ಅತ್ಯುತ್ತಮ ಟಿವಿ ಚಾನಲ್ ಕನಸು ನಮ್ಮದು- ಲಹರಿ ನಾಯ್ಡು

<ul id="pagination-digg"><li class="next"><a href="/tv/06-lahari-velu-funding-ranganath-tv-channel-aid0037.html">Next »</a></li></ul>

ದಟ್ಸ್ ಕನ್ನಡ ವಾಹಿನಿ ನಿನ್ನೆಯಷ್ಟೇ ಬ್ಲಾಸ್ಟ್ ಮಾಡಿರುವ ಸುದ್ದಿಗೆ ಇಂದು ಖಾತ್ರಿ ಸಿಕ್ಕಿದೆ. ಎಚ್ ಆರ್ ರಂಗನಾಥ್ ನೇತ್ರತ್ವದಲ್ಲಿ ಮೂಡಿ ಬರುತ್ತಿರುವ ಇನ್ನೂ ಹೆಸರಿಡದ (ಮೇ ಬಿ ಕದಂಬ) ವಾಹಿನಿಗೆ ಹಣ ಹೂಡುತ್ತಿರುವ ಸುದ್ದಿಗೆ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ.

ಇಡೀ ನಾಡಿನ ಜನತೆಗೆ ನಾವು ಈ ಚಾನಲ್ ಅನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ರಂಗನಾಥ್ ಸಾಹೇಬರ ಕಾರ್ಯ ವೈಖರಿ ನಮಗೆ ಮೊದಲಿಂದಲೂ ಹಿಡಿಸಿತ್ತು. ಆದರೆ ಎಲ್ಲವನ್ನೂ ನಮ್ಮ ಸಹೋದರ ಮನೋಹರ್ ನಾಯ್ದು (ಲಹರಿ ಸಂಸ್ಥೆಯ ಸಂಸ್ಥಾಪಕ) ಅವರೇ ನೋಡಿ ಕೊಳ್ಳುತ್ತಿದ್ದಾರೆ. ಖಂಡಿತ ಅವರೇ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ದಟ್ಸ್ ಕನ್ನಡ ಪ್ರತಿನಿಧಿಗೆ ಲಹರಿ ವೇಲು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಣ್ಣ ಮನೋಹರ್ ನಾಯ್ದು ಅವರಿಗೆ ಒಂದು ದೊಡ್ಡ ಮಟ್ಟದ ಖಾಸಾಗಿ ವಾಹಿನಿ ಮಾಡಬೇಕೆಂಬ ಕನಸಿತ್ತು. ಆದರೆ ಅದಕ್ಕೆ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ. ಈಗ ಅದು ಒದಗಿ ಬಂದಿದೆ. ಖಂಡಿತ ಕನ್ನಡ ಜನತೆಗೆ ನಮ್ಮ ಕಡೆಯಿಂದ ಉತ್ತಂ ಮತ್ತು ಗುಣಮಟ್ಟದ ವಾಹಿನಿಯನ್ನು ಕೊಡುಗೆಯಾಗಿ ನೀಡುವುದು ಖಚಿತ ಎಂದು ವೇಲು ಅವರು ಮನೋಹರ್ ನಾಯ್ದು ಅವರ ಪರವಾಗಿ ಹೇಳಿಕೆ ನೀಡಿದ್ದಾರೆ.

ಇವೆಲ್ಲದ ಜೊತೆಗೆ ಚಾನಲ್ ಸಂಬಂಧಿಸಿದ ಎಲ್ಲಾ ಜವಾಬ್ದಾರಿಯನ್ನು ಹಿರಿಯರಾದ ರಂಗನಾಥ್ ಅವರಿಗೆ ವಹಿಸಿದ್ದೇವೆ. ನಾವೇನಿದ್ದರೂ ಅವರ ಆದೇಶದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ವೇಲು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.

<ul id="pagination-digg"><li class="next"><a href="/tv/06-lahari-velu-funding-ranganath-tv-channel-aid0037.html">Next »</a></li></ul>

More from Filmibeat

English summary
Lahari velu confirms oneindia Kannada news, that he and his brother Manohara Naidu is investing in kannada tv channel headed by H R Ranganath.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X