'ಆಚಾರ್ಯ' ದುರಂತ ಸೋಲು: ಸ್ಯಾಟಲೈಟ್ ಡೀಲ್‌ನಲ್ಲಿ ಅರ್ಧದಷ್ಟು ಕಟ್!

ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ 'ಆಚಾರ್ಯ'. ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ ಈ ಸಿನಿಮಾದ ಸೋಲಿನಿಂದ ಹಲವರಿಗೆ ತಲೆ ನೋವಾಗಿದೆ.

'ಆಚಾರ್ಯ' ಸಿನಿಮಾ ಬಿಡುಗಡೆಯಾಗಿ ಸರಿಸುಮಾರು 2 ತಿಂಗಳು ಕಳೆದಿವೆ. ಆದರೂ ಒಂದಲ್ಲ ಒಂದು ವಿವಾದ ಈ ಸಿನಿಮಾ ಹಿಂದೆ ಸುತ್ತಿಕೊಳ್ಳುತ್ತಲೇ ಇದೆ. ಇತ್ತೀಚೆಗಿನ ಮಾಧ್ಯಮ ವರದಿಗಳ ಪ್ರಕಾರ, 'ಆಚಾರ್ಯ' ಸಿನಿಮಾ ಸ್ಯಾಟಲೈಟ್ ವ್ಯವಹಾರದಲ್ಲಿ ಗೊಂದಲವಾಗಿದೆ. ಅಲ್ಲದೆ ಟಿವಿ ಚಾನೆಲ್ ಒಂದು ನೀಡಲು ಒಪ್ಪಿದ ಹಣವನ್ನು ಅರ್ಧಕ್ಕೆ ಅರ್ಧ ಕಡಿತಗೊಳಿಸುವಂತೆ ಹೇಳಿದಯಂತೆ.

ಸ್ಯಾಟಲೈಟ್ ಹಕ್ಕಿನ ಗೊಂದಲವೇನು?

ಜನಪ್ರಿಯ ಮನೋರಂಜನಾ ವಾಹಿನಿಯೊಂದು 'ಆಚಾರ್ಯ' ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಸುದ್ದಿ ಹಬ್ಬಿತ್ತು. ರಾಮ್‌ ಚರಣ್ ಹಾಗೂ ಚಿರಂಜೀವಿಯಂತಹ ಇಬ್ಬರು ಮೇರು ನಟರು ಇದ್ದಿದ್ದರಿಂದ ದೊಡ್ಡ ಮೊತ್ತಕ್ಕೆ ಸ್ಯಾಟಲೈಟ್ ಹಕ್ಕು ಮಾರಾಟವಾಗಿತ್ತು ಎನ್ನಲಾಗಿದೆ.

Acharya Satellite Rights Contraversy: TV Channel Withdrawing Deal From Chiranjeevi

ಆದ್ರೀಗ, ಈ ಸಿನಿಮಾ ಬಾಲಿವುಡ್‌ನಲ್ಲಿ ಸೋತಿರುವುದರಿಂದ 'ಆಚಾರ್ಯ' ಸಿನಿಮಾ ಜಾಹೀರಾತು ನೀಡಲು ಯಾವುದೇ ಕಂಪನಿ ಮುಂದೆ ಬರುತ್ತಿಲ್ಲವಂತೆ. ಹಾಗಾಗಿ ಖರೀದಿ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ಕಡಿತಗೊಳಿಸಬೇಕು ಎಂದು ಪಟ್ಟು ಹಿಡಿದು ಕೂತಿದೆಯಂತೆ.

ಅರ್ಧದಷ್ಟು ಹಣ ಕಡಿಮೆ ಮಾಡಿ

'ಆಚಾರ್ಯ ಸಿನಿಮಾದ ಸ್ಯಾಟಲೈಟ್ ಹಕ್ಕು ಡೀಲ್ ಆದ ಸಮಯದಲ್ಲಿ ಕಾಜಲ್ ಅಗರ್ವಾಲ್ ಪ್ರಮುಖ ನಾಯಕಿಯಾಗಿದ್ದರು. ಹೀಗಾಗಿ ಈ ಸಿನಿಮಾಗೆ 15 ಕೋಟಿ ರೂ. ಹಣ ಬಿಡುಗಡೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಕಾಜಲ್ ಪಾತ್ರಕ್ಕೆ ಕತ್ತರಿ ಹಾಕಲಾಗಿತ್ತು. ಇದೂ ಕೂಡ ಪ್ರಮುಖ ಕಾರಣವಾಗಿದ್ಯಂತೆ.

'ಆಚಾರ್ಯ' ಗಾಗಿ ಒಪ್ಪಿಕೊಂಡಿದ್ದ 15 ಕೋಟಿ ರೂ ಹಣದ ಬದಲಾಗಿ ಕೇವಲ 7.5 ಕೋಟಿ ರೂ. ಕೊಡುವುದಾಗಿ ವಾಹಿನಿ ಬಹಿರಂಗಪಡಿಸಿದೆ ಎಂಬ ಸುದ್ದಿಯೊಂದು ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಈ ಮೊತ್ತ ಒಪ್ಪಿಗೆಯಾಗದೇ ಇದ್ದಿದ್ದರೆ 'ಆಚಾರ್ಯ' ಸ್ಯಾಟಲೈಟ್ ಹಕ್ಕನ್ನು ಹಿಂತಿರುಗಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎನ್ನಲಾಗಿದೆ.

ಆದರೆ 'ಆಚಾರ್ಯ' ಸಿನಿಮಾದ ಪರಿಸ್ಥಿತಿ ನೋಡಿ ವಾಹಿನಿಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಮಾತಿದೆ. ಕಾಜಲ್ ಅಗರ್‌ವಾಲ್‌ ಮುಂದಿಟ್ಟುಕೊಂಡು 7.5 ಕೋಟಿ ರೂ. ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಮಾತು ಕೇಳಿ ಬರುತ್ತಿದೆ.

More from Filmibeat

English summary
Acharya Satellite Rights Contraversy: TV Channel Withdrawing Deal From Chiranjeevi,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X