X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ಕಾರ್ತಿಕ್ ಮಹೇಶ್ ಕುರಿತ ಇಂಟರೆಸ್ಟಿಂಗ್ ವಿಷಯಗಳಿವು!

Author Sowmya Bairappa | Updated: Saturday, January 27, 2024, 08:32 AM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಆರಂಭವಾಗಿದ್ದು, ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಗೆ ವಿಭಿನ್ನ ವ್ಯಕ್ತಿತ್ವದ ಹಾಗೂ ಬೇರೆ-ಬೇರೆ ಕ್ಷೇತ್ರದ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಜೊತೆಗೆ ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋ ಹೊಸ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿ ದೊಡ್ಮನೆ ಪ್ರವೇಶಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ಕಾರ್ತಿಕ್ ಮಹೇಶ್ ಕುರಿತ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.


cover image
ಮೈಸೂರಿನವರು

ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ.  ನಂತರ ನಟನಾಗುವ ಕನಸು ಹೊತ್ತು ಬೆಂಗಳೂರಿನತ್ತ ಮುಖ ಮಾಡಿದ ಇವರು, ಮಾಡಲಿಂಗ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು.   

ನಟನೆಯ ಕನಸು

ಕಾರ್ತಿಕ್ ಮಹೇಶ್‌ಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸಿತ್ತು. ಹೀಗಾಗಿ ಮಾಡಲಿಂಗ್ ಮಾಡುತ್ತಲೇ  ಹಲವಾರು ಸೀರಿಯಲ್‌ಗಳಿಗೆ ಆಡಿಷನ್ ಕೊಟ್ಟರು. ಬಳಿಕ ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಆ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡರು.    

ಸೀರಿಯಲ್‌ಗಳು

ಕಾರ್ತಿಕ್ ಮಹೇಶ್ ಅವರು ಖುಷಿ, ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಈ ಸೀರಿಯಲ್ ತೊರೆದಿದ್ದ ಕಾರ್ತಿಕ್, ಕಲರ್ಸ್ ಕನ್ನಡ ಅಂತರಪಟ ಧಾರವಾಹಿಯಲ್ಲಿ 'ರವಿ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.   

ಸಿನಿಮಾ

ಕಾರ್ತಿಕ್ ಖುಷಿ ಧಾರವಾಹಿಯಲ್ಲಿ ನಟಿಸುವಾಗ ಸುನೀಲ್ ಪುರಾಣಿಕ್ ಇವರ ತಂದೆಯ ಪಾತ್ರದಲ್ಲಿ ನಟಿಸಿದ್ದರಂತೆ. ನಂತರ ಅವರ ಪುತ್ರ ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ 'ಡೊಳ್ಳು' ಸಿನಿಮಾದ ನಾಯಕನಾಗಿ ಇವರನ್ನು ಆಯ್ಕೆ ಮಾಡಿದ್ದರು. ಡೊಳ್ಳು ಚಿತ್ರಕ್ಕಾಗಿ ಕಾರ್ತಿಕ್ ಸ್ವತಃ ಡೊಳ್ಳು ಬಡಿಯೋದನ್ನು ಕಲಿತು ಅದ್ಭುತವಾಗಿ ಅಭಿನಯಿಸಿದ್ದರು.   

ರಾಷ್ಟ್ರಪ್ರಶಸ್ತಿ

ಕಾರ್ತಿಕ್ ನಾಯಕನಾಗಿ ನಟಿಸದ ಮೊದಲ ಚಿತ್ರವೇ 2022ರ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು. ಒಬ್ಬ ಯುವಕ ಜಾನಪದ ಗುಂಪಿನ ಜೊತೆ ಸೇರಿ ಡೊಳ್ಳು ಬಾರಿಸುತ್ತಾ ತನ್ನ  ಅಸ್ತಿತ್ವವನ್ನು ಹುಡುಕಲು ಹೊರಡುವ ಕಥೆಯೇ ಈ ಚಿತ್ರದ ಮೂಲವಸ್ತುವಾಗಿತ್ತು. ಸದ್ಯ ಕಾರ್ತಿಕ್ ಬಿಗ್‌ಬಾಸ್‌ ಕನ್ನಡ ಸೀಸನ್ 10ಕ್ಕೆ ಎಂಟ್ರಿಕೊಟ್ಟಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+