ಚಲನಚಿತ್ರಗಳ ಒಳನೋಟ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ 'ಕಬ್ಜ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಕಬ್ಜ ೪ ಸಾವಿರ ಪರದೆಗಳಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಿರ್ದೇಶಕ ಆರ್.ಚಂದ್ರು ಅವರ ವಿಷನ್, ಮೇಕಿಂಗ್, ದೊಡ್ಡ ಸೆಟ್, ರವಿ ಬಸ್ರೂರು ಅವರ ಹಂಟಿಂಗ್ ಬಿಜಿಎಂ, ಉಪ್ಪಿ, ಶಿವಣ್ಣ ಹಾಗೂ ಕಿಚ್ಚನ ಆರ್ಭಟ ಸಿನಿರಸಿಕರಿಗೆ ಸಖತ್ ಕಿಕ್ ಕೊಡ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದ್ದು, ಸಿನಿಮಾದ ಕಲೆಕ್ಷನ್ ವಿವರ ಇಲ್ಲಿದೆ.