ನಟಿ, ರಾಜಕಾರಣಿ ರೋಜಾ ಸೆಲ್ವಮಣಿ ಕನ್ನಡದಲ್ಲಿ ನಟಿಸಿದ ಪ್ರಮುಖ ಸಿನಿಮಾಗಳಿವು...!

  ರೋಜಾ ಸೆಲ್ವಮಣಿ ರಾಜಕಾರಣಿ, ನಟಿ, ರಿಯಾಲಿಟಿ ಶೋ ಜಡ್ಜ್ ಹೀಗೆ ಬಹುಮುಖ ಪ್ರತಿಭೆ. ರೀಲ್ ಲೈಫ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹಲವು ರೋಲ್ ನಿಭಾಯಿಸುತ್ತಿರುವ ನಟಿ ರಾಜಕೀಯದಲ್ಲಿ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ನಟಿಯಾಗಿ ತಮಿಳು, ತೆಲಗು ಮಾತ್ರವಲ್ಲದೇ ಕನ್ನಡ ಸಿನಿಮಾಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ರೋಜಾ ಅವರ ನಿಜವಾದ ಹೆಸರು ಶ್ರೀಲತಾ ರೆಡ್ಡಿ. ಇವರು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕೂಚಿಪೂಡಿ ನೃತ್ಯಗಾರ್ತಿಯಾಗಿ ಅನೇಕ ಪ್ರದರ್ಶನಗಳನ್ನು ನೀಡಿದ್ದರು. ರೋಜಾ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ 'ಪ್ರೇಮ ತಪಸ್ಸು'. 1992ರಲ್ಲಿ ಇವಿವಿ ಸತ್ಯನಾರಾಯಣ ನಿರ್ದೇಶನದ ‘ಸೀತಾರತ್ನಂ ಗರಿ ಬಾಯ್’ ಚಿತ್ರ ಅವರಿಗೆ ಬ್ರೇಕ್ ನೀಡಿತು. ಅಲ್ಲಿಂದ ರೋಜಾ ಹಿಂತಿರುಗಿ ನೋಡಲಿಲ್ಲ. ಆ ನಂತರ ಮುತ್ತಮೇಸ್ತ್ರಿ, ಮೂರು ಮೊನಗಲ್ಲು, ಭೈರವ ದ್ವೀಪ, ಗಾಂಡೀವಂ, ಬೊಬ್ಬಿಲಿ ಸಿಂಹಂ, ಶುಭಲಗ್ನಂ ಚಿತ್ರಗಳು ರೋಜಾ ಅವರನ್ನು ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿಸಿದವು. ರೋಜಾ ಕನ್ನಡದಲ್ಲಿ ನಟಿಸಿದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

  ರೋಜಾ ಕನ್ನಡದಲ್ಲಿ ಮೊದಲು ನಟಿಸಿದ ಸಿನಿಮಾ ಗಡಿಬಿಡಿ ಗಂಡ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಗಡಿಬಿಡಿ ಗಂಡ ಸಿನಿಮಾ ಕೂಡ ಒಂದು. ಈ ಚಿತ್ರವು ೨೫ ವಾರಗಳ ಕಾಲ ಯಶಸ್ವೀ ಪ್ರದರ್ಶನ ಕಂಡಿತ್ತು.  ವಿ.ಎಸ್.ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರವಿಚಂದ್ರನ್, ಜಗ್ಗೇಶ್, ರಮ್ಯಾ ಕೃಷ್ಣನ್ ಮತ್ತು ರೋಜಾ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 1991ರಲ್ಲಿ ತೆರೆಕಂಡ `ಅಲ್ಲಾರಿ ಮೊಗಡು' ಎಂಬ ಚಿತ್ರದ ರಿಮೇಕ್ ಆಗಿತ್ತು. ಈ ಸಿನಿಮಾದಲ್ಲಿ ಗೋಪಾಲ ಎಂಬ ಹಳ್ಳಿ ಯುವಕ ತನ್ನ ಸಂಗೀತ ಸಾಧನೆ ಜೊತೆಗೆ ಇಬ್ಬರು ಹೆಂಡಿರ ಜೊತೆಗಿನ ಸಂಸಾರದ ಸನ್ನಿವೇಶಗಳು ಹಾಸ್ಯವಾಗಿ ಮೂಡಿಬಂದಿವೆ. 

   

  2. ಕಲಾವಿದ

  ಕಲಾವಿದ ಸಿನಿಮಾವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ರೋಜಾ, ಹೀರಾ ರಾಜ್‌ಗೋಪಾಲ್ ನಟಿಸಿದ್ದರು. ಚಿತ್ರದ ಹಾಡುಗಳಂತೂ ಸಂಗೀತಪ್ರಿಯರ ಮನಸೂರೆಗೊಂಡಿದ್ದವು. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಸಿದ್ಧಗೊಂಡಿದ್ದ ಚಿತ್ರದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಇದು ನಟಿ ರೋಜಾ ಅವರ ಎರಡನೇ ಕನ್ನಡ ಸಿನಿಮಾವಾಗಿತ್ತು. 

  3. ಪ್ರೇಮೋತ್ಸವ

  1999ರಲ್ಲಿ ತೆರೆಕಂಡಿದ್ದ 'ಪ್ರೇಮೋತ್ಸವ' ಚಿತ್ರದಲ್ಲಿ ಡಾ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿ ರೋಜಾ ಹಾಗೂ ಮೊದಲ ಬಾರಿಗೆ ಕನ್ನಡದಲ್ಲಿ ದೇವಯಾನಿ  ನಾಯಕಿಯಾಗಿ ನಟಿಸಿದ್ದರು.ದಿನೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದರು. ಈ ಸಿನಿಮಾದಲ್ಲಿ ರೋಜಾ ಅವರ ಪಾತ್ರಕ್ಕೆ ನಟಿ ಸುಧಾರಾಣಿ ವಾಯ್ಸ್ ನೀಡಿದ್ದರು.  

  ಸುಂದರಕಾಂಡ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದರು. ಎಂ ಎಸ್ ರಾಜಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ರೋಜಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ 2001ರಲ್ಲಿ ಬಿಡುಗಡೆಯಾಗಿತ್ತು.  

  ಪರ್ವ ಸಿನಿಮಾದಲ್ಲಿ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾವನ್ನು ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಪ್ರೇಮ ಹಾಗೂ ರೋಜಾ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2002ರಲ್ಲಿ ಬಿಡುಗಡೆಯಾಗಿತ್ತು.  

   

  ಮೌರ್ಯ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ನಾಯಕನಾಗಿ ಮತ್ತು ಮೀರಾ ಜಾಸ್ಮಿನ್ ನಾಯಕಿಯಾಗಿ ನಟಿಸಿದ್ದರು. ಪುನೀತ್ ಅಭಿನಯದ ಹಿಟ್ ಸಿನಿಮಾಗಳಲ್ಲಿ ಮೌರ್ಯ ಕೂಡ ಒಂದು. ಎಸ್ ನಾರಾಯಣ್ ಅವರ ನಿರ್ದೇಶನದ ಈ ಚಿತ್ರದಲ್ಲಿ ರೋಜಾ ಅವರು ಪುನೀತ್ ತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅಮ್ಮ, ಅಮ್ಮ ಹಾಡು ಸಖತ್ ಫೇಮಸ್ ಆಗಿತ್ತು. ಮೌರ್ಯ ಸಿನಿಮಾ 2004ರಲ್ಲಿ ಬಿಡುಗಡೆಯಾಗಿತ್ತು.  ಈ ಸಿನಿಮಾದಲ್ಲಿ ಕೂಡ ರೋಜಾ ಅವರ ಪಾತ್ರಕ್ಕೆ ನಟಿ ಸುಧಾರಾಣಿ ವಾಯ್ಸ್ ನೀಡಿದ್ದರು.  

   

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X