twitter
    X
    Home ಚಲನಚಿತ್ರಗಳ ಒಳನೋಟ

    ಕಿಚ್ಚ ಸುದೀಪ್ ಪೋಲಿಸ್ ಪಾತ್ರದಲ್ಲಿ ನಟಿಸಿದ ಚಲನಚಿತ್ರಗಳು

    Author Administrator | Updated: Monday, April 18, 2022, 02:39 PM [IST]

    ಕನ್ನಡದಲ್ಲಿ ಪೋಲಿಸ್ ಪಾತ್ರಗಳಿಗೆ ಮೊದಲು ಗತ್ತು ತಂದು ಕೊಟ್ಟವರು ಶಂಕರನಾಗ್. ವಿಷ್ಣುವರ್ಧನ್, ಅಂಬರೀಶ್ ಕೆಲ ಪೋಲಿಸ್ ಪಾತ್ರಗಳಲ್ಲಿ ಅಚ್ಚಳಿಯದ ಅಭಿನಯ ನೀಡಿದ ನಂತರ ದೇವರಾಜ್ ಮತ್ತು ಸಾಯಿ ಕುಮಾರ್ ಆ ಪರಂಪರೆ ಮುಂದುವರೆಸಿದರು. ಪ್ರಸ್ತುತ ದರ್ಶನ್ ಮತ್ತು ಸುದೀಪ್ ಖಾಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇಲ್ಲಿ ಕಿಚ್ಚ ಸುದೀಪ್ ಪೋಲಿಸ್ ಪಾತ್ರಗಳ ಒಂದು ಪರಿಚಯವಿದೆ.

    cover image
    ತಿರುಪತಿ

    ತಿರುಪತಿ

    1

    ಶಿವಮಣಿ ನಿರ್ದೇಶನದಲ್ಲಿ ಮೂಡಿಬಂದ `ತಿರುಪತಿ' ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ಖಾಕಿ ತೊಟ್ಟರು.

    ಹುಬ್ಬಳ್ಳಿ

    ಹುಬ್ಬಳ್ಳಿ

    2

    ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ `ಹುಬ್ಬಳ್ಳಿ' ಚಿತ್ರದಲ್ಲಿ ಸುದೀಪ್ ಎಸಿಪಿ ' ಅಜಯ್ ಕುಮಾರ್ ಸರನಾಯಕ್' ಪಾತ್ರದಲ್ಲಿ ನಟಿಸಿದ್ದರು.

    ವೀರ ಮದಕರಿ

    ವೀರ ಮದಕರಿ

    3

    ಸುದೀಪ್ ನಿರ್ದೇಶಿಸಿ ನಾಯಕನಾಗಿ ನಟಿಸಿದ `ವೀರ ಮದಕರಿ' ಚಿತ್ರದಲ್ಲಿ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರ ತೆಲುಗಿನ `ವಿಕ್ರಮಾರ್ಕುಡು' ಚಿತ್ರದ ರಿಮೇಕ್ ಆಗಿತ್ತು.

    ಕೆಂಪೇಗೌಡ

    ಕೆಂಪೇಗೌಡ

    4

    ಕೆಂಪೇಗೌಡ ಚಿತ್ರವನ್ನು ಸುದೀಪ್ ನಿರ್ದೇಶಿಸಿ ನಾಯಕನಾಗಿ ನಟಿಸಿದ್ದರು. ಇದು ತಮಿಳಿನಲ್ಲಿ ಸೂರ್ಯ ನಟಿಸಿದ್ದ ಸಿಂಗಂ ಚಿತ್ರದ ರಿಮೇಕ್ ಆಗಿತ್ತು. 

    ವರದನಾಯಕ

    ವರದನಾಯಕ

    5

    ತೆಲುಗು `ಲಕ್ಷಂ' ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ಅಯ್ಯಪ್ಪ ಪಿ ಶರ್ಮ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ವರದ ನಾಯಕನ ಪಾತ್ರದಲ್ಲಿ ನಟಿಸಿದ್ದರೆ, ಚಿರಂಜೀವಿ ಸರ್ಜಾ ಸುದೀಪ್ ತಮ್ಮನ ಪಾತ್ರದಲ್ಲಿ ನಟಿಸಿದ್ದರು.

    ಕಬ್ಜ

    ಕಬ್ಜ

    6

    ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಕಬ್ಜ ಚಿತ್ರದಲ್ಲಿ ಸುದೀಪ್ ಭಾರ್ಗವ ಭಕ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X