'ಜೇಮ್ಸ್' ಪ್ರೀಮಿಯರ್‌ಗೆ ಸಾಥ್ ಕೊಟ್ಟ 40 ಸಾವಿರ ಮಕ್ಕಳು
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸುವರ್ಣದಲ್ಲಿ ವರ್ಲ್ಡ್ ಪ್ರಿಮಿಯರ್ ಆಗಲಿದೆ. ಈ ಕಾರಣಕ್ಕೆ ಸ್ಟಾರ್ ಸುವರ್ಣ ಮಕ್ಕಳಿಗಾಗಿಯೇ ವಿಶೇಷ ಅಭಿಯಾನವನ್ನು ಆಯೋಜಿಸಿದೆ. ಮಕ್ಕಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಬಲು ಪ್ರೀತಿ. ಅಪ್ಪುಗೂ ಮಕ್ಕಳು ಎಂದರೆ ಬಲು ಪ್ರೀತಿ.
ಈ ಕಾರಣಕ್ಕೆ ಸ್ಟಾರ್ ಸುವರಣ್ 'ಜೇಮ್ಸ್' ಸಿನಿಮಾವನ್ನು ಇದೇ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಮಾಡುತ್ತಿದ್ದು, ಈ ವೇಳೆಯಲ್ಲಿ ಇಂತಹ ವಿಶಿಷ್ಠ ಅಭಿಯಾನವನ್ನು ಆಯೋಜಿಸಿದೆ. ಮಕ್ಕಳಿಗೆ ಮತ್ತೆ ಅಪ್ಪು ನೆನಪು ಮರುಕಳಿಸುವಂತೆ ಮಾಡಿದೆ. ರಾಜ್ಯದಾದ್ಯಂತ ಸುಮಾರು 40 ಸಾವಿರ ಶಾಲಾ ಮಕ್ಕಳಿಂದ ಪುನೀತ್ ರಾಜ್ ಕುಮಾರ್ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಅಪ್ಪು ರೇಖಾ ಚಿತ್ರಕ್ಕೆ ಬಣ್ಣ ತುಂಬಿದ ಮಕ್ಕಳು
ಸ್ಟಾರ್ ಸುವರ್ಣ ಈಗಾಗ್ಲೇ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಶಾಲೆಗಳ ಮಕ್ಕಳಿಂದ ಪುನೀತ್ ಭಾವ ಚಿತ್ರಕ್ಕೆ ಬಣ್ಣ ತುಂಬಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಯಾವ ಮಕ್ಕಳು ಅತ್ಯುತ್ತಮವಾಗಿ ಅಪ್ಪು ಭಾವ ಚಿತ್ರಕ್ಕೆ ಬಣ್ಣತುಂಬುತ್ತಾರೋ ಅಂತಹವರಿಗೆ ಸ್ಟಾರ್ ಸುವರ್ಣ ಪ್ರಶಂಸತಾ ಪತ್ರವನ್ನು ನೀಡಲಾಗಿದೆ.
ಸ್ಟಾರ್ ಸುವರ್ಣದ ಈ ವಿಶೇಷ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಎಲ್ಲಾ ಮಾದರಿಯ ಶಾಲಾ ಮಕ್ಕಳು ಪುನೀತ್ ರಾಜ್ ಕುಮಾರ್ ರೇಖಾ ಚಿತ್ರಕ್ಕೆ ಬಣ್ಣ ತುಂಬಿ ನಮನ ಸಲ್ಲಿಸ್ತಿದೆ.
'ಇಸ್ಮಾರ್ಟ್ ಜೋಡಿ'ನೂ ಸಾಥ್
ಇದೇ ಜುಲೈ 16 ಕ್ಕೆ ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿಮಾಲ್‌ನಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರೀಮಿಯರ್‌ಗಾಗಿ ವಿಶೇಷ ಅಭಿಯಾನವನ್ನು ಆಯೋಜಿಸಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು, ಸ್ಟಾರ್ ಸುವರ್ಣ ವಾಹಿನಿಯ ಹೊಚ್ಚ ಹೊಸ ರಿಯಾಲಿಟಿ ಶೋ ''Ismart ಜೋಡಿ'' ಕಾರ್ಯಕ್ರಮದ ಜೋಡಿ ಭಾಗವಹಿಸಲಿವೆ.

'ಜೇಮ್ಸ್' ಸಿನಿಮಾ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ ಪ್ರಪ್ರಥಮ ಬಾರಿಗೆ ಸುವರ್ಣದಲ್ಲಿ ಜುಲೈ 17ಕ್ಕೆ ಸಂಜೆ 5.30ಕ್ಕೆ ಪ್ರೀಮಿಯರ್ ಆಗಲಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯ ವಿಶೇಷ ಅಭಿಯಾನವನ್ನು ಆಯೋಜಿಸಿದೆ. ಅದ್ರಂತೆ ಮಂತ್ರಿ ಮಾಲ್‌ನಲ್ಲಿ 'ಜೇಮ್ಸ್' ಸಿನಿಮಾದ ಸೆಲ್ಫಿ ಸ್ಟ್ಯಾಂಡೀಸ್ ನಿಲ್ಲಿಸಲಾಗಿದೆ. ಈ ಸ್ಟ್ಯಾಂಡಿಯಲ್ಲಿ ಸೆಲ್ಫಿ ತೆಗೆದು, ಫೇಸ್ ಬುಕ್ , ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಪೋಸ್ಟ್ ಮಾಡುವಂತೆ ಹೇಳಿದೆ.
ಜುಲೈ 16ರ ಮಧ್ಯಾಹ್ನ 12 ರಿಂದ ಸಂಜೆ 4ರವರೆಗೂ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮದ ಜೋಡಿಗಳು ಭಾಗಿಯಾಗಲಿದ್ದಾರೆ. 'ಜೇಮ್ಸ್' ಪ್ರೀಮಿಯರ್ ಸಂದರ್ಭದಲ್ಲಿ ಮತ್ತೆ ಅಪ್ಪು ಹಬ್ಬ ಆಚರಿಸುವ ಅವಕಾಶ ಸಿಗಲಿದೆ.


Click it and Unblock the Notifications











