twitter
    X
    Home ಚಲನಚಿತ್ರಗಳ ಒಳನೋಟ

    ಚಂದನ್ ಶೆಟ್ಟಿ ಟಾಪ್ 5 ಅಲ್ಬಮ್ ಗೀತೆಗಳು

    Author Administrator | Updated: Monday, April 18, 2022, 02:39 PM [IST]

    ಕನ್ನಡದಲ್ಲಿ ರ‌್ಯಾಪ್ ಗೀತೆಗಳನ್ನು ಜನಪ್ರಿಯಗೊಳಿಸಿದವರು ಚಂದನ್ ಶೆಟ್ಟಿ. ಚಂದನ್ ರ `ಮೂರೇ ಮೂರು ಪೆಗ್ಗಿಗೆ' ಕೇಳುಗರಿಗೆ ಹುಚ್ಚು ಹಿಡಿಸಿ ದಾಖಲೆ ಬರೆಯಿತು. ಇಲ್ಲಿ ಚಂದನ್ ಶೆಟ್ಟಿ ಟಾಪ್ 5 ರ‌್ಯಾಪ್ ಗೀತೆಗಳನ್ನು ನೀಡಿದೆ.

    cover image

    ಮೂರೇ ಮೂರು ಪೆಗ್ಗಿಗೆ

    ಚಂದನ ಶೆಟ್ಟಿಯ ರ್ಯಾಪ್ ಸಂಗೀತದ ಮೊದಲ ದೊಡ್ಡ ಮಟ್ಟದ ಯಶಸ್ಸು ಈ ಗೀತೆ ಎನ್ನಬಹುದು. ಚಂದನ ಶೆಟ್ಟಿ ಸಾಹಿತ್ಯ ಬರೆದು, ನಿರ್ದೇಶಸಿ, ನಟಿಸಿದ್ದ ಈ ಗೀತೆಯಲ್ಲಿ ಐಂದ್ರಿತಾ ರೇ ಹೆಜ್ಜೆ ಹಾಕಿದ್ದರು.

    ಟಕಿಲಾ

    ಚಂದನ್ ಶೆಟ್ಟಿ ನಿರ್ದೇಶಿಸಿದ್ದ ಟಕಿಲಾ ಗೀತೆಯಲ್ಲಿ ಚಂದನ್ ಜೊತೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದರು. ಈ ಗೀತೆ ಕೂಡ ಯೂಟ್ಯೂಬ್ ನಲ್ಲಿ ದಾಖಲೆ ವೀಕ್ಷಣೆ ಕಂಡಿದೆ.

    ಪಾರ್ಟಿ ಫ್ರೀಕ್

    ಪಾರ್ಟಿ ಫ್ರೀಕ್ ಗೀತೆಯನ್ನು ಚಂದನ್ ಶೆಟ್ಟಿ ಯುನೈಟೆಡ್ ಆಡಿಯೋಸ್ ಸಹಯೋಗದಲ್ಲಿ ನಿರ್ಮಿಸಿದ್ದರು. ಈ ಗೀತೆಯಲ್ಲಿ ನಿಶ್ವಿಕಾ ನಾಯ್ಡು, ಚಂದನ್ ಶೆಟ್ಟಿ ಜೊತೆ ಮುಖ್ಯ ಕಲಾವಿದೆಯಾಗಿ ಹೆಜ್ಜೆ ಹಾಕಿದ್ದರೆ, ನಿವೇದಿತಾ ಗೌಡ ಕೂಡ ಕಾಣಿಸಿಕೊಂಡಿದ್ದರು.

    ಚಾಕ್ಲೆಟ್ ಗರ್ಲ್

    ಚಂದನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ `ಚಾಕ್ಲೆಟ್ ಗರ್ಲ್' ಗೀತೆಯಲ್ಲಿ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದರು.

    ಲಕ ಲಕ ಲ್ಯಾಂಬೋರ್ಗಿನಿ

    ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಅಲ್ಬಮ್ ಗೀತೆಯಲ್ಲಿ ಚಂದನ್ ಶೆಟ್ಟಿ ಜೊತೆ ರಚಿತಾ ರಾಮ್ ಹೆಜ್ಜೆ ಹಾಕಿದ್ದರು. ಸಾಹಿತ್ಯ, ಸಂಗೀತ, ಹಿನ್ನಲೆ ಗಾಯನ ಮತ್ತು ಪರಿಕಲ್ಪನೆ ಚಂದನ್ ಶೆಟ್ಟಿಯದಾಗಿತ್ತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X