಿಲ್ಲದ ಸರದಾರ

    ಅಂಬರೀಶ್, ಮಾಲಾಶ್ರೀ ಮತ್ತು ಭವ್ಯಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ `ಸೋಲಿಲ್ಲದ ಸರದಾರ' ಚಿತ್ರವನ್ನು ಓಂ ಸಾಯಿ ಪ್ರಕಾಶ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಹಂಸಲೇಖ ಬರೆದು ಸಂಗೀತ ನೀಡಿದ್ದ `ಈ ಕನ್ನಡ ಮಣ್ಣನು ಮರಿಬೇಡ' ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅದ್ಭುತವಾಗಿ ಹಾಡಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X