ಟಿವಿಸಿನಿಮಾ: ಕವಿರತ್ನ ಕಾಳಿದಾಸ ಮತ್ತು ಸೂರ್ಯವಂಶ

1. ಅಣ್ಣಾವ್ರು ( ಉದಯ ಟಿವಿ - ಮಧ್ಯಾಹ್ನ 12ಗಂಟೆಗೆ)
ಮಂಡ್ಯದ ಗಂಡು, ಕಲಿಯುಗದ ಕರ್ಣ ಅಂಬರೀಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ಜೊತೆಯಾಗಿ ನಟಿಸಿದ ಮೊದಲ ಚಿತ್ರ. 19 .12 .2003 ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಭರ್ಜರಿ ಯಶಸ್ಸು ಪಡೆಯದಿದ್ದರೂ ನಿರ್ಮಾಪಕರ ಜೇಬು ಭರ್ತಿ ಮಾಡಿತ್ತು. ಸುಹಾಸಿನಿ ಕೂಡಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಗೌರವ್ ಸಿನಿ ಕ್ರಿಯೇಶನ್ ಬ್ಯಾನರ್ ನಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು.
2. ಕವಿರತ್ನ ಕಾಳಿದಾಸ ( ಉದಯ ಟಿವಿ - ಮಧ್ಯಾಹ್ನ 3ಗಂಟೆಗೆ)
ವರನಟ ಡಾ.ರಾಜ್ ಅಭಿನಯದ ಸಾರ್ವಕಾಲಿಕ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರ ಕೂಡಾ ಒಂದು. ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಮೂಡಿ ಬಂದ ಈ ಚಿತ್ರದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ಚಿತ್ರ ಹಣದ ಹೊಳೆಯನ್ನೇ ಹರಿಸಿತ್ತು. ಕಾಳಿದಾಸನಾಗಿ ಡಾ.ರಾಜ್, ಭೋಜರಾಜನಾಗಿ ಶ್ರೀನಿವಾಸ ಮೂರ್ತಿ ಮತ್ತು ವಿದ್ಯಾಧರೆ ಪಾತ್ರದಲ್ಲಿ ಜಯಪ್ರದ ನಟಿಸಿದ್ದರು. ಮುಸುರಿ ಕೃಷ್ಣಮೂರ್ತಿ, ಬಾಲಕೃಷ್ಣ ಕೂಡಾ ತಾರಾಗಣದಲ್ಲಿದ್ದ ಚಿತ್ರದ ಹಾಡುಗಳು ಒಂದರ ಮೇಲೊಂದು ಸೂಪರ್ ಹಿಟ್ ಆಗಿದ್ದವು. ರೇಣುಕಾ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಎಂ. ರಂಗರಾವ್ ಸಂಗೀತ ನೀಡಿದ್ದರು.
3. ಸೂರ್ಯವಂಶ ( ಉದಯ ಟಿವಿ - ಸಂಜೆ 6ಗಂಟೆಗೆ)
ಡಾ. ವಿಷ್ಣುವರ್ಧನ್ ಅಭಿನಯದ 168ನೇ ಚಿತ್ರ. ವೀರಪ್ಪ ನಾಯಕ, ಹಬ್ಬ ಹಿಟ್ ಚಿತ್ರದ ಬೆನ್ನಲ್ಲೇ ಬಂದ ಈ ಚಿತ್ರ 1999ರಲ್ಲಿ ಬಿಡುಗಡೆಗೊಂಡಿತ್ತು. ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ಎಸ್ ನಾರಾಯಣ್ ನಿರ್ದೇಶಿಸಿದ್ದರು. ವಿಷ್ಣು, ಜೂಲಿಲಕ್ಷ್ಮಿ, ಇಷಾ ಕೊಪ್ಪಿಕಾರ್, ವಿಜಯಲಕ್ಷ್ಮಿ, ರಮೇಶ್ ಭಟ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಮುಂತಾದ ದೊಡ್ಡ ತಾರಾಗಣದಲ್ಲಿರುವ ಈ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದರು. ಅಂದಹಾಗೆ ಇದು 1997ರಲ್ಲಿ ವಿಕ್ರಮನ್ ನಿರ್ದೇಶನದ ಶರತ್ ಕುಮಾರ್, ದೇವಯಾನಿ, ಮೀನಾ ಪ್ರಮುಖ ಭೂಮಿಕೆಯಲ್ಲಿದ್ದ ತಮಿಳು ಸೂರ್ಯವಂಶಂ ಚಿತ್ರದ ರಿಮೇಕ್. ತಮಿಳಿನಿಂದ ತೆಲುಗು, ಅಲ್ಲಿಂದ ಕನ್ನಡ ಮತ್ತೆ ಇಲ್ಲಿಂದ ಹಿಂದಿ ಚಿತ್ರದಲ್ಲಿ ರಿಮೇಕ್ ಗೊಂಡ ಚಿತ್ರಗಳು. ಎಲ್ಲಾ ಭಾಷೆಗಳಲ್ಲಿ ಚಿತ್ರ ಯಶಸ್ವಿಯಾಗಿತ್ತು.


Click it and Unblock the Notifications