ಕನ್ನಡ ಚಿತ್ರರಂಗದ ಪಾಲಿಗೆ 2024 ಲಾಭದಾಯಕವಾಗಿರಲಿಲ್ಲ. ಕಳೆದ ವರ್ಷ 220ಕ್ಕೂ ಅಧಿಕ ಸಿನಿಮಾಗಳ ಬಿಡುಗಡೆಯಾಗಿದ್ದರೂ ಹಿಟ್ ಲಿಸ್ಟ್ ಸೇರಿದ್ದು ಕೆಲವೇ ಸಿನಿಮಾಗಳು ಮಾತ್ರ. ಅದರಲ್ಲೂ ಒಂದಷ್ಟು ಜನಪ್ರಿಯ ನಟರ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಇದೀಗ ಹೊಸ ವರ್ಷ '2025' ಬಂದಾಯ್ತು. ಈ ವರ್ಷದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಸಾಕಷ್ಟು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹೀಗಾಗಿ, ಇಡೀ ಭಾರತೀಯ ಚಿತ್ರರಂಗವೇ ಮತ್ತೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವ ಭರಸವಸೆಯಿದೆ. ಇಲ್ಲಿ 2025ರಲ್ಲಿ ಅತಿಹೆಚ್ಚು ಸಿನಿಮಾಗಳನ್ನು ಹೊಂದಿರುವ ಕನ್ನಡದ ನಟರ ಪಟ್ಟಿ ಇಲ್ಲಿದೆ.