twitter
    X
    Home ಚಲನಚಿತ್ರಗಳ ಒಳನೋಟ

    ಗಂಧದ ಗುಡಿಗೆ ಒಂದು ವರ್ಷದ ಸಂಭ್ರಮ: ಅಪ್ಪು ಕನಸಿನ ಕೂಸಿನ ವಿಶೇಷತೆಗಳಿವು!

    Author Sowmya Bairappa | Updated: Saturday, October 28, 2023, 12:17 PM [IST]

    'ಗಂಧದ ಗುಡಿ' ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ. ಇದು ಅಪ್ಪು ಅವರ ಕನಸಿನ ಡಾಕ್ಯುಮೆಂಟರಿ. ಈ ಹಿಂದೆ 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ ಮಾಡಿ ಸೈ ಎನಿಸಿಕೊಂಡಿದ್ದ ಅಮೋಘ ವರ್ಷ ವಾರ ಜೊತೆ ಸೇರಿ ಪುನೀತ್ ಕರುನಾಡಿನ 'ಗಂಧದಗುಡಿ' ಜಗತ್ತಿಗೆ ತೋರಿಸಲು ಮುಂದಾಗಿದ್ದರು. ಆದರೆ, ಟೀಸರ್ ರಿಲೀಸ್‌ಗೆ ಹೊಸ್ತಿಲಲ್ಲಿ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಇದು ಕರುನಾಡಿಗೆ ಬಹಳ ದೊಡ್ಡ ಆಘಾತವಾಗಿತ್ತು. ಅಕ್ಟೋಬರ್ 28ರಂದು ಅಪ್ಪು ಅವರ ಕನಸಿನ ಕೂಸಾದ 'ಗಂಧದಗುಡಿ' ಬಿಡುಗಡೆಯಾಗಲಿದ್ದು, ಗಂಧದಗುಡಿ ಸಿನಿಮಾದ ವಿಶೇಷತೆಗಳು ಇಲ್ಲಿವೆ.

    cover image
    ಪುನೀತ್ ರಾಜ್‌ಕುಮಾರ್

    ಪುನೀತ್ ರಾಜ್‌ಕುಮಾರ್

    1

    'ಲಕ್ಕಿಮ್ಯಾನ್' ಚಿತ್ರದಲ್ಲಿ ಅಪ್ಪು ದೇವರಾಗಿ ಕಾಣಿಸಿಕೊಂಡಿದ್ದರು. ಚಿಕ್ಕಂದಿನಿಂದಲೂ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಪುನೀತ್ ರಾಜ್‌ಕುಮಾರ್ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಹಾಗೂ ಸಹಾಯ ಮಾಡುವ ಗುಣದಿಂದ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದರು. 'ಜೇಮ್ಸ್' ಹಾಗೂ 'ಲಕ್ಕಿಮ್ಯಾನ್' ಸಿನಿಮಾಗಳಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದರು. ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿರುವ ಕೊನೆಯ ಸಿನಿಮಾ ಗಂಧದಗುಡಿ. ಈ ಸಿನಿಮಾ ಮೂಲಕ ಅಭಿಮಾನಿಗಳು ಅಪ್ಪುವನ್ನು ಮತ್ತೊಮ್ಮೆ ಕಣ್ಣುತುಂಬಿಕೊಳ್ಳಬಹುದಾಗಿದೆ. 

    ಗಾಜನೂರಿನ ಸುತ್ತಮುತ್ತ ರೋಚಕ ಪಯಣ

    ಗಾಜನೂರಿನ ಸುತ್ತಮುತ್ತ ರೋಚಕ ಪಯಣ

    2

    ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತನ್ನು 'ಗಂಧದಗುಡಿ' ಡಾಕ್ಯುಮೆಂಟರಿಯಲ್ಲಿ ಅನಾವರಣ ಮಾಡಲಾಗಿದೆ. ಗಾಜನೂರಿನ ಸುತ್ತಾ ಮುತ್ತ ಇರುವ ಕಾಡುಗಳಲ್ಲೂ ನಿರ್ದೇಶಕ ಅಮೋಘವರ್ಷ ಜೊತೆ ಪುನೀತ್ ರಾಜ್‌ಕುಮಾರ್ ಸುತ್ತಾಡಿ ಬಂದಿದ್ದರು. ಟ್ರೇಲರ್ ನಲ್ಲಿ ಸುಂದರವಾದ ದ್ವೀಪದಿಂದ 'ಗಂಧದಗುಡಿ' ಗಾಜನೂರಿನ ಪಕ್ಕ ಬೆಟ್ಟದ ಕಡೆಗೆ ಸಾಗುತ್ತದೆ. ಕಾಡಿಗೆ ಅಂಟಿಕೊಂಡಂತೆ ಗಾಜನೂರು ಇದೆ. ಪುನೀತ್ ರಾಜ್‌ಕುಮಾರ್ ಸಾಕಷ್ಟು ಬಾರಿ ತಂದೆ ಹುಟ್ಟೂರಿಗೆ ಹೋಗಿ ಬಂದಿದ್ದಾರೆ. ತಮ್ಮ ಊರಿನ ಸುತ್ತಾಮುತ್ತಾ ಏನೇನಿದೆ ಎನ್ನುವುದನ್ನು ತಿಳಿಸಿದುಕೊಂಡು ಖುಷಿಯಾಗಿದ್ದಾರೆ. ಬೆಟ್ಟಗುಡ್ಡ, ಕಾಡು ಮೇಡು ಏರಿ ಇಳಿದಿದ್ದಾರೆ. ಟ್ರೈಲರ್‌ನಲ್ಲಿ 'ವಸಂತಗೀತಾ' ಚಿತ್ರದಲ್ಲಿ ಅಪ್ಪು ಹಾಗೂ ಡಾ. ರಾಜ್‌ಕುಮಾರ್ ಜೊತೆಗಿರುವ ಸಣ್ಣ ವಿಡಿಯೋ ಝಲಕ್‌ ಅನ್ನು ತೋರಿಸಿದ್ದಾರೆ. 

    ಜುರಾಸಿಕ್‌ ಪಾರ್ಕ್‌ಗೆ ಅಪ್ಪು ಪಯಣ

    ಜುರಾಸಿಕ್‌ ಪಾರ್ಕ್‌ಗೆ ಅಪ್ಪು ಪಯಣ

    3

    ಜೀಪ್ ಏರಿ ಪುನೀತ್ ರಾಜ್‌ಕುಮಾರ್‌ ಹಾಗೂ ಅಮೋಘವರ್ಷ ರಾಜ್ಯದ ಮೂಲೆ ಮೂಲೆಗೆ ಸುತ್ತಾಡಿದ್ದಾರೆ. ಟ್ರೈಲರ್ ಆರಂಭದಲ್ಲೇ ದ್ವೀಪವೊಂದಕ್ಕೆ ಇಬ್ಬರು ಹೊರಟಿರುವುದನ್ನು ನಾವು ಕಾಣಬಹುದು. ಪುನೀತ್ ವಾಯ್ಸ್‌ನಲ್ಲಿ ಟ್ರೈಲರ್ ಶುರುವಾಗುತ್ತೆ. ಇಲ್ಲೇನಾದರೂ ಬೇರೆ ತರಹದ ಪಕ್ಷಿಗಳನ್ನು ತೋರಿಸಲು ಕರ್ಕೊಂಡ್ ಬಂದಿದ್ದೀರಾ? ಸಮುದ್ರದ ಬಳಿ ಎಂದು ಅಪ್ಪು ಕೇಳಿದಾಗ, ಇಲ್ಲ ಇಲ್ಲೊಂದು ಐಲ್ಯಾಂಡ್ ಇದೆ ಎಂದು ಅಮೋಘವರ್ಷ ಹೇಳ್ತಾರೆ. ಆಗ ಅಪ್ಪು ಓಹ್ ಜುರಾಸಿಕ್ ಪಾರ್ಕ್ ಎನ್ನುತ್ತಾರೆ. ಇಲ್ಲಿಂದ ಮುಂದೆ ಸುಂದರ ದ್ವೀಪದ ದರ್ಶನವಾಗುತ್ತದೆ.

     

    ಅಣ್ಣಾವ್ರ ಹುಟ್ಟಿದ ಮನೆಗೆ ಭೇಟಿ

    ಅಣ್ಣಾವ್ರ ಹುಟ್ಟಿದ ಮನೆಗೆ ಭೇಟಿ

    4

    'ಗಂಧದಗುಡಿ' ಡಾಕ್ಯುಮೆಂಟರಿಯಲ್ಲಿ ಪುನೀತ್ ಅಮೋಘವರ್ಷ ಅವರನ್ನು ಗಾಜನೂರಿನಲ್ಲಿರುವ ತಮ್ಮ ತಂದೆ ಹುಟ್ಟಿದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ತಂದೆ ಹುಟ್ಟಿ ಬೆಳೆದ ಊರಿನಲ್ಲಿ ಸುತ್ತಾಡಿದ್ದಾರೆ. ಜೋಗ ಜಲಪಾತ ಸುತ್ತಾ ಓಡಾಡಿದ್ದಾರೆ. ಜಾನಪದ ಕಲೆ, ಸಂಸ್ಕೃತಿಯ ಬಗ್ಗೆ ಚರ್ಚೆಸಿದ್ದಾರೆ. ವನ್ಯ ಜೀವಿ ಸಂಕುಲವನ್ನು ನೋಡಿ ಬೆರಗಾಗಿದ್ದಾರೆ. 

     

    ದ್ವೀಪದಲ್ಲಿ ವಿಹರಿಸಿದ ಅಪ್ಪು

    ದ್ವೀಪದಲ್ಲಿ ವಿಹರಿಸಿದ ಅಪ್ಪು

    5

    ಅಪ್ಪು ಸ್ಕೂಬಾ ಡೈವ್ ಮಾಡಿ ಸಮುದ್ರದ ಆಳದ ಜಲಚರಗಳ ನೋಡಿದ್ದಾರೆ. ಬಹಳ ಸೊಗಸಾಗಿ ಪ್ರತಿ ದೃಶ್ಯವನ್ನು ಕಟ್ಟಿಕೊಡಲಾಗಿದೆ. ಪುನೀತ್ ಬಹಳ ಮುಗ್ಧವಾಗಿ ಪ್ರತಿಯೊಂದರ ಬಗ್ಗೆ ತಿಳಿದುಕೊಳ್ಳುತ್ತಾ, ನಮಗೂ ತಿಳಿಸುತ್ತಾ ಸಾಗುತ್ತಾರೆ. ಪ್ರತೀಕ್ ಶೆಟ್ಟಿ ಅಂಡ್ ಟೀಮ್ ಡ್ರೋನ್ ಕ್ಯಾಮರಾಗಳನ್ನು ಬಳಸಿ ಬಹಳ ರೋಚಕವಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

     

    ಮೇಕಿಂಗ್

    ಮೇಕಿಂಗ್

    6

    ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಡ್‌ಸ್ಕಿಪರ್ ಸಂಸ್ಥೆ ಜಂಟಿಯಾಗಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿವೆ. ಅಂತರಾಷ್ಟ್ರೀಯ ಗುಣಮಟ್ಟದ ಗಂಧದಗುಡಿ ಡಾಕ್ಯುಮೆಂಟರಿ ಮೇಕಿಂಗ್ ಹುಬ್ಬೇರಿಸುವಂತಿದೆ.

    ಪ್ರಧಾನಿ ಮೋದಿ ಮೆಚ್ಚುಗೆ

    ಪ್ರಧಾನಿ ಮೋದಿ ಮೆಚ್ಚುಗೆ

    7

    ಗಂಧದಗುಡಿ ಟ್ರೈಲರ್ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು. ಅಪ್ಪು ಪ್ರತಿಭೆಯ ಕಣಜವಾಗಿದ್ದರು. ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಅರ್ಪಣೆ. ಚಿತ್ರತಂಡದ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು ಎಂದು ಮೆಚ್ಚುಗೆ ಸೂಚಿಸಿದ್ದಾರೆ. 2018ರಲ್ಲಿ ಬಿಜೆಪಿ ಸಮಾವೇಶಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿ ಅಶ್ವಿನಿ ಜೊತೆ ವಿಮಾನ ನಿಲ್ದಾಣದಲ್ಲಿ ಭೇಟಿ ಆಗಿದ್ದರು.

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X