69th Filmfare:ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ಪ್ರಸಾರ ಯಾವಾಗ? ಎಲ್ಲಿ?

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಸಮಾರಂಭ ಇತ್ತೀಚೆಗಷ್ಟೇ ನಡೆದಿತ್ತು. 2024ನೇ ಸಾಲಿನ 69ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಯನ್ನು ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ನೀಡಲಾಗಿದೆ.

ಈ ನಾಲ್ಕು ಭಾಷೆಯ ಸ್ಟಾರ್‌ಗಳು, ತಂತ್ರಜ್ಞರು ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. ಅದರಲ್ಲಿ ಕನ್ನಡದಲ್ಲೂ ಹಲವು ಪ್ರಮುಖ ಪ್ರಶಸ್ತಿಗಳು ಗಮನ ಸೆಳೆದಿವೆ. ಈ ಬಾರಿ ಫಿಲ್ಮ್‌ಫೇರ್ ಸೌತ್‌ ಪ್ರಶಸ್ತಿಯಲ್ಲಿ ಸಾಕಷ್ಟು ವಿಶೇಷತೆಗಳು ಇವೆ. ಕನ್ನಡ ಚಿತ್ರರಂಗದ ಲೆಜೆಂಡರಿ ಆಕ್ಟರ್, ಪ್ರಣಯರಾಜ ಶ್ರೀನಾಥ್‌ಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.

69th Filmfare south award program telecasting date time and where to watch

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಶ್ರೀನಾಥ್ ಸಲ್ಲಿಸಿದ 57 ವರ್ಷಗಳ ಸೇವೆಗಾಗಿ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಈ ಬಾರಿ ಅವರಿಗೆ ಲೈಫ್‌ ಟೈಮ್ ಅಚೀವ್ಮೆಂಟ್ ಅವಾರ್ಡ್‌ ಅನ್ನು ಕೊಟ್ಟಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಸಾಧನೆಯನ್ನು 69 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024ರನ್ನು ಇನ್ನೇನು ಕೆಲವೇ ದಿನಗಳಲ್ಲಿ ಕಿರುತೆರೆಯಲ್ಲಿ ಪ್ರಸಾರ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕನ್ನಡದ ಕಮರ್‌ ಫಿಲ್ಮ್‌ ಫ್ಯಾಕ್ಟರಿ ಕೂಡ ಈ ಫಿಲ್ಮ್ ಫೇರ್ ಅವಾರ್ಡ್ಸ್‌ ಸೌತ್‌ನಲ್ಲಿ ಪಾಲುದಾರಿಕೆ ಹೊಂದಿದೆ.

69th Filmfare south award program telecasting date time and where to watch

ಇನ್ನು ಅತ್ಯುತ್ತಮ ನಟ ವಿಭಾಗದಲ್ಲಿ ಕನ್ನಡದಿಂದ ರಕ್ಷಿತ್‌ ಶೆಟ್ಟಿಗೆ ಪ್ರಶಸ್ತಿ ಬಂದಿದೆ. ಅದೇ ರೀತಿ ತೆಲುಗಿನಲ್ಲಿ ನಾನಿಗೆ, ಮಲಯಾಳಂನಲ್ಲಿ ಮಮ್ಮುಟ್ಟಿಯವರಿಗೆ ಹಾಗೂ ತಮಿಳಿನಲ್ಲಿ ವಿಕ್ರಮ್ ಹಾಗೂ ನಿಮಿಷಾ ಸಜಯನ್ ಅವ್ರಿಗೆ ಪ್ರಶಸ್ತಿ ಬಂದಿದೆ. ಅದೇ ಅತ್ಯುತ್ತಮ ನಟಿ ವಿಭಾಗದಲ್ಲಿ ಕನ್ನಡದಲ್ಲಿ ನಟಿ ಸಿರಿ ರವಿಕುಮಾರ್‌, ತೆಲುಗಿನಿಂದ ಕೀರ್ತಿ ಸುರೇಶ್‌, ಮಲಯಾಳಂ ಸಿನಿಮಾ ವಿನ್ಸಿ ಆಲೋಷಿಯಸ್‌ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಫಿಲ್ಮ್ ಫೇರ್ ಅವಾರ್ಡ್ಸ್‌ ಸೌತ್‌ ಕಾರ್ಯಕ್ರಮವನ್ನು ನಾಲ್ಕು ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಏಷ್ಯಾನೆಟ್ ಮೂವೀಸ್‌ನಲ್ಲಿ ಸೆಪ್ಟೆಂಬರ್ 1 ರಂದು ಮಲಯಾಳಂ ಭಾಷೆಯಲ್ಲಿ ಪ್ರಸಾರ ಮಾಡಲಾಗಿದೆ. ಇನ್ನು ಕನ್ನಡದಲ್ಲಿ ಸೆಪ್ಟೆಂಬರ್ 8ರಂದು ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಸಾರ ಆಗಲಿದೆ.

ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಕನ್ನಡ ಪ್ರಸಾರ: 8ನೇ ಸೆಪ್ಟೆಂಬರ್ 2024, 3:00 PM ರಿಂದ 5:00 PM
ಸ್ಟಾರ್ ಮಾ ಮೂವೀಸ್‌ನಲ್ಲಿ ತೆಲುಗು ಪ್ರಸಾರ: 8ನೇ ಸೆಪ್ಟೆಂಬರ್ 2024, 6:00 PM ರಿಂದ 8:00 PM
ವಿಜಯ್‌ ಸೂಪರ್‌ನಲ್ಲಿ ತಮಿಳು ಪ್ರಸಾರ: 7ನೇ ಸೆಪ್ಟೆಂಬರ್ 2024, 4:00 PM ರಿಂದ 6:00 PM

More from Filmibeat

English summary
69th Filmfare south award program telecasting date time and where to watch
Read more about: filmfare awards filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X