ಚಲನಚಿತ್ರಗಳ ಒಳನೋಟ
2016ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಇಂದು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಎತ್ತರಕ್ಕೆ ಬೆಳೆದ ಕಿರಿಕ್ ಬ್ಯೂಟಿ, ಸಂಪಾದನೆ ವಿಷಯದಲ್ಲೂ ಎತ್ತರದಲ್ಲಿದ್ದಾರೆ. ಅಂದ್ಹಾಗೆ ಮೊದನಿಂದಲೂ ರಶ್ಮಿಕಾರದ್ದು ಶ್ರೀಮಂತ ಕುಟುಂಬವೇ. ವಿರಾಜಪೇಟೆಯಲ್ಲಿ ಉತ್ತಮ ಮೌಲ್ಯದ ಆಸ್ತಿಪಾಸ್ತಿ ಅವರ ತಂದೆಯ ಹೆಸರಲ್ಲಿದೆ. ಇಲ್ಲಿ ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ, ಐಷಾರಾಮಿ ಕಾರುಗಳು, ಆದಾಯ, ಸಂಭಾವನೆಯ ವಿವರವನ್ನು ನೀಡಲಾಗಿದೆ.