ಚಲನಚಿತ್ರಗಳ ಒಳನೋಟ
ನೂರಾರು ಜನ ಚಿತ್ರರಂಗದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಕನಸು ಹೊತ್ತಿರುತ್ತಾರೆ. ಅದರಲ್ಲಿ ಕೆಲವರು ಸತತ ಪ್ರಯತ್ನ ಮಾಡಿ ಸಿನಿರಂಗಕ್ಕೆ ಬಂದರೂ ಯಶಸ್ಸು ಸಿಗುವುದಿಲ್ಲ. ಸಾಕಷ್ಟು ಪ್ರತಿಭೆಗಳು, ಹೀಗೆ ಹೆಚ್ಚಿನ ಅವಕಾಶ ಸಿಗದೇ ನಿರಾಶರಾಗುತ್ತಾರೆ. ಆದರೆ, ಕೆಲವರಿಗೆ ತಾವು ನಟಿಸಿದ ಮೊದಲ ಚಿತ್ರವೇ ಕೈ ಹಿಡಿಯುತ್ತದೆ. ಮೊದಲ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಪಡೆದು ಸಿನಿರಂಗದಲ್ಲಿ ಭದ್ರವಾಗಿ ನಿಲ್ಲುತ್ತಾರೆ. ಇಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟರ ಮೊದಲ ಹೀರೋಯಿನ್ ಯಾರಾಗಿದ್ದರು ಎಂಬ ಮಾಹಿತಿಯನ್ನು ನೀಡಲಾಗಿದೆ.