ರಾಣವ್ ಅಮ್ಮ ಫೋನ್ ಮಾಡಿ "ನನ್ನ ಮಗ ನಿನ್ ಲವ್ ಮಾಡ್ತಿದ್ದಾನಂತೆ" ಎಂದಿದ್ರು? ರಾಧಾ ಏನು ಹೇಳಿದ್ರು ಗೊತ್ತೇ?

ಕನ್ನಡ ಕಿರುತೆರೆಯ ಇಬ್ಬರು ನಟರು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಜೀ ಕನ್ನಡದ 'ಅಮೃತಧಾರೆ' ನಟ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ 'ಭಾರ್ಗವಿ ಎಲ್‌ಎಲ್‌ಬಿ' ನಟಿ ರಾಧಾ ಭಗವತಿ ಇಬ್ಬರೂ ಪ್ರೀತಿ ಮದುವೆ ಆಗುವುದಕ್ಕೆ ಸಜ್ಜಾಗಿದ್ದಾರೆ.

ರಾಧಾ ಭಗವತಿ ಹಾಗೂ ರಾಣವ್ ಗೌಡ ಇಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. 'ಅಮೃತಾಧಾರೆ' ಧಾರಾವಾಹಿಯಲ್ಲಿ ರಾಧಾ ಭಗವತಿ 'ಮಲ್ಲಿ'ಯ ಪಾತ್ರದಲ್ಲಿ ನಟಿಸುತ್ತಿದ್ದರು. ಇದೇ ಧಾರಾವಾಹಿಯಲ್ಲಿ 'ಜೈದೇವ್' ಪಾತ್ರದಲ್ಲಿ ರಾಣವ್ ಗೌಡ ನಟಿಸುತ್ತಿದ್ದಾರೆ. ರಾಧಾ 'ಮಲ್ಲಿ' ಪಾತ್ರವನ್ನು ತೊರೆದು 'ಭಾರ್ಗವಿ ಎಲ್‌ಎಲ್‌ಬಿ' ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Actor Raanav Gowda mother informed Radha Bhagavathi that her son in love with her

ಆದರೆ, ಇವರಿಬ್ಬರ ಲವ್ ಸ್ಟೋರಿಗೆ ಭದ್ರಬುನಾದಿಯಾಗಿದ್ದು 'ಅಮೃತಾಧಾರೆ' ಧಾರಾವಾಹಿ. ಈ ಸೀರಿಯಲ್ ಶೂಟಿಂಗ್ ವೇಳೆ ಇವರ ಪರಿಚಯ ಗಾಢವಾದ ಪ್ರೀತಿಗೆ ತಿರುಗಿತ್ತು. ಇಲ್ಲಿಂದ ಇವರ ಲವ್ ಸ್ಟೋರಿ ಶುರುವಾಗಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಇಬ್ಬರಲ್ಲೂ ಫೀಲಿಂಗ್ ಇದ್ದರೂ ಹೇಳುವುದಕ್ಕೆ ಒದ್ದಾಡುತ್ತಿದ್ದರು. ಆ ವೇಳೆ ರಾಧಾಗೆ ರಾಣವ್ ಅವರ ಅಮ್ಮ ಕರೆ ಮಾಡಿ "ನನ್ನ ಮಗ ನಿನ್ನ ಲವ್ ಮಾಡ್ತಿದ್ದಾನಂತೆ" ಅಂದಾಗ ರಾಧಾ ಭಗವತಿಯವರು ರಿಯಾಕ್ಷನ್ ಏನಾಗಿತ್ತು? ಅವರೇ ಖುದ್ದಾಗಿ 'ಅರಗಿಣಿ'ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಹೇಳಿಕೊಂಡಿದ್ದಾರೆ.

ರಾಣವ್ ಗೌಡ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಅವರ ಮುಗ್ಧ ಸ್ವಭಾವಕ್ಕೆ ರಾಧಾ ಕ್ಲೀಕ್ ಬೌಲ್ಡ್ ಆಗಿದ್ದರು. "ಅವರು ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿರಬಹುದು. ಆದರೆ, ರಿಯಲ್‌ ಲೈಫ್‌ನಲ್ಲಿ ಹಾಗಿಲ್ಲ. ಅವರು ನನಗೆ ಇಷ್ಟ ಆಗಿದ್ದೇ ಅದು. ಅವರ ಪಾಡಿಗೆ ಅವರು ಇರುತ್ತಿದ್ದರು. ಯಾರ ಹತ್ತಿರವೂ ಅಷ್ಟಾಗಿ ಮಾತಾಡುತ್ತಿರಲಿಲ್ಲ. ನನ್ನನ್ನು ನಾನೇ ನೋಡಿಕೊಂಡಂತೆ ಇತ್ತು. ತಿನ್ನುವುದಕ್ಕೆ ಏನಾದರೂ ಕೊಟ್ಟರೆ ಭಾರೀ ಖುಷಿ ಪಡುತ್ತಿದ್ದರು. ಆಟ ಆಡುವುದಕ್ಕೆ ಏನಾದರೂ ಸಿಕ್ಕರೆ, ಸುಮ್ಮನೆ ಆಟ ಆಡಿಕೊಂಡು ಕೂರುತ್ತಿದ್ದರು. ಅವರು ಒಂಥರಾ ಮಗು ಇದ್ದಂತೆ" ಎಂದು ರಾಧಾ ಭಗವತಿ ಹೇಳಿದ್ದಾರೆ.

Also Read
ಅಮೃತಧಾರೆಯಲ್ಲಿ ಒಲವಿನ ಧಾರೆ ; ರಾಣವ್ ಮತ್ತು ರಾಧಾ ಹಿನ್ನೆಲೆಯೇನು ? ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?
ಅಮೃತಧಾರೆಯಲ್ಲಿ ಒಲವಿನ ಧಾರೆ ; ರಾಣವ್ ಮತ್ತು ರಾಧಾ ಹಿನ್ನೆಲೆಯೇನು ? ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?

ಆರಂಭದಲ್ಲಿ ರಾಣವ್ ಅವರನ್ನು ಕಂಡರೆ ರಾಧಾಗೆ ಸಿಕ್ಕಾಪಟ್ಟೆ ಭಯ ಇತ್ತಂತೆ. ಮೊದಲು ಎರಡು ತಿಂಗಳು ಮಾತಾಡುತ್ತಲೇ ಇರಲಿಲ್ವಂತೆ. "ನಾನು ಅವರನ್ನು ಭೇಟಿ ಆದ ಆರಂಭದಲ್ಲಿ ಮಾತಾಡುತ್ತಲೇ ಇರಲಿಲ್ಲ. ಒಂದೂವರೆ ಎರಡು ತಿಂಗಳಾದ್ಮೇಲೆ ಫ್ರೆಂಡ್ಸ್ ಆದ್ವಿ. ಅವರಿಗೆ ಫೀಮೇಲ್ ಫ್ಯಾನ್ಸ್ ತುಂಬಾನೇ ಜನರು ಇದ್ದಾರೆ. ಸೆಟ್ಟಿನಲ್ಲಿ ಕೂಡ ಅವರಿಗೆ ಎಷ್ಟೋ ಜನ ಫ್ಯಾನ್ಸ್ ಇದ್ದರು. ಅವರನ್ನು ಮಾತಾಡಿಸೋಕೆ ಬರೋರು. ಆದರೆ, ಅವರು ಅಷ್ಟಾಗಿ ಮಾತಾಡಿಸೋಕೆ ಹೋಗುತ್ತಿರಲಿಲ್ಲ. ನಮ್ಮಿಬ್ಬರ ಮನಸ್ಥಿತಿ ಮ್ಯಾಚ್ ಆಗುತ್ತಿತ್ತು. ನಾವಿಬ್ಬರೂ ಮಾತಾಡಿಕೊಂಡು ಕೂರುತ್ತಿದ್ವಿ. ಇದನ್ನು ನೋಡಿ ಸೆಟ್ಟಿನವರು ಏನಾದರೂ ನಡೀತಿರಬಹುದಾ? ಅನ್ನೋ ರೀತಿ ನೋಡುತ್ತಿದ್ದರು. ಆದರೆ, ಆಗ ಏನೂ ಇರಲಿಲ್ಲ. ಅದಾದ್ಮೇಲೆ ನಾವು ಒಬ್ಬರನ್ನೊಬ್ಬರು ಇಷ್ಟ ಪಡುವುದಕ್ಕೆ ಶುರು ಮಾಡಿದ್ವಿ" ಎಂದು ಹೇಳಿದ್ದಾರೆ.

Actor Raanav Gowda mother informed Radha Bhagavathi that her son in love with her

ಇಬ್ಬರಿಗೂ ಒಳಗೊಳಗೆ ಇಷ್ಟವಿತ್ತು. ಆದರೆ, ಹೇಳಿಕೊಂಡಿರಲಿಲ್ಲ. ಆ ವೇಳೆ ಅವರ ಅಮ್ಮ ಮಾಡಿದ ಫೋನ್ ಕಾಲ್ ಲವ್ ಸ್ಟೋರಿಗೆ ದಿಕ್ಕು ತೋರಿಸಿತ್ತು. "ಒಂದು ದಿನ ಅವರ ಅಮ್ಮನಿಂದ ಒಂದು ಕಾಲ್ ಬಂತು. ರಾಧಾ ಏನು ಮಾಡುತ್ತಿದ್ದೀಯಾ? ಅಂದರು. ನಾನು ಹೊರಗಡೆ ಇದ್ದೀನಿ ಹೇಳಿ ಅಂದೆ. ನನ್ನ ಮಗ ನಿನ್ನನ್ನು ಲವ್ ಮಾಡುತ್ತಿದ್ದಾನಂತೆ ಅಂದರು. ನಾನು ಶಾಕ್ ಆಗ್ಬಿಟ್ಟೆ. ಅವರು ಬೇರೆ ಮಾರನೇ ದಿನಾನೇ ಹೋಗಿ ಜಾತಕ ನೋಡಿಸಿಕೊಂಡು ಬಂದರು. ಇದೆಲ್ಲ ಆದ್ಮೇಲೆ ರಾಣವ್ ಅವರೇ ಫೋನ್ ಮಾಡಿದರು. ಅವರಿಗೆ ನನ್ನ ಮೇಲೆ ಯಾವಾಗ ಫೀಲಿಂಗ್ ಇದೆ ಅಂತ ಗೊತ್ತಾಯ್ತೋ.. ಆಗ ನಾನೇ ಮೊದಲು ಪ್ರಪೋಸ್ ಮಾಡಿದೆ." ಎಂದು ರಾಧಾ ಭಗವತಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ನಾನೇ ನನಗೆ ನೀವಂದರೆ ಇಷ್ಟ ಅಂತ ಹೇಳಿದ್ದೆ. ಆಗ ಅವರೇ ಈಗ ಬೇಡ ಅಂತ ಒಂದಷ್ಟು ದಿನ ತಳ್ಳಿದರು. ಯಾಕಂದ್ರೆ, ಪ್ರಪೋಸ್ ಮಾಡಿದ ತಕ್ಷಣ ಒಪ್ಪಿಕೊಳ್ಳಬಾರದಲ್ವಾ? ಸ್ವಲ್ಪ ದಿನ ಆದ್ಮೇಲೆ ಅವರು ಪ್ರಮೋಸ್ ಮಾಡಿದರು. ಆಗ ನಾನು ಸ್ವಲ್ಪ ದಿನ ತಳ್ಳಿದೆ. ಯಾಕಂದ್ರೆ ಅವರು ಹಾಗೇ ಮಾಡಿದ್ರಲ್ಲ." ಎಂದು ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.

More from Filmibeat

English summary
Actor Raanav Gowda mother informed Radha Bhagavathi that her son in love with her.
Read more about: actress love story serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X