ಯೂಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿರುವ ಕನ್ನಡ ರ‍್ಯಾಪ್ ಸಾಂಗ್ಸ್
  Published: Thursday, April 16, 2020, 10:44 AM [IST]
  ಸಂಗೀತದಲ್ಲಿ ನೂರಾರು ವಿಧಗಳಿದ್ದರೂ, ಪ್ರಸ್ತುತ ರ‍್ಯಾಪ್ ಗೀತೆಗಳು ಯುವಜನತೆಯ ಹಾಟ್ ಫೇವರೇಟ್ ಆಗಿವೆ. ಎಮಿನೆಮ್, ಜೇ ಜೆಡ್, ಡ್ರೇಕ್ ಮುಂತಾದ ರ‍್ಯಾಪರ್ ಗಳಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿಧಾನವಾಗಿ ಭಾರತದಲ್ಲಿ ಕೂಡ ಹಲವು ರ‍್ಯಾಪರ್ ಗಳು ಹುಟ್ಟಿದ್ದರು. ಕನ್ನಡದಲ್ಲಿ ಕೂಡ ಚಂದನ್ ಶೆಟ್ಟಿ, ಆಲ್ ಓಕೆ, ರಾಹುಲ್ ಡೀಟೋ, ವಿರಾಜ್ ಮುಂತಾದ ಪ್ರತಿಭೆಗಳು ತಮ್ಮ ಕನ್ನಡ ರ‍್ಯಾಪ್ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸತೊಡಗಿದರು. ಇಲ್ಲಿ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ರ‍್ಯಾಪ್ ಗೀತೆಗಳನ್ನು ನೀಡಲಾಗಿದೆ.
  1. 3 Peg: ಯೂಟ್ಯೂಬ್ ವೀಕ್ಷಣೆ - 83+ ಮಿಲಿಯನ್
  ಚಂದನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಮೂರೇ ಮೂರು ಪೆಗ್ ಗೀತೆ ಕನ್ನಡದ ಮೊದಲ ಪ್ರಸಿದ್ಧ ರ‍್ಯಾಪ್ ಗೀತೆ ಎನ್ನಬಹುದು. ಈ ಗೀತೆ ಬರೆದು ಹಾಡಿದ್ದ ಚಂದನ್ ಜೊತೆಗೆ ಐಂದ್ರಿತಾ ರೇ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 83 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
  2. ಟಕಿಲ್: ಯೂಟ್ಯೂಬ್ ವೀಕ್ಷಣೆ - 58 ಮಿಲಿಯನ್

  ಚಂದನ್ ಶೆಟ್ಟಿ ನಿರ್ದೇಶನ ಮತ್ತು ಕಂಠದಲ್ಲಿ ಮೂಡಿಬಂದ ಟಕಿಲ್ ಗೀತೆಯಲ್ಲಿ ಚಂದನ್ ಜೊತೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 58 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

  3. ಚಾಕೋಲೇಟ್ ಗರ್ಲ್: ಯೂಟ್ಯೂಬ್ ವೀಕ್ಷಣೆ - 29 ಮಿಲಿಯನ್

  ಚಂದನ್ ಶೆಟ್ಟಿ ಕಂಠದಲ್ಲಿ ಮೂಡಿಬಂದ ಮತ್ತೊಂದು ರ‍್ಯಾಪ್ ಗೀತೆ ಚಾಕೋಲೇಟ್ ಗರ್ಲ್ ನಲ್ಲಿ ಚಂದನ್ ಜೊತೆ ಮುಂಗಾರು ಮಳೆ 2 ಚಿತ್ರದ ಖ್ಯಾತಿ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 29 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X