ನಟಿ ರಾಧಿಕ ಯಾರೆಂದೇ ನನಗೆ ತಿಳಿದಿಲ್ಲ, ಅನಿಲ್ ಲಾಡ್

ಲಾಡ್: ನಿಮಗೆ ಆಗಲೇ ತಿಳಿಸಿದಂತೆ ನೀತಿ ಸಂಹಿತೆ ಇರೋದರಿಂದ ಅದರ ಲಾಭ ರಾಮುಲು ಪಡೆದರು. ಶ್ರೀರಾಮುಲು ಮತದಾರರಿಗೆ 500 ರೂಪಾಯಿ ನೀಡಿದ್ದಾರೆ ಎನ್ನುವ ಸುದ್ದಿ ನನಗೂ ಇದೆ. 46 ಸಾವಿರ ಮತಗಳ ಅಂತರದಿಂದ ಅದೂ ಫ್ಯಾನ್ ಚಿಹ್ನೆ ಬಳಸಿ ಗೆಲ್ಲುವುದು ಅಂದರೆ ಎಲ್ಲರಿಗೂ ತಿಳಿಯುವ ವಿಚಾರ. ನಾವಂತೂ ಮತದಾರರಿಗೆ ದುಡ್ಡು ಕೊಟ್ಟಿಲ್ಲ.
ಪ್ರ: ರಾಮುಲು ಮತ್ತು ಕುಮಾರಸ್ವಾಮಿ ಸಂಬಂಧದ ಬಗ್ಗೆ?
ಲಾಡ್: ಅದು ಇತ್ತೀಚಿಗೆ ಕುದುರಿದ ಸಂಬಂಧ. ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಈ ವಿಷಯದಲ್ಲಿ ರಾಮುಲು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು. ಜೆಡಿಎಸ್ ಬೆಂಬಲ ನೀಡುವುದಿಲ್ಲ ಎನ್ನುವ ಪಕ್ಷದ ನಾಯಕರ ಪರವಾಗಿ ಜಮೀರ್ ಅಹಮದ್ ರಾಮುಲು ಪರವಾಗಿ ಮತ ಯಾಚಿಸುತ್ತಾರೆ.
ಪ್ರ: ಜಮೀರ್ ಅಹಮದ್ ನಿಮ್ಮ ಬಗ್ಗೆ ಸಾರ್ವಜನಿಕವಾಗಿ ಕೇವಲವಾಗಿ ಮಾಡಿದ್ದಾರಂತೆ?
ಲಾಡ್: ಕುಮಾರಸ್ವಾಮಿ ಬೆಂಬಲದಿಂದ ನಾನು ರಾಜ್ಯಸಭಾ ಸದಸ್ಯನಾದೆ. ಆ ಪಕ್ಷದ 20 ಶಾಸಕರು ನನಗೆ ಬೆಂಬಲ ನೀಡಿದರು. ನನ್ನ ವಿರುದ್ದ ಮಾತಾಡಿದ್ದ ಜಮೀರ್ ಅಹಮದ್ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ನಾನು ದೇವೇಗೌಡರನ್ನು ಭೇಟಿ ಮಾಡಿ ಈ ಸಂಬಂಧ ಮಾತನಾಡುತ್ತೇನೆ.
ಪ್ರ: ಮಾಜಿ ಸಿಎಂ ಒಬ್ಬರಿಗೆ ನೀವು ನಟಿ ರಾಧಿಕಾಳನ್ನು ಪರಿಚಯಿಸಿದರು ಎನ್ನುವ ಸುದ್ದಿ ಬಗ್ಗೆ?
ಲಾಡ್ : ನನಗೆ ನಟಿ ರಾಧಿಕಾ ಅಂದರೆ ಯಾರೆಂದೇ ತಿಳಿದಿಲ್ಲ. ನಾನು ಅವರ ಯಾವುದೇ ಚಿತ್ರ ನೋಡಿಲ್ಲ. ಇನ್ನು ನಾನು ಅವರನ್ನು ಕುಮಾರಸ್ವಾಮಿಗೆ ಪರಿಚಯಿಸುವ ಪ್ರಶ್ತ್ನೆಯೇ ಉಧ್ಭವ ಆಗುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನೀವು ಮಾಜಿ ಸಿಎಂ ಅವರನ್ನೇ ಕೇಳಿ.
ಪ್ರ: ಒಂದು ವೇಳೆ ನಟಿ ಕತ್ರಿನಾ ಕೈಫ್ ನಿಮ್ಮನ್ನು ಮದುವೆ ಆಗುತ್ತೇನೆ ಎಂದರೆ?
ಲಾಡ್: ನಾನು ಏಕ ಪತ್ನಿವ್ರತಸ್ಥ. ನನಗೆ ಈಗ 37 ವರ್ಷ. ಹೆಂಡತಿ ಹೇಳಿದಂತೆ ಕೇಳುತ್ತೇನೆ. ಅವಳು ಇನ್ನೊಂದು ಮದುವೆಗೆ ಒಪ್ಪೋಲ್ಲಾ ಅದಕ್ಕೆ ಈ ರೀತಿ ಹೇಳುತ್ತಿದ್ದೇನೆ.


Click it and Unblock the Notifications











