1985ರಲ್ಲಿ ಬಿಡುಗಡೆಯಾದ ಬೆಟ್ಟದ ಹೂವು ಸಿನಿಮಾದಲ್ಲಿನ ನಟನೆಗಾಗಿ ಪುನೀತ್ ಅವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪುನೀತ್ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ರಾಷ್ಟ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದರು.
ನ್ಯಾಷನಲ್ ಅವಾರ್ಡ್ ಟು ಕರ್ನಾಟಕ ರತ್ನ: ಅಪ್ಪುಗೆ ಲಭಿಸಿರುವ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.-
/top-listing/national-award-to-karnataka-ratna-here-is-the-list-of-awards-received-by-puneeth-rajkumar-3-17008-1837.html
2.
ಐದು ಬಾರಿ ಸೈಮಾ ಪ್ರಶಸ್ತಿ
ದಕ್ಷಿಣ ಭಾರತ ಚಿತ್ರಗಳಿಗೆ ನೀಡಲಾಗುವ ಪ್ರಮುಖ ಪ್ರಶಸ್ತಿಯಾದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ ಅನ್ನು ಅತಿಹೆಚ್ಚು ಬಾರಿ ಗೆದ್ದ ನಟ ಎಂಬ ದಾಖಲೆಯನ್ನು ಪುನೀತ್ ರಾಜ್‌ಕುಮಾರ್ ಹೊಂದಿದ್ದಾರೆ. ಈ ಬಾರಿ ಯುವರತ್ನ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಸೈಮಾ ಅವಾರ್ಡ್ ಪಡೆದ ಅಪ್ಪು ಒಟ್ಟು ಐದು ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನ್ಯಾಷನಲ್ ಅವಾರ್ಡ್ ಟು ಕರ್ನಾಟಕ ರತ್ನ: ಅಪ್ಪುಗೆ ಲಭಿಸಿರುವ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.-
/top-listing/national-award-to-karnataka-ratna-here-is-the-list-of-awards-received-by-puneeth-rajkumar-3-17009-1837.html
3.
ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ
ಫಿಲ್ಮ್ ಫೇರ್ ಪ್ರಶಸ್ತಿಯಲ್ಲೂ ಸಹ ಪುನೀತ್ ರಾಜ್‌ಕುಮಾರ್ ವಿಶಿಷ್ಟ ದಾಖಲೆ ಹೊಂದಿದ್ದಾರೆ. ಅತಿಹೆಚ್ಚು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈಗಿನ ತಲೆಮಾರಿನ ನಟ ಎಂಬ ಸಾಧನೆಯನ್ನು ಪುನೀತ್ ಹೊಂದಿದ್ದಾರೆ. ಇನ್ನು ಈ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕನ್ನಡದ ಪರ ಅತಿಹೆಚ್ಚು ಬಾರಿ ವರನಟ ರಾಜ್‌ಕುಮಾರ್ ( 8 ಬಾರಿ) ಗೆದ್ದಿದ್ದಾರೆ. ಇನ್ನು ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದಿರುವ ಅನಂತ್ ನಾಗ್ ಹಾಗೂ ಪುನೀತ್ ರಾಜ್‌ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನ್ಯಾಷನಲ್ ಅವಾರ್ಡ್ ಟು ಕರ್ನಾಟಕ ರತ್ನ: ಅಪ್ಪುಗೆ ಲಭಿಸಿರುವ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.-
/top-listing/national-award-to-karnataka-ratna-here-is-the-list-of-awards-received-by-puneeth-rajkumar-3-17010-1837.html
ಅಪ್ಪು ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ ಹಾಗೂ ಜಾಕಿ ಈ ನಾಲ್ಕು ಚಿತ್ರಗಳ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನ್ಯಾಷನಲ್ ಅವಾರ್ಡ್ ಟು ಕರ್ನಾಟಕ ರತ್ನ: ಅಪ್ಪುಗೆ ಲಭಿಸಿರುವ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.-
/top-listing/national-award-to-karnataka-ratna-here-is-the-list-of-awards-received-by-puneeth-rajkumar-3-17011-1837.html
ಈಗ 67ನೇ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನಕ್ಕೆ ಪುನೀತ್ ರಾಜ್‌ಕುಮಾರ್ ಭಾಜನರಾಗಿದ್ದಾರೆ. ಹೀಗೆ ದೇಶ ಮತ್ತು ರಾಜ್ಯದ ಎರಡು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿರುವ ಪುನೀತ್ ರಾಜ್‌ಕುಮಾರ್ ಮೈಸೂರು ವಿಶ್ವವಿದ್ಯಾನಿಯಲದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.
ನ್ಯಾಷನಲ್ ಅವಾರ್ಡ್ ಟು ಕರ್ನಾಟಕ ರತ್ನ: ಅಪ್ಪುಗೆ ಲಭಿಸಿರುವ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.-
/top-listing/national-award-to-karnataka-ratna-here-is-the-list-of-awards-received-by-puneeth-rajkumar-3-17012-1837.html