ಚಲನಚಿತ್ರಗಳ ಒಳನೋಟ
ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ಹಲವಾರು ನಟ-ನಟಿಯರು ಎಂಟ್ರಿಕೊಡುತ್ತಾರೆ. ಈ ಪೈಕಿ ಕೆಲವರು ಮಾತ್ರ ಸಿಕ್ಕ ಮೊದಲ ಅವಕಾಶದಲ್ಲೇ ಕ್ಲಿಕ್ ಆಗಿ ಹೆಚ್ಚು ಕಾಲ ಉಳಿಯುತ್ತಾರೆ. ಸಾಮಾನ್ಯವಾಗಿ ಹೊಸ ಪ್ರತಿಭೆಗಳು ಎಂದರೆ ಎಲ್ಲಾ ವಿಭಾಗದಲ್ಲೂ ಸಿನಿಮಾ ಉತ್ತಮವಾಗಿದ್ದರೆ ಮಾತ್ರ ಗೆಲುವು ಸಾದ್ಯವಾಗುತ್ತದೆ. ಚಂದನವನದಲ್ಲಿ ಒಟ್ಟಿಗೆ ನಟನೆ ಆರಂಭಿಸಿದ ಅನೇಕ ನಟ-ನಟಿಯರು ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡು ಇಂದು ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಇಲ್ಲಿ ಒಟ್ಟಿಗೆ ನಟನೆ ಆರಂಭಿಸಿ ಗೆಲುವು ಕಂಡ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.